- Advertisement -
ಸಿಂದಗಿ: ಶಿಕ್ಷಕರು ನೀಡುವ ಪಾಠ ಬೋಧನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ನಿರಂತರವಾಗಿ ಓದಿ ಸಾಧನೆ ಮಾಡಬೇಕು ಎಂದು ವಿಜಯಪುರದ ಮೌಲಾನಾ ಅಬ್ದುಲ್ ಖಾದೀರ ಜಾಮಯಿ ಹೇಳಿದರು.
ತಾಲೂಕಿನ ದೇವಣಗಾಂವ ಗ್ರಾಮದ ಅಂಜುಮನ್ ಅರೆಬಿಕ್ ಮದರಸಾದಲ್ಲಿ ಹಮ್ಮಿಕೊಂಡಿದ್ದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಿಕ್ಷಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಜ್ಞಾನವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿಧ್ಯಾರ್ಥಿ ಜೀವನಕ್ಕೆ ಬಹಳ ಮಹತ್ವ ಇರುವದರಿಂದ ಮಕ್ಕಳು ಇಷ್ಟಪಟ್ಟು, ಕಷ್ಟಪಟ್ಟು ಓದುವದನ್ನು ಮುಂದುವರೆಸಬೇಕು ಎಂದರು.
ಡಾ.ಉಸ್ಮಾನ ಶೇಖಜಿ, ನಜೀರಸಾಬ ಮುಲ್ಲಾ, ಮೌಲಾನಾ ಮಹಮ್ಮದ ಫಯಾಜ, ಅನ್ವರ ತಾಳಿಕೋಟೆ, ಸಾಖಿಬ್ ಖಾಜಿ, ಹಸ್ಮತ ಚಿನ್ನಕೋಟಿ, ಎಂ.ಸಮೀರ, ಮುನೀರಸಾಬ ಮುಜಾವರ, ಗನಿಸಾಬ ನಾಗಾವಿ, ರಾಜು ನಾಗಾವಿ, ಬಂದಗಿಸಾಬ ಅವಟಿ, ಗನಿಸಾಬ ಕಸಾಬ, ಬಿಲಾಲ ಆಸಂಗಿಹಾಳ ಇದ್ದರು.