spot_img
spot_img

ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ : 14 ದಿನಗಳ ಬೇಸಿಗೆ ಶಿಬಿರ

Must Read

- Advertisement -

ಗ್ರಾಮೀಣ ಭಾಗದ ಮಕ್ಕಳಲ್ಲಿ ಸರ್ವೋತೋಮುಖ ಬೆಳವಣಿಗೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಹುನಗುಂದ: ಬೇಸಿಗೆ ರಜೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಪೂರಕವಾಗುವ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕಲೆ,ಸಾಹಿತ್ಯ,ಸಂಸ್ಕೃತಿ ಹಾಗೂ ಸ್ಥಳೀಯ ಕ್ರೀಡೆಗಳನ್ನು ಪರಿಚಯಿಸುವ ವಿಶೇಷ ಗ್ರಾಮೀಣ ಮಕ್ಕಳ ಬೇಸಿಗೆ ರಜೆಯ ಶಿಬಿರವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ,ಜಿಲ್ಲಾ ಪಂಚಾಯತ,ತಾಲೂಕ ಪಂಚಾಯತ,ಗ್ರಾಮ ಪಂಚಾಯತ ಸಹಯೋಗದಲ್ಲಿ ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.23 ರಂದು ಆರಂಭಗೊಂಡಿದ್ದರಿಂದ ಬೇಸಿಗೆಯಲ್ಲೂ ಶಾಲೆಯ ಆವರಣದಲ್ಲಿ ಮಕ್ಕಳ ಕಲರವ ಕೇಳುತ್ತಿರುವುದು ವಿಶೇಷ.

ಮೇ.23 ರಿಂದ ಜೂ.5 ರವರಗೆ ನಡೆಯಲಿರುವ 14 ದಿನಗಳ ಬೇಸಿಗೆಯ ತರಬೇತಿ ಶಿಬಿರಕ್ಕೆ 40 ಜನ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಹೊಸ ನಾವೀಣ್ಯತೆಯನ್ನು ಮೂಡಿಸಲು ಇಬ್ಬರು ಸಂಪನ್ಮೂಲ ಶಿಕ್ಷಕಿಯರು ಮತ್ತು ಮಕ್ಕಳ ನೋಡಿಕೊಳ್ಳಲು ಇಬ್ಬರು ಆಯಾಗಳನ್ನು ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ ನೇಮಕ ಮಾಡಿಕೊಳ್ಳುವುದರ ಜೊತೆಗೆ ಇವರಿಗೆ ತಾ.ಪಂ ಕಾರ್ಯಾಲಯದಲ್ಲಿ ಒಂದು ತರಬೇತಿಯನ್ನು ಸಹ ನೀಡಿ ಮಕ್ಕಳ ಕಲಿಗೆ ಬೇಕಾಗಿರುವ ಪಠ್ಯ ಮತ್ತು ಚಟುವಟಕೆಗಳಿಗೆ ಸಾಮಗ್ರಿಗಳನ್ನು ಒದಗಿಸಿದೆ.

- Advertisement -

ಗ್ರಾಮೀಣ ಭಾಗದ ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳು ಸಿಗೋದು ಅಪರೂಪ ಸಂಸ್ಥೆ ಐದು ದಿನ ಪತ್ರಿಕೆಗಳನ್ನು ಶಿಬಿರಕ್ಕೆ ಒದಗಿಸಿ ಮಕ್ಕಳಲ್ಲಿ ಪತ್ರಿಕೆಗಳನ್ನು ಓದುವುದು ಮತ್ತು ಅಂತರರಾಷ್ಟ್ರೀಯ, ರಾಷ್ಟ್ರೀಯ,ರಾಜ್ಯ,ಸ್ಥಳೀಯ ಮಟ್ಟದ ವಿದ್ಯಾಮಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

ಕ್ರೀಡೆಯ ಮೂಲಕ ಮಕ್ಕಳ ಕಲಿಕೆ-ಮಕ್ಕಳು ನಗು ಮೊಗದಿಂದಲ್ಲೇ ಚಿಕ್ಕ ಮಡಿಕೆ, ದೊಡ್ಡ ಮಡಿಕೆ, ಕೆರೆ ದಡ ಆಟ, ಮ್ಯೂಸಿಕಲ್ ಚೇರ್,ವಿವಿಧ ಬಗೆಯ ಚಪ್ಪಾಳೆ,ನೀರು ಬಕೇಟ್‍ನಲ್ಲಿ ನಾಣ್ಯದ ಆಟ, ಬೆಸಸಂಖ್ಯೆ ಆಟ,ಚಿನ್ನಿ ದಾಂಡು ಆಟ,ಚದುರಂಗ ಮತ್ತು ಕೇರಂ ಆಟ,ಹುಲಿ ಕರು ಆಟಗಳ ಮೂಲಕ ಮಕ್ಕಳಲ್ಲಿ ಕಣ್ಮರೆಯಾಗಿರುವ ಆಟಗಳನ್ನು ಪರಿಚಯಿಸುವುದು ಮತ್ತು ವಿಶೇಷ ಕ್ರೀಡೆಯ ಮೂಲಕ ಕಲಿಕೆ ನೀಡಲಾಗುತ್ತಿದೆ.

ಗ್ರಾಮದ ವಿಶೇಷತೆಯ ಕಲಿಕೆ-ನಮ್ಮೂರ ಇತಿಹಾಸ,ಅಲ್ಲೀನ ಕ್ರೀಡೆಗಳು,ಸ್ಥಳೀಯ ಮಟ್ಟದ ಜನಪದ ಸಾಹಿತ್ಯ,ಅಲ್ಲಿನ ಕಥೆಗಳ ಬಗ್ಗೆ ಹಾಗೂ ಗ್ರಾಮದಲ್ಲಿ ಹರಿಯುವ ನದಿಗಳ ಕುರಿತು ಮಕ್ಕಳನ್ನು ಆ ಸ್ಥಳಕ್ಕೆ ಕರೆದೊಯ್ದು ಪತ್ಯಕ್ಷವಾಗಿ ತಿಳಿಸುವ ಮತ್ತು ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ವಿಶೇಷ ಶಿಬಿರವೂ ಕೂಡಾ ಇದಾಗಿದೆ.

- Advertisement -

ಮಕ್ಕಳಲ್ಲಿ ಸಾಹಿತಿಗಳನ್ನು ಮತ್ತು ಕಥೆ,ಕಾದಂಬರಿಕಾರ ಮತ್ತು ಸ್ವಾತಂತ್ರ್ಯ ಹೋರಾಟಗಾರ,ಮಹಾತ್ಮರ ಬಗ್ಗೆ ತಿಳಿಸುವ ಮೂಲಕ ಸ್ವತಃ ಕಥೆಗಳನ್ನು ಕಟ್ಟುವಂತೆ ಮಕ್ಕಳಲ್ಲಿ ಪ್ರೇರೇಪಿಸುವ ಕಾರ್ಯವನ್ನು ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ವಿವಿಧ ಪುಸ್ತಕಗಳನ್ನು ತರಿಸಿ ಓದಿಸುವ ಮತ್ತು ಅವರಲ್ಲಿ ಕ್ರೀಯಾಶೀಲತೆಯನ್ನು ಬೆಳೆಸುವ ಕಾರ್ಯವನ್ನು 14 ದಿನಗಳಲ್ಲಿ ಮಾಡುತ್ತಿದೆ.

ಒಟ್ಟಾರೆಯಾಗಿ ಬೇಸಿಗೆಯಲ್ಲಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಮತ್ತು ದೈಹಿಕ ಹಾಗೂ ಮಾನಸಿಕ ಪ್ರಗತಿ,ಪ್ರಕೃತಿ ಮತ್ತು ನೈಸರ್ಗಿಕ ಸೌಂದರ್ಯ ಅನುಭವಿಸುವಿಕೆ ಮತ್ತು ಅವರ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಬೇಸಿಗೆ ರಜೆ ಶಿಬಿರ ಮಾಡಲಿದೆ.

* ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳ ಬೇಸಿಗೆ ಸಮಯದಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ವಿಶೇಷ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗ್ರಾಮೀಣ ಬೇಸಿಗೆ ರಜೆ ಶಿಬಿರದಿಂದ ಮಕ್ಕಳಲ್ಲಿ ಕಲಿಕೆಯ ಜೊತೆಗೆ ಕ್ರೀಡೆ,ಸಾಹಿತ್ಯ,ವೃತ್ತ ಪತ್ರಿಕೆ ಓದುವಿಕೆ,ಬಾಲ್ಯದಲ್ಲಿ ಆಟಗಳು,ಜನಪದ ಸಾಹಿತ್ಯ ಪರಿಚಯಿಸುವ ಮೂಲಕ ಈ ಶಿಬಿರ ಮಕ್ಕಳ ಸರ್ವೋತ್ತೋಮುಖ ಬೆಳೆವಣೆಗೆ ಸಹಕಾರಿಯಾಗಿದೆ.

 ವಿಜಯಮಹಾಂತೇಶ ಮಲಗಿಹಾಳ, ಅಧ್ಯಕ್ಷರು ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ ಹುನಗುಂದ.

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group