spot_img
spot_img

ಗುರಿಯೊಂದಿಗೆ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು – ನಾಗಣಸೂರ ಸರ್

Must Read

- Advertisement -

ಸಿಂದಗಿ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಜೀವನದಲ್ಲಿ ಏನಾಗಬೇಕೆಂಬ ಗುರಿಯೊಂದಿಗೆ ಸತತ ಅಭ್ಯಾಸ ಮಾಡುವುದರ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಲೆಯ ಮುಖ್ಯಗುರು ಎಚ್ .ಎಸ್ ನಾಗಣಸೂರ ಹೇಳಿದರು.

ತಾಲೂಕಿನ ಯಂಕಂಚಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಣ್ಣು ಮಕ್ಕಳ ಶಾಲೆಯ 2021 22 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಲಿಕೆಗೆ ವಿದ್ಯಾರ್ಥಿ ಜೀವನವೆ ಹದಗಾಲವಾಗಿದ್ದು ಈ ಸಮಯದಲ್ಲಿ ಉತ್ತಮವಾಗಿ ಅಭ್ಯಾಸ ಮಾಡುವುದರ ಮೂಲಕ ಭವಿಷ್ಯದಲ್ಲಿ ಗುರಿಯನ್ನು ಸಾಧಿಸಬಹುದಾಗಿದೆ ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ ಎಂದು ಹಾರೈಸಿದರು.

ಜಿ.ಎಸ್. ಗೌಡರ ಮಾತನಾಡಿ, ವಿದ್ಯಾರ್ಥಿಗಳು ಸತತ ವಿದ್ಯೆ ಬುದ್ದಿ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದರು.

- Advertisement -

ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸುಂದರವಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

7 ನೇ ತರಗತಿ ವಿದ್ಯಾರ್ಥಿನಿಯಾದ ಮುಸ್ಕಾನ ಮತ್ತು ಮಲ್ಲಮ್ಮ, ಐಶ್ವರ್ಯ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ನೆರವೇರಿತು.

ರೂಪಾ ಒಡೆಯರ್ ಮತ್ತು ಸಂಗಡಿಗರಿಂದ ಒಂದು ಆಂಗ್ಲಭಾಷೆಯಲ್ಲಿ ನಾಟಕವನ್ನು ಮಾಡಿಸಲಾಯಿತು. ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್, ಗೋಣಿಚೀಲ ಆಟವಾಡಿಸಿ, ಈಜಿ ಲೆಟರ್ಸ್ ಮತ್ತು ವಿಜ್ಞಾನಿಗಳಿಗೆ ಸಂಬಂಧಿಸಿದ ಪುಸ್ತಕದೊಂದಿಗೆ ಪ್ರಶಸ್ತಿಪತ್ರ ಹಾಗೂ ಭಾಗವಹಿಸಿದವರಿಗೆಲ್ಲರಿಗೂ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು.

- Advertisement -

ಕೆ.ಎಸ್ ಬಡದಾಳೆ ಸ್ವಾಗತಿಸಿದರು. ಸಹಶಿಕ್ಷಕಿ ಅರ್ಚನಾ. ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನ್ನಪೂರ್ಣ ಗೋಣಿ ವಂದಿಸಿದರು.

ಶಿಕ್ಷಕಿಯರಾದ ಎ.ಜಿ.ಕುಲಕರ್ಣಿ. ಎಂ.ಎಂ.ಹಿರೇಮಠ. ಕೆ.ಎಸ್.ಬಡದಾಳೆ. ಎಸ್ ಎಸ್ ಪತ್ತಾರ. ಜೆ.ಎಸ್.ಉಪ್ಪಾರ. ಬಿ.ಬಿ.ಸಜ್ಜನ. ಜೆ.ಎಸ್ ಸಾಲಿ ಭಾಗವಹಿಸಿದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group