spot_img
spot_img

ಮಾನಸಿಕ ಖಿನ್ನತೆಗೆ ಆತ್ಮಹತ್ಯೆ ಪರಿಹಾರ ಅಲ್ಲ – ಡಾ. ಮಂಜುನಾಥ ಮಸಳಿ

Must Read

- Advertisement -

ಸಿಂದಗಿ; ಆತ್ಮಹತ್ಯೆ ಮಾಡಿಕೊಳ್ಳಲು  ಪ್ರಯತ್ನ ಮಾಡುವವರು ಹೆಚ್ಚಾಗಿ ಸ್ವ-ಉದ್ಯೋಗ ಮಾಡುವವರು ಹಾಗೂ ಮಹಿಳೆಯರು ಏಕೆಂದರೆ ಕುಟುಂಬದಲ್ಲಿ ಒಂದು ಚಿಕ್ಕ ಸಮಸ್ಯೆಗೂ ಅವರು ಇಂಥ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ತಲೆಯಲ್ಲಿ ಮೊದಲು ವಿಚಾರ ಬರುವುದು ನಾನು ಸಾಯಬೇಕು ಇದರಿಂದ ನನಗೆ ನೆಮ್ಮದಿ ಸಿಗಬಹುದು ಎನ್ನುವ ದೃಢ ನಿರ್ಧಾರಕ್ಕೆ ಬರುತ್ತಾರೆ. ಎಲ್ಲದಕ್ಕೂ ಆತ್ಮಹತ್ಯೆ ಪರಿಹಾರವಲ್ಲ ಕಾರಣ ಇಂತಹ ಸಮಯದಲ್ಲಿ ಸ್ವಲ್ಪ ತಾಳ್ಮೆ ತೆಗೆದುಕೊಳ್ಳಬೇಕು ತಮ್ಮ ಮುಂದಿನ ಭವಿಷ್ಯ ಹಾಗೂ ಮಕ್ಕಳ ಭವಿಷ್ಯದ ಕುರಿತು ವಿಚಾರ ಮಾಡಬೇಕು ಎಂದು ಜಿಲ್ಲಾಸ್ಪತ್ರೆಯ ಮನೋ ವೈದ್ಯರಾದ ಡಾ. ಮಂಜುನಾಥ ಮಸಳಿ ಸಲಹೆ ನೀಡಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ಜಿಲ್ಲಾ ಮನೋರೋಗ ವಿಭಾಗ, ವಿಜಯಪುರ ಹಾಗೂ ತಾಲೂಕ ಆರೋಗ್ಯ ಇಲಾಖೆ, ಸಿಂದಗಿ ಇವರ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒತ್ತಡ ಹಾಕಬಾರದು ಬದಲಾಗಿ ತಿಳಿಸಿ ಹೇಳಬೇಕು. ಇನ್ನೂ ಕೆಲವೊಬ್ಬರಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಅಂತಕ ಪಡುವ ಪ್ರವೃತ್ತಿ ಇದೆ ಇದು ಮುಂದುವರೆಯುತ್ತಾ ಹೋದಲ್ಲಿ ಮಾನಸಿಕ ಖಿನ್ನತೆಗೆ ವ್ಯಕ್ತಿ ಒಳಗಾಗಬಹುದು ಮತ್ತು ಆತ್ಮಹತ್ಯೆಗೆ ಎಡೆ ಮಾಡಿಕೊಡಬಹುದು. ಇಂತಹ ಸಮಸ್ಯೆಗಳು ಇರುವವರು ಮಾನಸಿಕ ತಜ್ಞರನ್ನು ಕಾಣಬೇಕು ಇದು ಮುಜುಗರ ಆದಲ್ಲಿ ಅಂತಹವರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಸಹಾಯವಾಣಿಯಾದ ೧೪೪೧೬ ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಮಾತನಾಡಿ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಂಡು ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆ ವಿಚಾರಗಳಿಂದ ಹೊರ ಬರಲು ಕೆಲವು ಸಲಹೆಗಳನ್ನು ನೀಡಲು ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಪ್ರತಿ ತಿಂಗಳ ಮೊದಲನೆ ಮಂಗಳವಾರದಂದು ಮನೋತಜ್ಞರು ಲಭ್ಯವಿದ್ದು ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತ ಲಭ್ಯವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯಲ್ಲಿ ಇರುತ್ತಾರೆ ಆ ಸಮಸ್ಯೆಗೆ ಹೆದರದೆ, ಜೀವನದಲ್ಲಿ ಕುಗ್ಗದೆ ಅದನ್ನು ಎದುರಿಸಿ ಜೀವನ ಸಾಗಿಸಬೇಕು. ನಮ್ಮ ಸುತ್ತಮುತ್ತಲು ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆಯಲ್ಲಿ ಇರುತ್ತಾರೆ ಅದು ನಮ್ಮ ನಿಮ್ಮ ಗಮನಕ್ಕೆ ಬಂದರೆ ತಡೆಗಟ್ಟಿ ಆ ವ್ಯಕ್ತಿಯ ಮನ ಪರಿವರ್ತನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕು. ನಮ್ಮ ನಮ್ಮ ಮಾನಸಿಕ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು ಎಂದರು.

- Advertisement -

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಕುಲಕರ್ಣಿ ಮಾತನಾಡಿ, ಆತ್ಮಹತ್ಯೆಯನ್ನು ತಡೆಯಬೇಕೆಂದರೆ ನಾವು ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಬೇಕು. ಜನರು ಮುಕ್ತವಾಗಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಬಗ್ಗೆ ಮಾತನಾಡಬೇಕು . ಅವರನ್ನು ಸಮಾಧಾನವು ಒಂದು ಜೀವದ ಬಲಿಯನ್ನು ನಾವು ತಪ್ಪಿಸಬಹುದು ಇದಕ್ಕೆ ನಾವು ನೀವೆಲ್ಲರು ಒಗ್ಗೂಡಿದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಮಾತನಾಡಿ, ವಿಶ್ವ ಆತ್ಮಹತ್ಯೆ ತಡೆ ದಿನ ಪ್ರತಿ ವರ್ಷ ಸಪ್ಟೆಂಬರ್ ೧೦ ರಂದು ಆಚರಿಸಲಾಗುತ್ತದೆ. ೨೦೦೩ ರಲ್ಲಿ ಮೊದಲ ವಿಶ್ವಹತ್ಯೆ ತಡೆಗಟ್ಟುವಿಕೆ ದಿನವನ್ನು ಪ್ರಾರಂಬಿಸಲಾಯಿತು. ಪ್ರತಿ ವರ್ಷ ೭ ಲಕ್ಷಕ್ಕೂ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ. ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿದ ಹಳ್ಳಿಗಳಿಂದ ಮಹಿಳೆಯರು, ಯುವಕರು, ಕಟ್ಟಡಕಾರ್ಮಿಕರು, ವಿಶೇಷಚೇತನರು ಮತ್ತು ಸಂಗಮ ಸಂಸ್ಥೆಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು. ಬಸವರಾಜ ಬಿಸನಾಳ ಕಾರ್ಯಕ್ರಮ ನಿರೂಪಿಸಿದರು, ಉಮೇಶ ದೊಡಮನಿ ಸ್ವಾಗತಿಸಿದರು. ಮಲಕಪ್ಪ ಹಲಗಿ ವಂದಿಸಿದರು.

- Advertisement -
- Advertisement -

Latest News

ರ್ಯಾಗಿಂಗ್ ವಿರೋಧಿ ಕಾಯ್ದೆ ಹಾಗೂ ರ‍್ಯಾಗಿಂಗ್ ವಿರೋಧಿ ಮಾರ್ಗಸೂಚಿಗಳ ಅರಿವು ಅಗತ್ಯ ; ಪೊಲೀಸ್ ಪೇದೆ ನಾಗಪ್ಪ ಒಡೆಯರ

ಮೂಡಲಗಿ : ರ‍್ಯಾಗಿಂಗ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು ರ‍್ಯಾಗಿಂಗ್ ಪ್ರವೃತ್ತಿಯಿಂದ ವಿದ್ಯಾರ್ಥಿಗಳು ಬದಲಾಗಬೇಕು ಇಂದು ಅಧ್ಯಯನದ ಬದಲಾಗಿ ವಿದ್ಯಾರ್ಥಿಗಳ ಕಾಲೇಜು ಅವಧಿಗಳಲ್ಲಿ ತಮ್ಮ...
- Advertisement -

More Articles Like This

- Advertisement -
close
error: Content is protected !!
Join WhatsApp Group