ಬೀದರ – ನಮ್ಮನ್ನು ಬಿಟ್ಟು ಹೋಗ ಬೇಡಿ ಮೇಡಂ ಎಂದು ನಿವೃತ್ತ ಶಿಕ್ಷಕಿಯನ್ನು ತಬ್ಬಿಕೊಂಡು ಗಳಗಳನೆ ಅತ್ತ ವಿದ್ಯಾರ್ಥಿನಿಯರು
೮ ವರ್ಷ ಕನ್ನಡ ಶಿಕ್ಷಿಕಿಯಾಗಿ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕನ್ನಡ ಶಿಕ್ಷಕಿ ವೇದಾವತಿ ಮಠಪತಿ ಎಂಬ ಶಿಕ್ಷಕಿ ಸೇವಾ ನಿವೃತ್ತಿ ಹೊಂದಿ ಶಾಲೆ ಬಿಡುವಾಗ ಮಕ್ಕಳು ಅವರನ್ನು ತಬ್ಬಿ ಗಳಗಳನೇ ಅತ್ತರು.
ನಾನು ಮತ್ತೆ ನಿಮ್ಮ ಶಾಲೆಗೆ ಬರುತ್ತೇನೆ ಯಾರೂ ಕಣ್ಣೀರು ಹಾಕಬೇಡಿ ಎಂದು ಶಿಕ್ಷಕಿ ವಿದ್ಯಾರ್ಥಿನಿಯರನ್ನು ಸಮಾಧಾನಪಡಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ

