spot_img
spot_img

ಪ್ರಗತಿ ಪಥದತ್ತ ಸುಣಧೋಳಿ ಸಹಕಾರ ಸಂಘ

Must Read

spot_img

ಮೂಡಲಗಿ: ಸಹಕಾರ ತತ್ವದಡಿ ಪ್ರಾರಂಭವಾದ ಸುಣಧೋಳಿ ಮಹಿಳಾ ಸಹಕಾರಿಯು ಪ್ರತಿವರ್ಷ ಪ್ರಗತಿ ಪಥದತ್ತ ಸಾಗುತ್ತಿರುವದು ಶ್ಲಾಘನೀಯ, ಉತ್ತಮವಾದ ಸಂಸ್ಥೆಯನ್ನು ಹುಟ್ಟುಹಾಕಲು ಮಹಿಳೆಯರಿಂದಲೆ  ಸಾಧ್ಯ,   ಸಹಕಾರಿಯು ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಯಲ್ಲಿ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿಗಳು ಹೇಳಿದರು.

ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಜರುಗಿದ ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿಯ  19ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರಿ ಸಂಸ್ಥೆಗಳು ಪ್ರಗತಿ ಹೊಂದಲು ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಮತ್ತು ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವೆ ಕಾರಣ ಎಂದರು.

ಸಹಕಾರಿಯ ಅಧ್ಯಕ್ಷೆ  ಭಾರತಿ ಸಹದೇವ ಕಮತಿ ಮಾತನಾಡಿ, ಸಹಕಾರಿಯು ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 36.26 ಕೋಟಿ ದುಡಿಯುವ ಬಂಡವಾಳ ಮತ್ತು 40.17 ಲಕ್ಷ ಶೇರು ಬಂಡವಾಳ ಹೊಂದಿ 66.90 ಲಕ್ಷ ಲಾಭ ಗಳಿಸಿ ಪ್ರಗತಿ ಪಥದತ ಸಾಗಿದೆ, ಈಗಾಗಲೇ ಆರು ಶಾಖೆಗಳನ್ನು ಹೊಂದಿದ್ದು ಶೀಘ್ರದಲ್ಲಿ ಇನ್ನು ನಾಲ್ಕು ಶಾಖೆ ಪ್ರಾರಂಭಿಸುವ ಯೋಜನೆಯನ್ನು  ಹಾಕಿಕೊಳ್ಳಲಾಗಿದೆ ಎಂದರು.

ಸಹಕಾರಿಯ ಉಪಾಧ್ಯಕ್ಷೆ  ಶಾಂತಾ ಪ್ರಕಾಶ ಪತ್ತಾರ ಮಾತನಾಡಿ, ಸಂಘವು  ಕೈಕೊಂಡಿರುವ  ಸೇವಾ ಕಾರ್ಯಗಳ ಜೊತೆಗೆ ಮುಂಬರುವ ದಿನಗಳಲ್ಲಿ ಸಹಕಾರಿ ಹಮ್ಮಿಕೊಳ್ಳಬಹುದಾದ ಇನ್ನಿತರ ಉಪಯುಕ್ತ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಸಹಕಾರಿಯ ನಿರ್ದೇಶಕಿಯರಾದ ವಿಮಲಾ ಹೊಟ್ಟಿಹೊಳಿ, ಶಿವಲೀಲಾ ಮದಭಾವಿ, ಈರವ್ವಾ ಪಾಟೀಲ, ಮೀನಾಕ್ಷಿ ಹೊಟ್ಟಿಹೊಳಿ, ಸವಿತಾ ಸಂಕಣ್ಣವರ, ಪ್ರಭಾವತಿ ಹೊಟ್ಟಿಹೊಳಿ, ಸ್ವಪ್ನಾ ವಾಲಿ, ಬಸವ್ವಾ ಪಾಶಿ, ಮತ್ತು ಶ್ಯಾಲವ್ವಾ ಮಾದರ ಮತ್ತು ಗೋಕಾಕ, ಮಮದಾಪೂರ, ಕುಲಗೋಡ, ಖಾನಟ್ಟಿ, ಕೊಣ್ಣೂರ ಶಾಖೆಗಳ ಸಲಹಾ ಸಮಿತಿ ಯವರು ಉಪಸ್ಥಿತರಿದ್ದರು.

ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಚಿದಾನಂದ ಶಿರಗುರ ವರದಿ ವಾಚನ ಮಂಡಿಸಿದರು.

ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಹೊಟ್ಟಿಹೊಳಿ ಸ್ವಾಗತಿಸಿ ನಿರೂಪಿಸಿದರು, ವೀರಣ್ಣ ಪತ್ತಾರ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!