ಸಿಂದಗಿ: ಕಳೆದ 18 ತಿಂಗಳು ಸಮ್ಮಿಶ್ರ ಅಧಿಕಾರದಲ್ಲಿ ಜೆಡಿಎಸ್ ಪಕ್ಷ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದಲ್ಲದೆ ಜನಪರ ಯೋಜನೆಗಳನ್ನು ನೀಡಿದೆ ಮುಂಬರುವ 2023 ರ ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸಿದ್ದು ಹೊಸ ಹೊಸ ಯೋಜನೆಗಳನ್ನು ತರುವಲ್ಲಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಅದಕ್ಕೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ನಿಮ್ಮ ಮನೆ ಮಗಳನ್ನು ವಿಧಾನ ಸೌಧಕ್ಕೆ ಕಳುಹಿಸಿ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಮನವಿ ಮಾಡಿದರು.
ಪಟ್ಟಣದ 23 ನೇ ವಾರ್ಡಿನಲ್ಲಿ ಅವರು ಮನೆ ಮನೆಗೆ ಭೇಟಿ ನೀಡಿ ಪಂಚರತ್ನ ಯೋಜನೆಯ ಕರಪತ್ರ ವಿತರಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ರೂಪಿಸಿದ್ದು ಇದರಿಂದ ಗ್ರಾಮೀಣ ಮಟ್ಟದಲ್ಲಿರುವ ಸೌಲಭ್ಯ ವಂಚಿತ ಜನರಿಗೆ ಪ್ರಮುಖ ಸೌಲಭ್ಯಗಳನ್ನು ನೀಡಲು ಹೊರಟಿದ್ದಾರೆ ಅವರ ಅಧಿಕಾರದಲ್ಲಿ ನುಡಿದಂತೆ ನಡೆದುಕೊಂಡ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದಾರೆ ಕಾರಣ ಅವರ ಕೈಯಲ್ಲಿ ಅಧಿಕಾರ ಕೊಡಿ ಎಂದರು.
ಇದೆ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಲ್ಲನಗೌಡ ಪಾಟೀಲ, ಭೀಮನಗೌಡ ಪಾಟೀಲ, ಭೀಮು ರತ್ನಾಕರ, ಮಹಿಬೂಬ ಗಿರಣಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.