ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ

Must Read

ಮೂಡಲಗಿ : ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಅದರಲ್ಲೂ ಶಾಲಾ ಕಾಲೇಜುಗಳ ಆಸ್ತಿಯನ್ನು ಹಾಳು ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವದು ಎಂದು ಘಟಪ್ರಭಾ ಪೋಲಿಸ್ ಸ್ಟೇಷನ್ ಸಬ್‌ಇನ್ಸಪೆಕ್ಟರ್ ಎಮ್.ವಿ. ಮುರನಾಳ ಹೇಳಿದರು.

ಅವರು ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆೆದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಅವಧಿಯಲ್ಲಿ ಹಾಗೂ ಶಾಲಾ ಅವಧಿಯ ನಂತರ ಅನುಮತಿಯಿಲ್ಲದೇ ಅನಾವಶ್ಯಕ ವಾಗಿ ಯಾರೂ ಶಾಲಾ ಆವರಣದಲ್ಲಿ ಹೋಗುವಂತಿಲ್ಲ. ಹಾಗೂ ಸ್ಟಾರ್ ಗುಟಕಾ ತಿಂದು ಉಗುಳುವದಾಗಲಿ ಮದ್ಯ ಕುಡಿಯುವದಾಗಲಿ ಖಾಲಿ ಬಾಟಲಿಗಳನ್ನು ಒಗೆಯುವದಾಗಲಿ ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು. ವಿದ್ಯಾರ್ಥಿಗಳು ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ದೇಶ ಪ್ರೇಮ ದೇಶಭಕ್ತಿ ಬೆಳೆಸಿಕೊಂಡು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕೆಂದರು.

ಈ ಶಾಲೆಯ ವಾರದ ಅತಿಥಿ ಎಂಬ ವಿಶಿಷ್ಟ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು. ವಿದ್ಯಾರ್ಥಿಗಳು ಸಾಮಾಜಿಕವಾಗಿ ಏನಾದರೂ ತೊಂದರೆಯಾದಾಗ ೧೧೨ ನಂಬರಗೆ ಡಯಲ್ ಮಾಡಲು ಕರೆ ನೀಡಿದರು.

ಇನ್ನೋರ್ವ ಆರಕ್ಷಕರಾದ ರಾಮಕೃಷ್ಣ ಗಿಡ್ಡಪ್ಪಗೋಳ ಮಾತನಾಡಿ ಯಾವುದೇ ವಿದ್ಯಾರ್ಥಿನಿಯರು ಪೇಸ್ಬುಕ್, ಇನಸ್ಟಾಗ್ರಾಮ್, ವಾಟ್ಸಪ್ ಸಮಾಜಿಕ ಜಾಲತಾಣಗಳನ್ನು ಬಳಸುವಾಗ ತುಂಬಾ ಜಾಗೂರಕರಾಗಿರಬೇಕು ಎಂದರು. ಅದರಲ್ಲಿ ನಿಮ್ಮ ಮೂಲ ಭಾವಚಿತ್ರ ಪೋನ್ ನಂಬರ ಹಾಕಬೇಡಿ ಅವು ದುರುಪಯೋಗವಾಗಿ ನಿಮ್ಮ ಅಭ್ಯಾಸಕ್ಕೆ ಭವಿಷ್ಯಕ್ಕೆ ಕಂಟಕವಾಗಬಹುದು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವದರ ಮುಖಾಂತರ ನಿಮ್ಮ ಭವಿಷ್ಯ ಕಟ್ಟಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಶಾಲೆಯವತಿಯಿಂದ ಪೊಲೀಸ್ ಅಧಿಕಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ ಅದ್ಯಕ್ಷತೆ ವಹಿಸಿದ್ದರು.

ಶಿಕ್ಷಕ ಎಮ್.ಡಿ. ಗೋಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರದಲ್ಲಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ್, ಲಕ್ಷ್ಮಿ ಹೆಬ್ಬಾಳ, ಪುಷ್ಪಾ ಭರಮಧೆ, ರೂಪಾ ಹೂಲಿಕಟ್ಟಿ, ಪ್ರ‍್ರಿಯಾಂಕಾ.ಡಿ.ಕೆ. ಸುಜಾತ ಕೋಳಿ, ಭಾಗೀರಥಿ ಕಳ್ಳಿಗುದ್ದಿ, ವಾಸಂತಿ ಬೋರಗುಂಡಿ, ಎಮ್.ಡಿ.ಗೋಮಾಡಿ. ಬಿ.ಎನ್. ನಾಯ್ಕ, ಸೋವಶೇಖರ ವಾಯ್ ಆರ್., ಸಿ.ಎಸ್. ಸೀರಿ. ಹೊಳೆಪ್ಪಾ ಗದಾಡಿ, ಯಮುನಾ ಹಮ್ಮನವರ, ಶಿವಲೀಲಾ ಹಣಮನ್ನವರ, ಅನ್ನಪೂರ್ಣಾ ಹುಲಕುಂದ, ಖಾತೂನಬಿ ನದಾಫ, ಪವಿತ್ರಾ ಬಡಿದೇರ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group