spot_img
spot_img

ವಿದ್ಯಾರ್ಥಿಗಳು ಬೆಳೆಯುವ ಸಂಸ್ಕೃತಿಗೆ ವಾರಸುದಾರರಾಗಬೇಕು – ಸಂಗಮನಾಥ

Must Read

ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಸ್ಕೃತಿ ದೊಡ್ಡದು. ಸಂಪತ್ತು ಸ್ಥಾವರ ವಾದರೆ ಸಂಸ್ಕೃತಿ ಜಂಗಮ.ವಿದ್ಯಾರ್ಥಿಗಳು ಅಳಿಯುವ ಸಂಪತ್ತಾಗುವದಕ್ಕಿಂತ ಬೆಳೆಯುವ ಸಂಸ್ಕೃತಿಗೆ ವಾರಸುದಾರರಾಗಬೇಕೆಂದು ಬೈಲಹೊಂಗಲದ ಕೆ ಆರ್ ಸಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಸಂಗಮನಾಥ ಲೋಕಾಪೂರ ಹೇಳಿದರು.

ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ವಿದ್ಯಾನ್ವೇಷಣೆಗೆ ತೊಡಗಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಡುವ ಬಡತನ ಮತ್ತು ದಾರಿದ್ರ್ಯ ಗಳಿಗೆ ಎಂದಿಗೂ ಹೆದರಬಾರದು.ಆತ್ಮ ಸ್ಥೈರ್ಯ ದಿಂದ ಇವುಗಳನ್ನು ಎದುರಿಸುವ ಮೂಲಕ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕಿನ ನಿರ್ಮಾಣದತ್ತ ಗಮನ ಹರಿಸಲು ಸನ್ನದ್ಧರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇನ್ನೋರ್ವ ಅತಿಥಿ ಡಾ.ಎಚ್ ಆಯ್ ತಿಮ್ಮಾಪುರ ಮಾತನಾಡಿ ವಿದ್ಯಾರ್ಥಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿದಾಗ ಮಾತ್ರ ಜಗತ್ತಿನ ಮಹಾನ್ ವ್ಯಕ್ತಿಗಳಾಗಲು ಸಾಧ್ಯ ವೆಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕರಾದ  ಬೆಳಕೂಡರು ಮಾತನಾಡಿ ಹಿರಿಯರನ್ನು ಗೌರವಿಸುವ ಕಿರಿಯರನ್ನು ಬೆಳೆಸುವ ವಿಶಾಲ ಹೃದಯ ನಿರ್ಮಿಸುವ ಶಿಕ್ಷಣದ ಅವಶ್ಯಕತೆ ನಮಗಿದೆ ಎಂದರು.

ಸಂಸ್ಥೆಯ ಚೇರ್ಮನ್ ರಾದ ಬಸಗೌಡ ಎಸ್ ಪಾಟೀಲರು ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ಸಮಸ್ತ ಸಿಬ್ಬಂದಿವರ್ಗ ಹಾಗೂ ಅಪಾರವಾದ ವಿದ್ಯಾರ್ಥಿ ಸ್ತೋಮ ಸಮಾರಂಭಕ್ಕೆ ಸಾಕ್ಷೀಭೂತರಾಗಿದ್ದರು.

ಅಕ್ಕಮಹಾದೇವಿ ಮಾದರ ಪ್ರಾರ್ಥನೆ ಸಲ್ಲಿಸಿದರು. ಶೈಕ್ಷಣಿಕ ಸಲಹೆಗಾರ ಕೆ.ಎನ್.ಸಂಗಮ ಸ್ವಾಗತಿಸಿದರು.

ಆಡಳಿತಾಧಿಕಾರಿ ಡಾ.ಸುರೇಶ ಹನಗಂಡಿ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೊ. ಶಂಕರ ನಿಂಗನೂರ ಕಾರ್ಯಕ್ರಮ ನಿರೂಪಿಸಿದರು.

ಪ್ರಾ. ಎಸ್.ಬಿ.ಅಂಗಡಿ ವಂದನೆ ಸಲ್ಲಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!