- Advertisement -
ಮೈಸೂರು – ನಗರದ ಅಶೋಕಪುರಂನ ೩ನೇ ಕ್ರಾಸ್‌ನ ನಿವಾಸಿ ಎಸ್.ಸುಜ್ಞಾನಶ್ರೀಯವರು ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್‌ಸಿ.ಬಿಟಿಬಿಎಂನಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕವನ್ನು ಗಳಿಸಿರುತ್ತಾರೆ.
ಇವರು ಡಾ.ಬಿ.ಆರ್.ಅಂಬೇಡ್ಕರ್, ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಸಿ. ಹಾಗೂ ಯಶೋದಮ್ಮ ಅವರ ಪುತ್ರಿ. ಮುಂದೆ ಎಂಎಸ್‌ಸಿ ಬಯೋಟೆಕ್‌ನಲ್ಲಿ ಪಿಹೆಚ್‌ಡಿ ಮಾಡಿ ಕ್ಯಾನ್ಸರ್ ಬಯೋಲಜಿಯಲ್ಲಿ ಸಾಧನೆ ಮಾಡಬೇಕೆಂದು ಆಸಕ್ತಿ ಹೊಂದಿ, ವಿಶೇಷ ಅಧ್ಯಯನವನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿಯನ್ನು ಪಡೆಯುತ್ತಿದ್ದಾರೆ.