spot_img
spot_img

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

Must Read

spot_img
- Advertisement -

ಬೈಲಹೊಂಗಲ: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು‌ ತಾಲೂಕಿನ ಮರಡಿನಾಗಲಾಪೂರ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಸವರಾಜ ಹುಡೇದ ಹೇಳಿದರು.

ಪ್ರೊ. ಸಿದ್ಧಣ್ಣ ಲಂಗೋಟಿ ಅವರ ‘ಮಹಾನ್ ದಾರ್ಶನಿಕ ಬಸವಣ್ಣ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಶರಣರು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಸಾರ್ಥಕ ಬದುಕು ಸಾಗಿಸಿದ್ದಾರೆ. ಸರಳ, ಸಾತ್ವಿಕ ವಚನಗಳ ಮೂಲಕ ಶ್ರೇಷ್ಠ ಸಂದೇಶಗಳನ್ನು ನೀಡಿದ್ದಾರೆ. ಅವರ ಆದರ್ಶ, ತತ್ವ, ಸಿದ್ದಾಂತಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಅವರು ಅಭಿಪ್ರಾಯಪಟ್ಟರು.

- Advertisement -

ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಉದ್ಯೋಗಿ, ಬಸವ ಸಮಿತಿಯ ಬಸವ ಪಥ ಸದಸ್ಯರಾದ ಬೀರಪ್ಪ ಕಂಕನವಾಡಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಈ ಗ್ರಂಥ ಅತ್ಯಂತ ಉಪಯುಕ್ತವಾಗಿದೆ ಎಂದರು.

ಮಕ್ಕಳು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಉತ್ತಮ ಆಲೋಚನೆಗಳು ಹೊರಹೊಮ್ಮುತ್ತವೆ. ಇದರಿಂದ ಬದುಕಿನಲ್ಲಿ ಸಾಧನೆ ಮಾಡಲು ಸ್ಫೂರ್ತಿ ದೊರೆಯುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಕಾಯಕ, ದಾಸೋಹ ತತ್ವಗಳನ್ನು ಜಗತ್ತಿಗೆ ಸಾರಿದ ಶರಣರ ನಡೆ ನುಡಿ ಎರಡೂ ಒಂದೇ ಆಗಿದ್ದವು ಎಂದು ಹೇಳಿದರು. ‘ಮಹಾನ್ ದಾರ್ಶನಿಕ ಬಸವಣ್ಣ’ ಕೃತಿಯು ಬಸವಣ್ಣನವರ ಜೀವನ, ಸಾಧನೆ, ವಿಚಾರಗಳನ್ನೊಳಗೊಂಡ ಮೌಲಿಕ ಗ್ರಂಥವಾಗಿದೆ. ಲೇಖಕರ ದೃಷ್ಟಿಕೋನದ ಜೊತೆಗೆ ಅನೇಕ ಹಿರಿಯ ಸಾಹಿತಿಗಳ ಸಾಹಿತ್ಯಕ ಸಲಹಾ ಉಪಸಮಿತಿ ರಚಿಸಿ ಅವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದು ಈ ಗ್ರಂಥದ ವಿಶೇಷತೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ಶಿಕ್ಷಕರಾದ ಟಿ.ಜಿ.ಮೇರಿ, ಎಸ್.ಎಂ.ವಿವೇಕಿ, ಎ.ಎಚ್.ಕಲಕುಟಗಿ, ಅರ್.ಸಿ.ಮೋಟೆ, ಸವಿತಾ ನರಸಣ್ಣವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಬಿ.ಎನ್. ತಲ್ಲೂರ್ ಸ್ವಾಗತಿಸಿದರು. ಬಿ.ಎ. ಜಾಬಗೌಡರ ವಂದಿಸಿದರು. ಶಿವಾನಂದ ಕುರಿ ನಿರೂಪಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group