ಸಿಂದಗಿ – ಗ್ರಂಥಾಲಯ, ಗ್ರಂಥಾಲಯದ ಉಪಯೋಗ, ಗ್ರಂಥಾಲಯ ಹೇಗಿರಬೇಕು ಎಂಬ ಹಲವಾರು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳಬೇಕು, ಸ್ಪರ್ಧಾತ್ಮಕ ಪರೀಕ್ಚೆಗಳಿಗೆ ಪೂರಕವಾಗುವ ಪುಸ್ತಕಗಳು ದಿನಪತ್ರಿಕೆಗಳ ಅಧ್ಯಯನ ಮಾಡಬೇಕು ಎಂದು ವಿಶ್ರಾಂತ ಗ್ರಂಥಪಾಲಕರಾದ ಎಸ್.ಎಮ್.ಕುಂಬಾರ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿಂದಗಿ ಪಟ್ಟಣದ ಟಿ.ಎಸ್.ಪಿ ಮಂಡಳಿ ಸಂಸ್ಥೆಯ ಸಿ.ಎಮ್.ಮನಗೂಳಿ ಕಲಾ, ವಿಜ್ಷಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ.ಎಸ್.ಆರ್.ರಂಗನಾಥ ರವರ ಸ್ಮರಣಾರ್ಥ ರಾಷ್ಟೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಬಿ.ಜಿ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಧನೆಗೆ ಅಧ್ಯಯನ ಅತಿ ಅವಶ್ಯವಾಗಿದೆ ಗ್ರಂಥಾಲಯದಲ್ಲಿ ಕನಿಷ್ಠ ೬.೦೦ ಘಂಟೆ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಗ್ರಂಥಾಲಯ ಸದುಪಯೋಗ ಮಡೆದುಕೊಳ್ಳಬೇಕೆಂದು ಹೇಳಿದರು.
ಗ್ರಂಥಪಾಲಕರಾದ ಸತೀಶ ಬಿರಾದಾರ ರವರು ಸ್ವಾಗತಿಸಿದರು, ಡಾ.ಅಂಬರೀಶ ಬಿರಾದಾರ ರವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ಎ.ಎಮ್.ಮನಗೂಳಿ ಪ್ರೊ.ಎಸ್.ಎಮ್.ಬಿರಾದಾರ, ಪ್ರೊ.ಎಸ್.ಕೆ.ಹೂಗಾರ, ಡಾ.ಆರತಿ ಅರಳಗುಂಡಗಿ, ಜ್ಯೋತಿ ಹಿಟ್ನಳ್ಳಿ, ಗೀತಾ ಮುರುಗಾನೂರ, ಸುಧಾ ಮಹಿಶಾಳೆ, ಜಿ.ಎಸ್. ಬಡಿಗೇರ ಜೆ.ಸ್.ಹಿಟ್ನಳ್ಳಿ, ಮಾಂತೇಶ ಸುಂಗಠಾಣ, ರಮೇಶ ಯಂಕAಚಿಕರ, ವ್ಹಿ.ಬಿ.ಪಾಟೀಲ, ಎಸ್,ವೈ.ನಾಯ್ಕೋಡಿ, ಗುರುಲಿಂಗಪ್ಪ,
ಎಸ್.ಎಮ್.ಅರ್ಜುಣಗಿ,ಎಸ್.ಎಮ್.ಇಂಗಳೆ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.