ಸವದತ್ತಿಯಲ್ಲಿ ಕೋರೋನಾ ಕಟ್ಟು ನಿಟ್ಟಿನ ಕ್ರಮಗಳು

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಸವದತ್ತಿ – ಗಾಮೀಣ ಪ್ರದೇಶದ ಜನರೆ ಕೊರೋನಾ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಸರಕಾರ ಏನೆಲ್ಲ ಪ್ರಯತ್ನ ಮಾಡಿದರೂ ಸಹ ಗಾಮೀಣ ಪ್ರದೇಶದ ಜನರು ಮಾಸ್ಕ ಇಲ್ಲದೆ ತಿರುಗಾಡುತ್ತಿದ್ದಾರೆ ಅದರಂತೆ ವಯಸ್ಸಾದ ಮಹಿಳೆಯರು ಸಹ ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಪೋಲಿಸರನ್ನು ನೋಡಿದಾಗ ಮಾತ್ರ ಸೀರೆ ಸೆರಗನ್ನು ಮುಖಕ್ಕೆ ಕಟ್ಟಿಕೊಳ್ಳುತ್ತಾರೆ ನಂತರ ಅವರು ಹೋದ ಮೇಲೆ ಮತ್ತೆ ತೆಗೆದು ಬಿಡುತ್ತಿದ್ದಾರೆ. ಅಂಥವರಿಗೆ ಇಂದು ಪೋಲಿಸರು ಮತ್ತು ಪೌರಕಾರ್ಮಿಕರು ಬಿಸಿ ಮುಟ್ಟಿಸುವ ಕೆಲಸವನ್ನು ನಸುಕಿನ ಜಾವದಿಂದಲೆ ಶುರುಮಾಡಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸಂತೆ ನಡೆಯುತ್ತಿತ್ತು ಆದರೆ ಈ ದಿನ ಪೌರ ಕಾರ್ಮಿಕರು ಹಾಗೂ ತಾಲೂಕಾ ಆಡಳಿತವು ಮತ್ತು ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಂಗಳವಾರ 10 ಗಂಟೆಯಿಂದಲೇ ಕೊರೋನಾ ನಿಯಮ ಪಾಲಿಸಲು ರಸ್ತೆ ಬದಿ ಕುಳಿತು ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಚೌಕಾದ ಗೆರೆ ಹಾಕಿ ಅಲ್ಲಿಯೇ ಕುಳಿತು ವ್ಯಾಪಾರ ಮಾಡುವಂತೆ ಮತ್ತು ಸಾಮಾಜಿಕ ಅಂತರವನ್ನು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಕಡ್ಡಾಯವಾಗಿ ಪಾಲಿಸಲೇಬೇಕೆಂದು. ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸುತ್ತಿದ್ದಾರೆ.

ಬುಧವಾರ ಬೆಳಿಗ್ಗೆ 6 ಗಂಟೆಯಿಂದಲೇ ಪೊಲೀಸ ಹಾಗೂ ಪೌರ ಕಾರ್ಮಿಕರು ತಮ್ಮ ಕಾರ್ಯವನ್ನು ಪ್ರಾರಂಭಿಸಿದರು ಕಡಕೋಳ ಬ್ಯಾಂಕ್ ವೃತ್ತ ಎಪಿಎಮ್‍ಸಿ ಕ್ರಾಸ. ಆನಿ ಅಗಸಿ ಬಜಾರ ರೋಡ ಗಾಂಧೀ ಚೌಕ ,ಲಿಂಗರಾಜ ಸರ್ಕಲ್,ಗಳಲ್ಲಿ ನಿಂತು ಮಾಸ್ಕ ಇಲ್ಲದೇ ಸಂಚಾರ ಮಾಡುತ್ತಿರುವ ಜನರಿಗೆ ಬೈಕ ಸವಾರರಿಗೆ ವ್ಯಾಪಾರಸ್ಥರಿಗೆ ಯಾವುದೇ ಮುಲಾಜಿಲ್ಲದೆ ದಂಡ ಹಾಕಿದರು.

- Advertisement -

ಪೋಲಿಸರು ಮತ್ತು ಪುರಸಭೆಯವರು ವ್ಯಾಪಾರಸ್ಥರಿಗಾಗಿ ಮಾಡಿದ ಈ ಬದಲಾವಣೆ ಯಿಂದ ಟ್ರಾಪಿಕ್ ಜಾಮ್ ಆಗುವದಿಲ್ಲ ಮತ್ತು ವಾಹನಗಳಿಗೆ ಸಂಚಾರಕ್ಕೆ ಒಂದೇ ಮಾರ್ಗ[ ಒನ್ ವೇ ] ಮಾಡಿದ್ದರಿಂದ ಜನದಟ್ಟಣೆ ಆಗದಂತೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಪಿಎಸ್‍ಐ ನಿಂಗಪ್ಪ ಪೂಜಾರಿ, “ಮಹಾಮಾರಿ ಕೋರೋನಾ ರೋಗವನ್ನು ತಡೆಗಟ್ಟುವಲ್ಲಿ ನಮ್ಮ ಪೋಲಿಸ ಇಲಾಖೆ ಮತ್ತು ಪುರಸಭೆಯವರು ಸೇರಿ ಮಂಗಳವಾರ ರಾತ್ರಿಯಿಂದಲೇ ಬೀದಿ ಬದಿ ವ್ಯಾಪಾರಸ್ಥರಿಗೆ ಸುಣ್ಣದ ಚೌಕಾಕಾರದ ಗೆರೆ ಹಾಕಿ ಅಲ್ಲಿಯೇ ಕುಳಿತು ವ್ಯಾಪಾರ ಮಾಡಲು ಅವಕಾಶ ಮಾಡಿದ್ದೇವೆ ಈ ವ್ಯವಸ್ಥೆಯು ನಿರಂತರವಾಗಿ ನಡೆಸಲಾಗುತ್ತದೆ.

ಮಾಸ್ಕ ಧರಿಸದೆ ಹಾಗೇ ತಿರುಗಾಡುತ್ತಿದ್ದವರಿಗೆ ಈಗ ದಂಡಹಾಕಿ ಬಿಡುತ್ತಿದ್ದೇವೆ ಇನ್ನೂ ಮುಂದೆ ಮಾಸ್ಕ ಇಲ್ಲದೆ ತಿರುಗಾಡುತ್ತಿದ್ದವರಿಗೆ ಕಾನೂನಿನ ಪ್ರಕಾರ ಪ್ರಕರಣವನ್ನು ದಾಖಲಿಸುವುದನ್ನು ಮಾಡಲಾಗುವುದು

ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ಥಳೀಯ ಯುವ ಮುಖಂಡರಾದ ಪ್ರವೀಣಕುಮಾರ ಬ ಅವಗಡನವರ. “ಕೋರೋನಾ ರೋಗವನ್ನು ತಡೆಯುವುದು ಪೋಲಿಸ ಅಧಿಕಾರಿಗಳ ಪುರಸಭೆಯ ಸಿಬ್ಬಂದಿಗಳಿಗಷ್ಟೆ ಅಲ್ಲ ಇದರಲ್ಲಿ ಸಾರ್ವಜನಿಕರ ಪಾತ್ರವು ಬಹು ಮುಖ್ಯವಾಗಿದೆ.

ಮುಖಕ್ಕೆ ಮಾಸ್ಕ ಹಾಕುವದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ನಮ್ಮ ಜೀವ ಉಳಿಸಿಕೊಳ್ಳುವುದರ ಜೊತೆಗೆ ಮತ್ತೊಬ್ಬರ ಜೀವವನ್ನೂ ಉಳಿಸಿದಂತಾಗುತ್ತದೆ ಆದ್ದರಿಂದ ಎಲ್ಲರೂ ಕೊರೋನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಒಟ್ಟಾರೆ ಬುಧವಾರ ತರಕಾರಿ ಸಂತೆಯ ದಿನವಾಗಿದ್ದರಿಂದ ಹೊರ ಊರುಗಳಿಂದ ವ್ಯಾಪಾರ ವಹಿವಾಟು ನಡೆಸುವವರು ಮತ್ತು ಸ್ಥಳೀಯವಾಗಿ ವ್ಯಾಪಾರಕ್ಕೆ ಆಗಮಿಸುವ ಜನರಿಗೂ ಕೋರೋನಾ ಸಲುವಾಗಿ ಪುರಸಭೆಯವರು ಮತ್ತು ಪೋಲಿಸ್ ಇಲಾಖೆಯವರು ಕೈಗೊಂಡ ಈ ಕ್ರಮ ನಿಜಕ್ಕೂ ಉತ್ತಮವಾಗಿತ್ತು.

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!