spot_img
spot_img

ವಿಕಲಚೇತನರ ಸಾಧನೆ ಇಂದು ಬಹಳವಿದೆ ಅವರಿಗೆ ಪ್ರೋತ್ಸಾಹ ನೀಡಿರಿ – ಮುರುಘೇಂದ್ರ ಸ್ವಾಮಿಗಳು

Must Read

spot_img
- Advertisement -

ಮುನವಳ್ಳಿ ಃ “ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಇಂದು ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳನ್ನು ಒಳಗೊಂಡು ಮುನವಳ್ಳಿಯಲ್ಲಿ ಜರುಗುತ್ತಿರುವುದು ತುಂಬ ಸಂತಸದ ಸಂಗತಿ. ಅಲಿಕೋಂ ಸಂಸ್ಥೆಯ ವೈದ್ಯರ ತಂಡದ ಜೊತೆಗೆ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳ ವಿವಿಧ ವಿಕಲತೆಗಳ ತಪಾಸಣೆಗೆ ನುರಿತ ವೈದ್ಯರು ಇಲ್ಲಿ ಉಪಸ್ಥಿತರಿದ್ದು ಈ ಶಿಬಿರದ ಉಪಯೋಗವನ್ನು ಎಲ್ಲ ಪಾಲಕರು ಪಡೆಯಬೇಕು.ಇಂದು ಮಕ್ಕಳನ್ನು ಪ್ರೀತಿಯಿಂದ ಕಾಣಿರಿ. ವಿಕಲಚೇತನರಲ್ಲಿ ಅಗಾಧ ಪ್ರತಿಭೆ ಇರುತ್ತದೆ.ಗಾನಯೋಗಿ ಪಂಚಾಕ್ಷರ ಗವಾಯಿಗಳು ನಮ್ಮ ಮುಂದಿರುವ ನಿದರ್ಶನ ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಕಲಚೇತನರ ಸಾಧನೆಯನ್ನು ನೋಡಿದಾಗ ಅವರಲ್ಲಿನ ಅಗಾಧವಾದ ಪ್ರತಿಭೆ ಕಂಡು ಬರುತ್ತದೆ.ಈ ದಿಸೆಯಲ್ಲಿ ವಿಕಲಚೇತನ ಮಕ್ಕಳಲ್ಲಿ ಪ್ರೀತಿಯ ಪ್ರೋತ್ಸಾಹ ತಂದೆತಾಯಂದಿರು ನೀಡುವುದು ಮಹತ್ವವಾಗಿದೆ.ಅವರಿಗೆ ಪ್ರೀತಿಯ ಜೊತೆಗೆ ಪ್ರೋತ್ಸಾಹ ನೀಡಿರಿ”ಎಂದು ಮುನವಳ್ಳಿ ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುನವಳ್ಳಿ ಪುರಸಭೆ ಅಧ್ಯಕ್ಷರಾದ ಸಿ.ಬಿ.ಬಾಳಿ, ಸವದತ್ತಿ ಎ,ಪಿ,ಎಂ,ಸಿ ಅಧ್ಯಕ್ಷರಾದ ಚಂದ್ರು ಪೂಜೇರ(ಜಂಬ್ರಿ),  ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಮಾದಾರ, ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, ರಾಮದುರ್ಗ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಜಿ.ಎನ್.ಶೀಲವಂತಮಠ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ, ಎಸ್,ಬಿ.ಬೆಟ್ಟದ, ಡಿ,ಎಲ್.ಭಜಂತ್ರಿ, ಆರ್,ಎಸ್,ಸಂಕನ್ನವರ, ಎಸ್,ಎಂ.ಬಡಿಗೇರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಎಸ್,ಹೊಂಗಲ, ವ್ಹಿ,ಪಿ,ನಾಗಪ್ಪಗೋಳ, ಮೇವಾದ ಅಧ್ಯಕ್ಷರಾದ ಎಂ,ಎಸ್,ಕೊಳಚಿ,ದೈಹಿಕ ಶಿಕ್ಷಕರಾದ ಎಸ್,ಜಿ,ತುಡುವೇಕರ,ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ,ಸುಧೀರ,ವಾಗೇರಿ,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮೀರಾ ಮುರನಾಳ, ಗುರುದೇವಿ ಮಲಕನ್ನವರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಾರುತಿ ಕರಡಿಗುಡ್ಡ, ಪುರಸಭೆ ಉಪಾಧ್ಯಕ್ಷರಾದ ಹಿರೇಮೇತ್ರಿ.ಸದಸ್ಯರಾದ ಚೂರಿಖಾನ ಮುಖ್ಯಾದ್ಯಾಪಕರಾದ ಪಿ.ಎಸ್.ಕಮತಗಿ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕ ಶಿಕ್ಷಕಿಯರು ವಿವಿಧ ಗ್ರಾಮ ಪಂಚಾಯಿತಿ ಗಳಿಂದ ಆಗಮಿಸಿದ್ದ ವ್ಹಿ.ಆರ್.ಡಬ್ಲು ಗಳು ಉಪಸ್ಥಿತರಿದ್ದರು.

- Advertisement -

ಇದೇ ಸಂದರ್ಭದಲ್ಲಿ ಸವದತ್ತಿ ಮತ್ತು ರಾಮದುರ್ಗ ತಾಲೂಕಿನಿಂದ ಆಗಮಿಸಿದ್ದ ವಿವಿಧ ವಿಕಲತೆಗಳನ್ನು ತಪಾಸಣೆ ಮಾಡಲು ಆಗಮಿಸಿದ್ದ ವೈದ್ಯರಾದ ಡಾ.ಎಚ್.ಎಂ.ಮಲ್ಲನಗೌಡರ.(ಕಿವಿ.ಮೂಗು,ಗಂಟಲು ತಜ್ಞರು),ಡಾ.ಸಲೀಂ ಕಿತ್ತೂರ,ಡಾ.ಮಂಜುನಾಥ ಬಾರಕೇರ,(ಎಲವು ಕೀಲು ತಜ್ಞರು)ಡಾ,ವರುಣ ಬೀಳಗಿ(ಚಿಕ್ಕಮಕ್ಕಳ ತಜ್ಞರು) ,ಡಾ,ಆನಂದ ಬಾಳಿ,(ನೇತ್ರ ತಜ್ಞರು) ಅಲಿಕೊಂ ಸಂಸ್ಥೆಯ ಜಿಗೇಶಾ ಪಟೇಲ ಸೇರಿದಂತೆ ವೈದ್ಯರು ವಿವಿಧ ವಿಕಲತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣೆಯನ್ನು ಕೈಗೊಂಡರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತಿ ಹೋಟಿಯವರು ಪ್ರಾರ್ಥನಾ ಗೀತೆ ಹೇಳಿದರು. ವೈ.ಬಿ.ಕಡಕೋಳ ಸ್ವಾಗತಿಸಿದರು. ಶಿಕ್ಷಕ ಯಲ್ಲಪ್ಪ ತಂಗೋಜಿ ಕಾರ್ಯಕ್ರಮ ನಿರೂಪಿಸಿದರು

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group