ಕಲಬುರಗಿ: ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ಉಪನ್ಯಾಸಕಿ ಸುಮಂಗಲಾ ಸಂಗಾವಿ ಆಯ್ಕೆಯಾಗಿರುವರು.
ಮಹಿಳಾ ಕಿರುಕುಳ, ಮಾನಸಿಕ ಹಿಂಸೆ, ಹೆಚ್ಚುತ್ತಿರುವ ಅತ್ಯಾಚಾರ ತಡೆಗಟ್ಟಲು ಹಾಗೂ ಬೌದ್ಧಿಕವಾಗಿ ಮಹಿಳೆಯರು ಮತ್ತು ಪುರುಷರು ಸಮಾನವಾಗಿದ್ದರೂ ಕೂಡ ಅವರದ್ದೇ ಆದ ಸಮಸ್ಯೆಗಳು ಇರುವ ಕಾರಣ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ನೌಕರರ ಸಂಘ ಆಸ್ತಿತ್ವಕ್ಕೆ ಬಂದಿದೆ.
ಶ್ರೀಮತಿ. ಶಶಿಕಲಾ ನರೋಣಕರ್, ದೇವಮ್ಮ ಟಿ ಹುಲಿಮನಿ, ಸುನೀತಾ ಸಿಂಧೆ, ಜಮುನಾ ಟಿಳೆ, ಡಾ. ರವಿಕಾಂತಿ ಎಸ್ ಕ್ಯಾತನಾಳ್, ಮೋಹಿನಿ, ಪ್ರತಿಮಾ ಪರಾಗ, ಅನಿತಾ ಪ್ರಕಾಶ್, ಲಲಿತಾ ಪಾಟೀಲ, ಸುಭದ್ರಮ್ಮ ರಜೋಳಕರ, ಕವಿತಾ ಮಾಶಾಲಕರ, ರೇಣುಕಾ ಎಸ್. ನಮ್ರತಾ ಒಳಕೇರಿ, ಪ್ರಿಯಾಂಕಾ ಕುಲಕರ್ಣಿ, ನಾಗಲಾಂಬಿಕಾ ಜೆ ಎಸ್. ವಿಜಯಲಕ್ಷ್ಮಿ ಪಾಟೀಲ, ತೇಜಶ್ವಿನಿ ಮುಕ್ಕ, ಚಂದ್ರಕಲಾ ಚೌಹಾಣ ಮೊದಲಾದ ಸಮಸ್ತ ಕ್ರಿಯಾಶೀಲ ಕಲಬುರಗಿ ಜಿಲ್ಲಾ ಪದಾಧಿಕಾರಿಗಳು ಇವರನ್ನು ಅಭಿನಂದಿಸಿರುವರು.
ಇವರ ಆಯ್ಕೆ ಯನ್ನು ಶ್ರೀಮತಿ ರಮಾ ರಾಜ್ಯಾಧ್ಯಕ್ಷರು ಹಾಗೂ ಶ್ರೀಮತಿ ಶೈಲಜಾ ವಿ. ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘಟನೆ ಇವರು ಆಯ್ಕೆ ಮಾಡುವ ಮೂಲಕ ಅಭಿನಂದಿಸಿದ್ದಾರೆ.