spot_img
spot_img

ತಾಲೂಕಾ ಮಟ್ಟದ ಪ ಪೂ ಕಾಲೇಜು ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು

Must Read

ಸಿಂದಗಿ: ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕರ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ, ಬಾಲಕಿಯರ ಟೆನ್ನಿಕ್ವಾಯ್ಟ್ ಪಂದ್ಯಾವಳಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ, 4*400  ರಿಲೇಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ, ವೈಯಕ್ತಿಕ ಕ್ರೀಡಾಕೂಟಗಳಾದ ಜಾವೆಲಿನ್ ದಲ್ಲಿ ಸಂತೋಷ ನರೇಗಲ್ಲ ಪ್ರಥಮ, 3000 ಮೀ ಓಟದಲ್ಲಿ ರವಿ ರೆಬಿನಾಳ ದ್ವಿತೀಯ ಸ್ಥಾನ, 1500 ಮೀ ಓಟದಲ್ಲಿ ರವಿ ರೆಬಿನಾಳ ಪ್ರಥಮ ಸ್ಥಾನ, 800 ಮೀ ಓಟದಲ್ಲಿ ಆಕಾಶ ಪೂಜಾರಿ ದ್ವಿತೀಯ ಸ್ಥಾನ, 400 ಮೀ ಓಟದಲ್ಲಿ ರವಿ ರೆಬಿನಾಳ ಪ್ರಥಮ ಸ್ಥಾನ ಬಂದಿರುತ್ತಾರೆ. ವಿಜೇತ ಸುಮಾರು 20 ಕ್ರೀಡಾ ಪಟುಗಳಿಗೆ ಸಂಸ್ಥೆಯ ಅಧ್ಯಕ್ಷ  ಅಶೋಕ ಮನಗೂಳಿ ಅಭಿನಂದಿಸಿ ವೈಯಕ್ತಿಕವಾಗಿ ತಲಾ ವಿದ್ಯಾರ್ಥಿಗೆ ರೂ 1000 ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.

ಸಂಸ್ಥೆಯ ಎಲ್ಲ ನಿರ್ದೇಶಕ ಮಂಡಳಿಯ ಸದಸ್ಯರು, ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ದೈಹಿಕ ಉಪನ್ಯಾಸಕ ಸತೀಶ ಬಸರಕೋಡ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿಜೇತ ಕ್ರೀಡಾಪಟುಗಳಿಗೆ ಅಭಿನಂದಿದ್ದಾರೆ.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!