spot_img
spot_img

ನಿರಂತರ ಪ್ರಯತ್ನದ ಫಲವೇ ಯಶಸ್ಸು: ಕುಮಾರ ಮರ್ದಿ

Must Read

ಮೂಡಲಗಿ : ಯಶಸ್ಸು ಎಂಬುದು ಸುಲಭವಾಗಿ ಸಿಗುವಂತದಲ್ಲ ಅದಕ್ಕೆ ನಿರಂತರ ಪ್ರಯತ್ನ ಹಾಗೂ ತಾಳ್ಮೆಯ ಫಲವೇ ಯಶಸ್ಸು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು. ಅವರು ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಹರ್ಷಿ ಭಗೀರಥರು ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ ಅವರ ಪ್ರಯತ್ನದಲ್ಲಿ ಗಂಗೆಯನ್ನು ಭೂಮಿಗೆ ಹರಿಸಿದ ಭಗೀರಥರು ಮಾನವ ತಮ್ಮ ಅಲ್ಪ ಪ್ರಯತ್ನದಲ್ಲಿಯೇ ನಿರಾಶೆಯಾಗದೇ ನಿರಂತರವಾಗಿ ಪ್ರಯತ್ನಿಸಿ ಸಾಧಕರಾಗಬೇಕೆಂದು ಸಂದೇಶವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಒಳ್ಳೆಯ ಕೆಲಸದಲ್ಲಿ ತೊಂದರೆಗಳು ಸಹಜ ಆದರೆ ತೊಂದರೆಗಳನ್ನು ಮೆಟ್ಟಿ ನಿಂತು ಜಯ ಸಾಧಿಸುವದೇ ಸಾಧಕರ ಶ್ರೇಷ್ಠ ಗುರಿ ಎಂಬುದನ್ನು ಮಾನವ ಕುಲಕ್ಕೆ ಪರಿಚಯಿಸಿದ ಮಹರ್ಷಿ ಭಗೀರಥರು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದಾರೆ ಎಂದರು.

ಇನ್ನೋರ್ವ ಅತಿಥಿ ಗ್ರಾಮ ಪಂಚಾಯತ ಮಾಜಿ ಸದಸ್ಯ ಅಜ್ಜಪ್ಪ ಮನ್ನಿಕೇರಿ ಮಾತನಾಡಿ, ಪರಿಶ್ರಮದಿಂದ ಹಾಗೂ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಲೋಕಕ್ಕೆ ತಂದು ತನ್ನ ಪಿತೃಗಳಿಗೆ ಸದ್ಗತಿ ಕೊಡಿಸಿದ ಮಹರ್ಷಿ ಭಗೀರಥರು, ಕೇವಲ ಯಾವುದೇ ಒಂದೇ ಜನಾಂಗಕ್ಕೆ ಸೀಮಿತವಾಗದೇ ಸರ್ವ ಮಾನವ ಕುಲಕ್ಕೆ ಉತ್ತಮ ಸಂದೇಶವನ್ನು ಕೊಟ್ಟ ಮಹಾತ್ಮರಾಗಿದ್ದಾರೆ ಎಂದರು.

ಮತ್ತೋರ್ವ ಗ್ರಾಮ ಪಂಚಾಯತ ಮಾಜಿ ಸದಸ್ಯ ಭರಮಪ್ಪ ಉಪ್ಪಾರ ಮಾತನಾಡಿ, ಭಗೀರಥ ಮಹರ್ಷಿಯ ಜೀವನ ಕಥೆ ಎಲ್ಲರಿಗೂ ಸ್ಪೂರ್ತಿದಾಯಕ ದೈವಾಂಶ ಪುರುಷರಾದ ಭಗೀರಥರು ಗಂಗೆಯನ್ನು ಧರೆಗಿಳಿಸಿದ ಸಂದರ್ಭ ಇಲ್ಲಿ ನಿರಂತರ ಪ್ರಯತ್ನಕ್ಕೆ ಫಲ ಇದೆ ಎಂಬುದನ್ನು ಸಾರಿದ ಸಂದೇಶವಿದೆ. ಭಗೀರಥ ಮಹರ್ಷಿಯ ಪ್ರಯತ್ನ ಯಾವಾಗಲೂ ಸ್ಪೂರ್ತಿ ಹಾಗೂ ಅನವರತ.

ಕಾರ್ಯಕ್ರಮದಲ್ಲಿ ಅಸಿಸ್ಟಂಟ ಹಾರ್ಟಿಕಲ್ಚರ್ ಆಫೀಸರ್ ಆಗಿ ಆಯ್ಕೆಯಾಗಿರುವ ಗ್ರಾಮದ ಯಲ್ಲಾಲಿಂಗ ಮಲ್ಲಾಪೂರ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಪ್ರಧಾನ ಗುರುಗಳಾದ ಎ.ವ್ಹಿ. ಗಿರೆಣ್ಣವರ, ಕಲ್ಲೋಳಿ ಸಿ.ಆರ್.ಸಿ. ಗಣಪತಿ ಉಪ್ಪಾರ, ಗ್ರಾಮ ಪಂಚಾಯತ ಸದಸ್ಯರಾದ, ತಿಪ್ಪಣ್ಣ ಹುಲಕುಂದ, ಪುಂಡಲೀಕ ಬಾಗೇವಾಡಿ, ಗಂಗಪ್ಪ ಹಮ್ಮನವರ, ಸಾಬಪ್ಪಾ ಹುಲಕುಂದ, ಮಾಜಿ ಸದಸ್ಯರಾದ ಅಜ್ಜಪ್ಪ ಮನ್ನಿಕೇರಿ, ಭರಮಪ್ಪ ಉಪ್ಪಾರ, ಗೋವಿಂದ ನಾಂವಿ, ರಾಮಪ್ಪ ಬಾಗೇವಾಡಿ ರವಿ ಗದಾಡಿ, ಆನಂದ ಉಪ್ಪಾರ, ಯಲ್ಲಾಲಿಂಗ ಮಲ್ಲಾಪೂರ, ಕರವೇ ಅಧ್ಯಕ್ಷ ಬಸವರಾಜ ಹುಲಕುಂದ, ಶಿಕ್ಷಕರಾದ ಕಿರಣ ಭಜಂತ್ರಿ, ಲಕ್ಷ್ಮೀ ಹೆಬ್ಬಾಳ ಸಂಗೀತಾ ತಳವಾರ, ಕುಸುಮಾ ಚಿಗರಿ, ಪುಷ್ಪಾ ಭರಮದೆ, ಖಾತೂನ ನದಾಫ ಉಪಸ್ಥಿತರಿದ್ದರು.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!