- Advertisement -
ರಬಕವಿ – ಇತ್ತೀಚೆಗೆ ರಬಕವಿ – ಬನಹಟ್ಟಿ ತಾಲ್ಲೂಕಿನ ರಾಮಪೂರದಲ್ಲಿ ಷಣ್ಮುಖ ಮುರಗುಂಡಿ ಎಂಬ ನೇಕಾರನು , ಕೋವಿಡ್ ಲಾಕ್ ಡೌನ್ ದಿಂದಾಗಿ , ವ್ಯಾಪಾರ ವಹಿವಾಟು ಇಲ್ಲದೇ , ಈಗಾಗಲೇ ತೆಗೆದುಕೊಂಡಿರುವ ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಹುಕಾರರ ಮೀಟರ್ ಬಡ್ಡಿ ಸಾಲಕ್ಕೆ ಹೆದರಿ ಮರಕ್ಕೆ ನೇಣು ಹಾಕಿಕೊಂಡು ಇಹಲೋಕ ತ್ಯಜಿಸಿದರು.
ಬಾಗಲಕೋಟದಿಂದ ಜವಳಿ ಇಲಾಖೆಯ ಮಗದುಮ್ ಎಂಬ ಅಧಿಕಾರಿಗಳು ಅವರ ಮನೆಗೆ ಭೇಟಿಕೊಟ್ಟು ಎಲ್ಲಾ ರೀತಿಯ ಸಹಾಯ ಸರ್ಕಾರದ ವತಿಯಿಂದ ಕೊಡಿಸುವುದಾಗಿ ಆಶ್ವಾಸನೆ ನೀಡಿದರಂತೆ.
ನೇಕಾರ ನೆಗೆದು ಬಿದ್ದಮೇಲೆ ಜವಳಿ ಇಲಾಖೆಯವರು ಇಲ್ಲಿ ಭೆಟ್ಟಿ ಕೊಡುವ ಬದಲಿಗೆ, ಈಗಾಗಲೇ ಇನ್ನೂ ಅನೇಕ ಜನ ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿ ನಡೆಸಿರುವ ನೇಕಾರ ಬಂಧುಗಳನ್ನು, ಅವರು ಮತ್ತೇ ಬದುಕು ಕಟ್ಟಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷದವರು ಹಾಗೂ ಸರ್ಕಾರ ನೆರವಾದರೆ, ಅವರಿಗೆ ನಿಜವಾಗಿಯೂ ಒಂದು ಬಿಗ್ ಸೆಲ್ಯೂಟ್ !
- Advertisement -
ವರದಿ: ನೀಲಕಂಠ ದಾತಾರ