ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಅ.7ರಂದು ಕಲ್ಲೋಳಿ ಪಟ್ಟಣದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೃಹತ ಸಮಾಮೇಶಕ್ಕೆ ಹಾಗೂ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಗುರುವಾರದಂದ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದು ಅವರ ಹೋರಾಟಕ್ಕೆ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಎಲ್ಲರೂ ಬೆಂಬಲ ನೀಡುತ್ತಿದ್ದೇವೆ ಎಂದ ಅವರು ಅರಭಾವಿ ಕ್ಷೇತ್ರದ ಶಾಸಕರು ಬೆಂಬಲ ಸೂಚಿಸುವದಾಗಿ ಪತ್ರಿಕಾ ಹೇಳಿಕೆ ನೀಡುವ ಬದಲು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಶ್ರೀಗಳ ಹೋರಾಟಕ್ಕೆ ಬೆಂಬಲ ನೀಡಿದರೆ ಉತ್ತಮ ಎಂದರು.
ಕಾಂಗ್ರೇಸ್ ಮುಖಂಡ ಬಿ ಬಿ ಹಂದಿಗುಂದ ಮಾತನಾಡಿ, ಸಾಕಷ್ಟ ವರ್ಷಗಳಿಂದ ಶ್ರೀಗಳು ಅನೇಕ ರೂಪದಲ್ಲಿ ಹೋರಾಟ ಮಾಡಿದರು ಸರ್ಕಾರ ಮಾತ್ರ ಅವರ ಹೋರಾಟಕ್ಕೆ ಸ್ಪಂದಿಸದೇ ಇರುವುದು ವಿಪರ್ಯಸದ ಸಂಗತಿಯಾಗಿದ್ದು, ಶ್ರೀಗಳು ಪ್ರತಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪಂಚಮಸಾಲಿ ಸಮಾಜದ ಜನರನ್ನು ಒಂದು ಗೂಡಿಸುವಂತ ಕಾರ್ಯ ಮಾಡುತ್ತಿರುವುದು ಶ್ಲಾಘನೀವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರಾದ ಗುರುನಾಥ ಗಂಗನ್ನವರ, ಶಿವಾನಂದ ಮಡಿವಾಳ ಇದ್ದರು.