spot_img
spot_img

ಯಶಸ್ವಿ ಲೋಕ ಅದಾಲತ್; ಒಂದಾದ ದಂಪತಿಗಳು

Must Read

ಮೂಡಲಗಿ: ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆ ತವರು ಮನೆ ಸೇರಿ ಜೀವನಾಂಶ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ ಒಂದು ಜೋಡಿ ಇದೀಗ ಮೂಡಲಗಿಯ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ್ ಅದಾಲತ್‍ನಲ್ಲಿ ಮತ್ತೆ ಒಂದಾಗಿರುವ ಘಟನೆ ನಡೆದಿದೆ.

ಪಟ್ಟಣದಲ್ಲಿ ಶನಿವಾರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್‍ನಲ್ಲಿ ತಾಲೂಕಿನ ಮುನ್ಯಾಳ ಗ್ರಾಮದ ಕಲ್ಲಯ್ಯ ಹಿರೇಮಠ ಹಾಗೂ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಐಶ್ವರ್ಯ ಎನ್ನವವರು ಸುಮಾರು 2015ರಲ್ಲಿ ಮದುವೆಯಾಗಿದ್ದರು, ಆದರೆ ಮೂರು ಮಕ್ಕಳಾದ ಮೇಲೆ ಕೌಟುಂಬಿಕ ಕಲಹದ ಆರೋಪಿಸಿ ಗಂಡ ಕಲ್ಲಯ್ಯ ಅವರನ್ನು ಬಿಟ್ಟು ಐಶ್ವರ್ಯ 9 ತಿಂಗಳ ಹಿಂದೆ ತನ್ನ ತವರು ಮನೆ ಸೇರಿ ಕಳೆದ ಮೂರು ತಿಂಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಆದರೆ ನ್ಯಾಯಾಧೀಶರ ಸಲಹೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡ-ಹೆಂಡತಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ನಿರ್ಧರಿಸಿ ಲೋಕ್ ಅದಾಲತ್‍ನಲ್ಲಿ ಒಂದಾಗಿದ್ದಾರೆ.

ನ್ಯಾಯಾಧೀಶೆ ಜ್ಯೋತಿ ಪಾಟೀಲ ಮಾತನಾಡಿ, ಜಮೀನು ವಿವಾದದ ಪ್ರಕರಣದಲ್ಲಿ ಕಳೆದ 2015ರಲ್ಲಿ ದಾಖಲಾದ ಆಸ್ತಿ ದಾವೆಯ ಪ್ರಕರಣದಲ್ಲಿ ಸುಮಾರು 29 ಜನರನ್ನೊಳಗೊಂಡ 6 ಕುಟುಂಬಗಳು ಲೋಕ್ ಅದಾಲತ್‍ದಲ್ಲಿ ಒಂದಾಗಿದ್ದಾರೆ. ಹಾಗೂ 12 ಚೆಕ್ ಪ್ರಕರಣಗಳಲ್ಲಿ 7 ಪ್ರಕರಣಗಳು ಇತ್ಯರ್ಥಗೊಂಡು ಸುಮಾರು 21ಲಕ್ಷ ಹಣವನ್ನು ರಿಕವರಿ ಮಾಡಿಕೊಡಲಾಗಿದೆ. ಜಮೀನು ವಿವಾದ 16 ಪ್ರಕರಣಗಳಲ್ಲಿ 15 ಪ್ರಕರಣಗಳು ಇತ್ಯರ್ಥಗೊಂಡಿವೆ ಇನ್ನೂ ಕ್ರಿಮಿನಲ್ 264 ಪ್ರಕರಣಗಳಲ್ಲಿ 264 ಪ್ರಕರಣಗಳು ಇತ್ಯರ್ಥಗೊಂಡು ಸುಮಾರು 12ಲಕ್ಷ ದಂಡ ವಿಧಿಸಲಾಗಿದೆ. ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲಾತಿ 100 ಪ್ರಕರಣಗಳಲ್ಲಿ 100 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಶನಿವಾರ ನಡೆದ ಲೋಕ್ ಅದಾಲತ್‍ದಲ್ಲಿ 432 ಪ್ರಕರಣಗಳಗೆ ಸಂಬಂಧಿಸಿದಂತೆ 414 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದರು.

ವೇದಿಕೆಯ ಮೇಲೆ ಮೆಗಾ ಲೋಕ್ ಅದಾಲತ್‍ ಸಂಧಾನಕಾರರ ಪೇನಲ್ ವಕೀಲರಾಗಿ ಅಕ್ಕಮಹಾದೇವಿ ಗೊಡ್ಯಾಗೋಳ ಇದ್ದರು

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!