ಬಿಸಿಲಿನ ತಾಪಮಾನ ಏರಿಕೆ: ಬಡವರ ಫ್ರಿಜ್‌ಗೆ ಬಂತು ಭಾರೀ ಬೇಡಿಕೆ

Must Read

ಬೀದರ – ಗಡಿ ಜಿಲ್ಲೆ ಬೀದರ ಅಂದರೆ ಬಿಸಿಲಿನ ನಗರ ಪ್ರದೇಶ ಎಂದು ಕರೆಯುತ್ತಾರೆ.ಬೆಂಗಳೂರಿನಲ್ಲಿ ಕೆಲಸ ಮಾಡುವ ಕೆಲವು ಅಧಿಕಾರಿಗಳಿಗೆ ಶಿಕ್ಷೆ ಕೊಡವು ಬದಲು ನಿಮ್ಮನ್ನ ಬೀದರ್ ಗೆ ವರ್ಗಾವಣೆ ಮಾಡುತ್ತೇನೆ ನೋಡಿ ಎಂದರೆ ಸಾಕು ಭಯ ಹುಟ್ಟುತ್ತದೆ. ಇದಕ್ಕೆ ಕಾರಣ ಬೀದರನ ಸುಡು ಸುಡು ಬಿಸಿಲು

ಬೀದರ್ ನಲ್ಲಿ ಇವತ್ತಿನ ಬಿಸಿಲಿನ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇದ್ದು ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತೆ ಆಗಿದೆ. ಬಿಸಿಲಿನ ಝಳಕ್ಕೆ ಕುಡಿಯುವ ನೀರು ಕೂಡ ಬಿಸಿಯಾಗುತ್ತಿದ್ದು ಜನರು ತಮ್ಮ ಮನೆಯಲ್ಲಿ ತಂಪು ನೀರು ಇಡಲು ಬಡವರ ಫ್ರಿಜ್ ಅಂದರೆ ಮಣ್ಣಿನ ಮಡಕೆಗೆ ಬಹಳ ಬೇಡಿಕೆ ಬಂದಿದೆ ಎಂದು ಹೇಳಬಹುದು.

ವಿವಿಧ ಆಕಾರಗಳ ಮಣ್ಣಿನ ಮಡಕೆಗಳು ಜನರನ್ನು ಆಕರ್ಷಿಸುತ್ತಿವೆ. ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ನೈಸರ್ಗಿಕ ತಂಪು ಕೂಡ ಸಿಗುತ್ತದೆ. ಫ್ರಿಡ್ಜ್ ನಲ್ಲಿನ ನೀರು ಆರೋಗ್ಯಕ್ಕೆ ಹಾನಿಕರವಾಗಿದ್ದು ಅನೇಕ ಶಾರೀರಿಕ ತೊಂದರೆಗಳಿಗೆ ಕಾರಣವಾಗುತ್ತದೆ. ಹೀಗಾಗಿಯೇ ಇಂದು ಮಡಕೆಗಳಿಗೆ ಭಾರೀ ಬೇಡಿಕೆ ಬಂದಿದೆ.

ನಗರದ ಪ್ರಮುಖ ರಸ್ತೆ ಮಡಿವಾಳ ಚೌಕ ಮತ್ತು ನೆಹರು ಸ್ಟೇಡಿಯಂ ರಸ್ತೆಗಳಲ್ಲಿ ಎತ್ತುತ್ತಿರುವ ಬಡವರ ಫ್ರಿಜ್ ಮಡಕೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಬೇಸಿಗೆಯ ಬಿಸಿಲಿನ ಧಗೆ, ಅದರಲ್ಲೂ ಬಿಸಿಲಿನೊಂದಿಗೆ ದಾಹವೂ ಈಗ ಹೆಚ್ಚುತ್ತಿದೆ. ಜನರು ಒಂದೆಡೆ ತಂಪು ಪಾನೀಯ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಇನ್ನೊಂದಡೆ ಧಗೆಯ ನಡುವೆಯೂ ನೈಸರ್ಗಿಕವಾಗಿ ನೀರನ್ನು ತಣ್ಣಗಾಗಿ ಇಡುವ ಮಣ್ಣಿನ ಮಡಕೆಗಳ ವ್ಯಾಪಾರ ಗರಿಗೆದರಿದೆ ಎಂದು ಹೇಳಬಹುದು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group