25 ಗುಂಟೆಯಲ್ಲಿ 52 ಟನ್ ಕಬ್ಬು ಬೆಳೆದ ರೈತ

Must Read

ಹಳ್ಳೂರ- ಮರಾಕುಡಿ ಗ್ರಾಮದ ಹದ್ದಿಯಲ್ಲಿರುವ ಶ್ರೀಶೈಲ ಬಸಪ್ಪ ಮಾಲಗಾರ ಹಾಗೂ ಮುರಿಗೆಪ್ಪ ಬಸಪ್ಪ ಮಾಲಗಾರ ಒಡೆತನದ 25 ಗುಂಟೆ ಜಮೀನಲ್ಲಿ 12 ತಿಂಗಳಲ್ಲಿ ಸಿ ಒ 86032 ತಳಿಯ ಕಬ್ಬು 52 ಟನ್ ಇಳುವರಿ ನೀಡಿದೆ.

ರಾಸಾಯನಿಕಗಳನ್ನು ಬಳಸದೆ 52 ಟನ್ ಕಬ್ಬು ಬೆಳೆದಿದ್ದಕ್ಕೆ ರೈತರು ಹರ್ಷ ವ್ಯಕ್ತ ಪಡಿಸಿದರು. 25 ಗುಂಟೆ ಜಮೀನಲ್ಲಿ ಕಬ್ಬು ಅದರಲ್ಲಿ ಮಿಶ್ರ ಬೆಳೆ 15 ಕ್ವಿಂಟಾಲ್ ಬಳ್ಳೊಳ್ಳಿ , ಉಳ್ಳಾಗಡ್ಡಿ,ಕಾಯಿಪಲ್ಲೆ ಮಿಶ್ರ ಬೆಳೆಗಳನ್ನು ಬೆಳೆದರು ಅದರ ಜೊತೆಗೆ ಕಬ್ಬಿನ ಇಳುವರಿ ಕೂಡಾ ಹೆಚ್ಚಾಗಿದ್ದರಿಂದ ರೈತ ಶ್ರೀಶೈಲ ಅವರ ಮುಖದಲ್ಲಿ ಮಂದಹಾಸ ಮೂಡಿದೆ.

ಭೂಮಿಗೆ ಹೆಚ್ಚಾಗಿ ಸಾವಯುವ ತಿಪ್ಪೆ ಗೊಬ್ಬರ ಉಪಯೋಗಿಸಿದ್ದು ಹಿಂದಿನಿಂದಲೂ ಮನೆಯಲ್ಲಿ ಜವಾರಿ ಗೋವುಗಳನ್ನು ಸಾಕುತ್ತಿದ್ದು ಪ್ರತಿ ವರ್ಷ ತಿಪ್ಪೆ ಗೊಬ್ಬರ ಉಪಯೋಗಿಸುತ್ತಾ ಬಂದಿದ್ದಾರೆ.ಪ್ರಾಮಾಣಿಕವಾಗಿ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ರೈತ ಶ್ರೀಶೈಲ ಬಸಪ್ಪ ಮಾಲಗಾರ ಅವರು ಪತ್ರಿಕೆಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಬೆಳೆದ ಕಬ್ಬನ್ನು ಸಮೀಪದ ಸಮೀರವಾಡಿ ಗೋದಾವರಿ ಬೈಯೊರಿಫೈನರೀಜ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು – ರಾಮಚಂದ್ರ ಕಾಕಡೆ

ಮೂಡಲಗಿ- ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುವುದರೊಂದಿಗೆ ಗುಣ ಮಟ್ಟದ ಶಿಕ್ಷಣ ಪಡೆದು ಮಾನವೀಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಸ್ಥಾನ ಪಡೆಯಲು...

More Articles Like This

error: Content is protected !!
Join WhatsApp Group