ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು – ರಮೇಶ ಪೂಜಾರಿ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸಿಂದಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಪತ್ರಕರ್ತ ರಮೇಶ ಪೂಜಾರಿ ಹೇಳಿದರು.

ಪಟ್ಟಣದ ಎಂ.ಎಸ್.ಗುರುಕುಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ “ಗುರು ಪೂರ್ಣಿಮಾ” ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗುರು ಅಂಧಃಕಾರವನ್ನು ಹೋಗಲಾಡಿಸುತ್ತಾನೆ, ಗುರು ಪ್ರತಿಯೊಬ್ಬರ ಜೀವನವನ್ನು ಉದ್ದಾರ ಮಾಡುತ್ತಾನೆ, ಒಬ್ಬ ವಿದ್ಯಾರ್ಥಿಯು ಅತೀ ಹೆಚ್ಚು ಅಂಕ ಗಳಿಸಿದಾಗ ಮಾತ್ರ ಗುರುವಿಗೆ ಅವರ ನಮನ ಸಲ್ಲುತ್ತದೆ ಎಂದರು.

ಪ್ರಾಚಾರ್ಯ ಆರ್.ವಿ.ಭಿಂಗೆ ಮಾತನಾಡಿ, ಜಗತ್ತಿನ ಮೊದಲ ಗುರುಕುಲ ಶಿಕ್ಷಣ ಪದ್ದತಿಯ ಆರಂಭ ಭಾರತದಲ್ಲಿ ಪ್ರಾರಂಭವಾಯಿತು ಅಂದಿನಿಂದ ಇಂದಿನವರೆಗೆ ಗುರುಪೂರ್ಣಿಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಗುರುಕುಲ ಪರಂಪರೆ ನಿರ್ಮಾತೃ ದೇಶ ಭಾರತವಾಗಿದೆ ಎಂದರು.

- Advertisement -

ಪ್ರಪಂಚಕ್ಕೆ ಭಾರತವು ಮಹಾನ್ ಗುರುಗಳಾದ ದ್ರೋಣ, ಬುದ್ದ, ಮಹಾವೀರ, ಗುರುನಾನಕ, ಬಸವಣ್ಣ, ಕನಕದಾಸ, ಪುರಂದರದಾಸ, ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ ಕಲಾಂ ರಂತಹ ಶ್ರೇಷ್ಠ ಗುರುಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ಅಂಜುಮನ್ ಪ್ರೌಢಶಾಲೆಯ ಶಿಕ್ಷಕ ಸೇವೆ ಸಲ್ಲಿಸಿ ನಿವೃತ್ತರಾದ ಜೆ.ಎಸ್. ಬಾಗವಾನ ಅವರನ್ನು ಸನ್ಮಾನಿಸಲಾಯಿತು. ಅವರು, ಒಬ್ಬ ತೃಪ್ತ ಶಿಕ್ಷಕ ರಾಷ್ಟ್ರದ ರಕ್ಷಕನಾಗುತ್ತಾನೆ. ಒಬ್ಬ ಅತೃಪ್ತ ಶಿಕ್ಷಕ ರಾಷ್ಟ್ರದ ಭಕ್ಷಕನಾಗುತ್ತಾನೆ. ಶಿಕ್ಷಕರು ಪ್ರತಿದಿನ ಹಲವಾರು ಗ್ರಂಥಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ಪಾಠ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿ.ಎಸ್.ಪೂಜಾರಿ, ಎಂ.ಜೆ ಬಾಗವಾನ, ಎಸ್.ಬಿ.ಪಾಟೀಲ, ಬಿ.ಎಸ್.ಪಾಟೀಲ ಉಪನ್ಯಾಸಕರು ಹಾಗೂ ಪಾಲಕರ ಪ್ರತಿನಿಧಿ ಭೀಮರಾಯ ಚನ್ನೂರ ಅವರು ಉಪಸ್ಥಿತರಿದ್ದರು.

ಆರ್.ಎಸ್.ಗಾಯಕವಾಡ ಸ್ವಾಗತಿಸಿದರು, ಎಸ್.ಸಿ ದುದ್ದಗಿ ನಿರೂಪಿಸಿದರು. ಪ್ರವೀಣ ಎಂ.ಚಬ್ಬಿ ವಂದಿಸಿದರು.

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!