ಮೂಡಲಗಿ- ಸಮೀಪದ ಘಟಪ್ರಭಾದಲ್ಲಿ ಜಗದ್ಗುರು ಗಂಗಾಧರ (ಜೆ ಜಿ) ಸಹಕಾರಿ ಸೊಸಾಯಿಟಿಯ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಏಳು ದಿನಗಳ ಕಾಲ ಬಾಲರೋಗ ಮತ್ತು ಸ್ವಸ್ಥವೃತ್ತ ವಿಭಾಗದ ವತಿಯಿಂದ ಜನನ ಕಲಿ-ನಲಿ ಬೇಸಿಗೆ ಯೋಗ ಶಿಬಿರ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಕ್ರಾಪ್ಟ್ ಡ್ರಾಯಿಂಗ್, ಡ್ಯಾನ್ಸ್ , ಸಲಾಡ್ ಕಾಂಪಿಟೆಶನ್,ವಚನ ಮಂತ್ರ ಪಠಣ,ಆರೋಗ್ಯದ ಬಗ್ಗೆ ವೈದ್ಯರಿಂದ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು.
ಇದರ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು ಮತ್ತು ಉಚಿತ ಸ್ವರ್ಣಬಿಂದುವನ್ನು ನೀಡಲಾಯಿತು.