spot_img
spot_img

ಈ ಭಾಗದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಿ: ವಸತಿ ಸಚಿವ ವಿ. ಸೋಮಣ್ಣ ಮತಯಾಚನೆ

Must Read

- Advertisement -

ಸಿಂದಗಿ: ಉಪ ಚುನಾವಣೆ ನಿಮಿತ್ತ ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರವಾಗಿ ಆಲಮೇಲ ಪಟ್ಟಣದ ಎ.ಕೆ.ನಂದಿ ಹೈಸ್ಕೂಲ ಆವರಣದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಅಭ್ಯರ್ಥಿ ರಮೇಶ ಭೂಸನೂರ, ಜೇವರಗಿ ಮಾಜಿ ಶಾಸಕ ದೊಡ್ಡಪಗೌಡ ಪಾಟೀಲ (ನರಿಬೊಳ),ಮಾಜಿ ಜಿಪಂ ಬಿ.ಆರ್.ಯಂಟಮಾನ ಇವರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚಿಸಿದರು.

ನಂತರ ಮಾತನಾಡಿದ ಸಚಿವ ವಿ ಸೋಮಣ್ಣ ಅವರು, ಈ ಭಾಗದ ಸರ್ವಾಂಗೀಯ ಅಭಿವೃದ್ಧಿ ಆಗಬೇಕಾದರೆ ಅದೂ ಕೇವಲ ಬಿಜೆಪಿಯ ರಮೇಶ ಭೂಸನೂರರಿಂದ ಮಾತ್ರ ಸಾಧ್ಯ. ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರುಗಳು ಸುಳ್ಳಿನ ಸರ್ದಾರರಾಗಿದ್ದಾರೆ. ಜನ ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ. ಈ ಭಾಗದ ಜನತೆ ಬಿಜೆಪಿ ಪಕ್ಷದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ನೋಡಿದರೆ ಖಂಡಿತವಾಗಿ ನಮ್ಮ ಅಭ್ಯರ್ಥಿ ರಮೇಶ ಭೂಸನೂರ 30 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

50 ವರ್ಷಗಳ ಹಿಂದೆ ಮೋದಿ ಭಾರತದ ಪ್ರಧಾನಿ ಆಗಿದ್ದರೆ ತಂತ್ರಜ್ಞಾನದಿಂದ ಮೇಲ್ಮಟ್ಟಕೇರಿ ಎಲ್ಲಾ ಮಟ್ಟದಲ್ಲಿ ಭಾರತ ಜಗತ್ತಿನಲ್ಲಿ ಅಭಿವೃದ್ದಿ ಹೊಂದಿರುವ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿತ್ತು ಎರಡು ವರ್ಷ ಕೊರೊನಾದಂಥ ಸಂಕಷ್ಟದಲ್ಲಿ ಸೂಕ್ತ ರೀತಿಯಲ್ಲಿ ಜಾಗೃತೆಯಿಂದ ದೇಶವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಅದಕ್ಕೆ ಜಗತ್ತೇ ಮೋದಿಯವರ ನಿರ್ಧಾರವನ್ನು ಮೆಚ್ಚಿಕೊಂಡಿದೆ. ಜಗತ್ತಿನಲ್ಲೆ ಉಚಿತವಾಗಿ ವ್ಯಾಕ್ಸಿನ (ಲಸಿಕೆ)ನೀಡಿರುವ ಏಕೈಕ ಪ್ರಧಾನಿ ಮೋದಿ ಮಾತ್ರ ಎಂದು ಹೇಳಿದರು.

- Advertisement -

ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ಕಳೆದ ಎರಡು ಅವಧಿಗೆ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಇತ್ತು. ಈ ಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವುದರಿಂದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಯ ಬಹು ದೊಡ್ಡ ಕನಸು ಕಟ್ಟಿಕೊಂಡು ಸಾಗುತ್ತಿದ್ದಾರೆ ಈ ಭಾಗದ ಜನರ ಬೇಡಿಕೆ ಹಾಗೂ ಅಭಿವೃದ್ಧಿಗೋಸ್ಕರ ಪ್ರಾಮಾಣಿಕವಾಗಿ ಸ್ಪಂದಿಸಿ ಮಾದರಿ ತಾಲೂಕು ಮಾಡುತ್ತೇನೆ. ಅಭಿವೃದ್ಧಿಗಾಗಿ ಈ ಭಾಗದ ಜನತೆ ನನಗೆ ಬಹು ದೊಡ್ಡ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಈ ಸಂದರ್ಭದಲ್ಲಿ ಜೇವರಗಿ ಮಾಜಿ ಶಾಸಕರ ದೊಡ್ಡಪ್ಪಗೌಡ ಪಾಟೀಲ ನರಬೊಳ, ಮಾಜಿ ಜಿಪಂ ಬಿ.ಆರ್.ಯಂಟಮಾನ ಡಾ.ಸಂಜೀವಕುಮಾರ ಯಂಟಮಾನ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಆಲಮೇಲ ಬ್ಲಾಕ ಬಿಜೆಪಿ ಅಧ್ಯಕ್ಷ ಅಶೋಕ ವಾರದ. ಭೀಮಾಶಂಕರ ಬಂಡಗಾರ , ಅಪ್ಪು ಶಟ್ಟಿ .ಹರೀಶ ಯಂಟಮಾನ, ಭೀಮಾಶಂಕರ ಕೋಟಾರಗಸ್ತಿ. ವಿಶ್ವನಾಥ ಹಿರೇಮಠ, ರಾಹುಲ ಯಂಟಮಾನ, ತಳವಾರ ಸಮಾಜದ ತಾಲೂಕ ಅಧ್ಯಕ್ಷ ಶಿವುಕುಮಾರ ಗುರಕಾರ. ಸುರೇಶ ಬೋರನಾಯಕ, ಅಮೃತ ಕೊಟ್ಟಲಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group