spot_img
spot_img

ವಿದ್ಯಾರ್ಥಿಗಳು ಸತತ ವಿದ್ಯಾಭ್ಯಾಸ ಮಾಡಲು ಮುಂದಾಗಬೇಕು

Must Read

- Advertisement -

ಸಿಂದಗಿ: ವಿದ್ಯಾರ್ಥಿಗಳಿಗೆ ಸಂಸ್ಕಾರ- ವಿದ್ಯೆ ಕಲಿಸಲು ಗುರುವಿನ ಜೊತೆ ಪಾಲಕರು ಮುಂದಾಗಬೇಕು ಅವರ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಗುರು ಹಿರಿಯರ ಅನುಭಾವದ ನುಡಿಗಳನ್ನು ಕೇಳಿಸುವುದರಿಂದ ಅವರ ಮುಂದಿನ ಬದುಕು ಸುಂದರವಾಗುತ್ತದೆ ಎಂದು ಶಿಕ್ಷಕ ಸಾಹಿತಿ ಬಸವರಾಜ ರಾ ಅಗಸರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ 2021-22 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸತತ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ .ಅಕ್ಷರ ಅರಿವಿನ ಜ್ಞಾನದ ಮೂಲಕ ತಾವು ಸಂಪಾದಿಸಿದ ವಿದ್ಯಾ ಭಂಡಾರ ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದರು.

ತಾಲೂಕಿನ ನಾಗಾವಿ ಬಿ ಕೆ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಬಿ.ಎಮ್ ಮೂಲಿ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬಹಳ ಸರಳ ಸುಸೂತ್ರವಾಗಿ ಆತ್ಮವಿಶ್ವಾಸದಿಂದ ಬರೆಯಲು ತಿಳಿಸುತ್ತಾ ವಾರ್ಷಿಕ ಪರೀಕ್ಷೆಯಲ್ಲಿ ಗಣಿತ ವಿಷಯಕ್ಕೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 1001 ರೂಪಾಯಿ ನಗದು ಹಣ ನೀಡುವುದಾಗಿ ವಾಗ್ದಾನ ಮಾಡಿದರು.

- Advertisement -

ಜೊತೆಗೆ ಇದೇ ಸಮಯದಲ್ಲಿ ಶಾಲೆಯ ಗಣಿತ ಶಿಕ್ಷಕಿ ಸಂಗೀತ ಕೆ. ಅವರು ಕೂಡ 1001 ರೂಪಾಯಿ ನಗದನ್ನು ವಾಗ್ದಾನ ಮಾಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಸ್ ನರಗೋದಿ ಅವರು ವಿದ್ಯಾರ್ಥಿಗಳಿಗೆ ಸತತ ಪ್ರಯತ್ನವೇ ಸಾಧನೆಯ ಮೆಟ್ಟಿಲು ಎಂಬ ಕಿವಿಮಾತನ್ನು ಹೇಳುವುದರೊಂದಿಗೆ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ತೃಪ್ತಿದಾಯಕವಾಗಿ ನಿರ್ವಹಿಸಿದ ಶಾಲೆಯ ಎಲ್ಲಾ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಶಿವಾನಂದ ಶಹಾಪೂರ ಮಾತನಾಡಿ ,ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕಗಳ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಗುರುಹಿರಿಯರಿಗೆ ಗೌರವವನ್ನು ಸೂಚಿಸುತ್ತ ತಂದೆ-ತಾಯಿ ಬಂಧು-ಬಳಗ ಸಂಬಂಧಿಗಳನ್ನು ಪ್ರೀತಿಸುತ್ತ ಭಾವಿ ಜೀವನ ಬೆಳೆಸಿಕೊಳ್ಳಿ ಎಂದು ಹೇಳುತ್ತಾ ಪೂರ್ಣ ವರ್ಷದಲ್ಲಿ ಶಾಲೆಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಸಿಬ್ಬಂದಿ ವರ್ಗದವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

- Advertisement -

ಈ ಸಮಾರಂಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಶಾಲೆಯ ಹಿರಿಮೆ,ಶಿಕ್ಷಕರ ಕೊಡುಗೆ ಹಾಗೂ ತಮಗೆ ಸಿಕ್ಕಿರುವ ಪ್ರೋತ್ಸಾಹದ ಬಗ್ಗೆ ಅತಿ ಭಾವುಕರಾಗಿ ಮಾತನಾಡಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ಓದಿನ ಬಗ್ಗೆ ಸಂದೇಶಗಳನ್ನು ನೀಡಿದರು.

ಹಿರಿಯ ಶಿಕ್ಷಕಿಯರಾದ ಶ್ರೀಮತಿ ವಿ.ಕೆ ಕುಲಕರ್ಣಿ ತಮ್ಮ ವೃತ್ತಿ ಜೀವನದ ಅನುಭವಗಳನ್ನು ತಿಳಿಸುತ್ತಾ ಇದೇ ವರ್ಷದ ಏಪ್ರಿಲ್ 30ಕ್ಕೆ ನಿವೃತ್ತಿ ಆಗುತ್ತಿರುವ ವಿಷಯವನ್ನು ತಿಳಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ಗುರು ಮಾತೆಯರಿಗೆ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಅತಿಥಿ ಶಿಕ್ಷಕ ತೋಟಪ್ಪ ಪೂಜಾರಿ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ 1001 ರೂ ನಗದು ಘೋಷಣೆ ಮಾಡಿದರು. ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶರಣಬಸವ ಲಂಗೋಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮರಾಜ ಬಿ ಎಡ್ ಪ್ರಶಿಕ್ಷಣಾರ್ಥಿಗಳನ್ನು ಮುಂದಿನ ಭಾವಿ ಜೀವನದಲ್ಲಿ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಹಾಗೆಯೇ ಒಬ್ಬ ಒಳ್ಳೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಎಂದು ಹಾರೈಸಿ ಬೀಳ್ಕೊಡಲಾಯಿತು. ಶ್ರೀಮತಿ ಸಂಗೀತ ಕೆ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಅವಟಿ ಸ್ವಾಗತಿಸಿದರು. ಎಸ್ ಎಸ್ ಕೇಸರಿ ವಂದಿಸಿದರು.

ವಿಜಯಪುರದ ವಕೀಲ ದಾವಲ್ ಸಾಬ್ ಯರನಾಳ, ಗೀತಾ ಅಥಣಿ, ಶೋಭಾ ಕೊಳೇಕರ್, ಶ್ರೀಮತಿ ಸುನಂದಾ ರಾಮಾಂಜನೇಯ ಕೊಡತೆಲ ,ಶ್ರೀಮತಿ ಜಿ.ಎಲ್ ಬಡಿಗಿ ಹಾಗೂ ಪಾಲಕ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group