ಜಳಗಾಂವ – ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸುವ ಸಲುವಾಗಿ ಸರ್ಕಾರ ಕಾನೂನು ಮರು ರಚನೆಗೆ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಹಾರಾಷ್ಟ್ರದ ಜಳಗಾಂವನಲ್ಲಿ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಲಖಪತಿ ದೀದಿ ಯೋಜನೆಯ ಯಶಸ್ಸಿನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ಮಹಿಳೆಯರ ವಿರುದ್ಧದ ಶೋಷಣೆ ನಿಲ್ಲಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗಿದೆ ಈ ಸಮಾಜದಲ್ಲಿನ ಈ ಮಾನಸಿಕತೆಯನ್ನು ಹೋಗಲಾಡಿಸುವವರೆಗೂ ನಾವು ನಿಲ್ಲುವ ಮಾತೇ ಇಲ್ಲ ಎಂದರು.
ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಹತ್ಯಾಚಾರದ ಘಟನೆಯ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಯ ಕಾನೂನು ಇನ್ನಷ್ಟು ಬಿಗಿಗೊಳಿಸುವ ಸರ್ಕಾರದ ಉದ್ದೇಶವನ್ನು ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು ಪ್ರತಿವರ್ಷ ಒಂದು ಲಕ್ಷ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಹೀಗೆ ನೀಡಲಾದ ಅನುದಾನ ೯ ಲಕ್ಷ ಕೋಟಿಯಾಗಿದೆ ಎಂದರು.
ಲಖಪತಿ ದೀದಿ ಯೋಜನೆಯ ಫಲಾನುಭವಿ ಮಹಿಳೆಯರ ಬೃಹತ್ ಸಭೆಯಲ್ಲಿ ಮೋದಿ ಭಾಗವಹಿಸಿ ಮಾತನಾಡುತ್ತ, ಮಹಾರಾಷ್ಟ್ರದ ಬಿಜೆಪಿ- ಶಿವಸೇನಾ ಸರ್ಕಾರವು ರಾಜ್ಯದ ಅಭಿವೃದ್ಧಿ ಗೆ ಕೆಲಸ ಮಾಡುತ್ತಿದೆ.