spot_img
spot_img

ಬಿಜೆಪಿ ಕಿತ್ತೊಗೆಯಲು ನಮ್ಮನ್ನು ಬೆಂಬಲಿಸಿ – ಅರವಿಂದ ದಳವಾಯಿ

Must Read

- Advertisement -

ಅರಭಾವಿ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿನ ಮಂತ್ರ

ಮೂಡಲಗಿ – ಬರುವ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಆರು ಜನ ಆಕಾಂಕ್ಷಿಗಳಿದ್ದೆವು.  ಈಗ ಯಾರಿಗೇ ಟಿಕೆಟ್ ಕೊಟ್ಟರೂ ಕೂಡ ಎಲ್ಲರೂ ಕೂಡಿ ಆ ವ್ಯಕ್ತಿಯ ಪರವಾಗಿ ತನುಮನಧನದಿಂದ ಪ್ರಾಮಾಣಿಕವಾಗಿ ಶ್ರಮಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಇದು ಅರಭಾವಿ ಕ್ಷೇತ್ರದ ಜನರಿಗೆ ನಮ್ಮ ವಚನ. ಅರಭಾವಿ ಶಾಸಕರನ್ನು ಶತಾಯಗತಾಯ ಸೋಲಿಸಬೇಕು. ಆದ್ದರಿಂದ ಬಿಜೆಪಿಯನ್ನು ಕಿತ್ತೊಗೆಯಲು ನಮ್ಮನ್ನು ಬೆಂಬಲಿಸಿ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.

ಮೂಡಲಗಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಭೀಮಪ್ಪ ಹಂದಿಗುಂದ, ಮಲ್ಲಿಕಾರ್ಜುನ ಕಬ್ಬೂರ, ಭೀಮಪ್ಪ ಗಡಾದ, ಲಕ್ಕಣ್ಣ ಸವಸುದ್ದಿ, ರಮೇಶ ಉಟಗಿಯವರ ಜೊತೆಗೂಡಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು ಮಾತನಾಡಿದರು.

- Advertisement -

ಅರಭಾವಿ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು ಅದನ್ನು ನಾವು ಕಳೆದುಕೊಂಡೆವು ಈಗ ಮತ್ತೆ ಅದನ್ನು ಪಡೆಯುತ್ತೇವೆ. ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಹಿಳೆಗೆ ೨೦೦೦ ರೂ, ಉಚಿತ ೨೦೦ ಯುನಿಟ್ ವಿದ್ಯುತ್ ಹಾಗೂ ಬಡವರಿಗೆ ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದರು.

ಇನ್ನೊಬ್ಬ ಆಕಾಂಕ್ಷಿ ಭೀಮಪ್ಪ ಗಡಾದ ಮಾತನಾಡಿ, ೨೦ ವರ್ಷಗಳಿಂದ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ಗಿದೆ ಅದರ ರಕ್ಷಣೆಗೆ ನಾವು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರದಂತೆ ಒಗ್ಗಟ್ಟಾಗಿ ಈ ಸಲ ಚುನಾವಣೆಗೆ ಸ್ಪರ್ಧಿಸಿ ಜಾರಕಿಹೊಳಿ ಸಾಮ್ರಾಜ್ಯವನ್ನು ಸೋಲಿಸಲಾಗುವುದು ಎಂದರು.

ರಮೇಶ ಉಟಗಿ ಮಾತನಾಡಿ, ಅರಭಾವು ಕ್ಷೇತ್ರದಿಂದ ನಾವು ಆರು ಜನರು ಸ್ಪರ್ಧಿಸಲು ಟಿಕೆಟ್ ಅರ್ಜಿ ಹಾಕಿದ್ದರಿಂದ ಗೊಂದಲವಾಗಿತ್ತು. ಆದರೆ ಈಗ ನಾವು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಂದಾಗಿ ಯಾರಿಗೇ ಟಿಕೆಟ್ ಸಿಕ್ಕರೂ ಸ್ಪರ್ಧೆ ಮಾಡಿ ಅರಭಾವಿ ಕ್ಷೇತ್ರದಲ್ಲಿ ಆಯ್ಕೆಯಾಗುತ್ತೇವೆ ಎಂದರು

- Advertisement -

ಲಕ್ಕಣ್ಣ ಸವಸುದ್ದಿ – ಜನರ ಬೇಡಿಕೆ ಏನೇ ಇದ್ದರೂ ಈಡೇರಿಸಲು ಬಂದಿದ್ದೇವೆ. ಕಲ್ಲೋಳಿಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮ ಜಾಗದ ಅಭಾವದಿಂದ  ರದ್ದಾಗಿ ಮೂಡಲಗಿಯಲ್ಲಿ ನಡೆಯಲಿದೆ. ಇದೇ ದಿ. ೧೫ ರಂದು ನಮ್ಮ ನಾಯಕರಾದ ಸಿದ್ಧರಾಮಯ್ಯ ಮೂಡಲಗಿಗೆ ಪ್ರಜಾಧ್ವನಿ ಯಾತ್ರೆಗೆ ಆಗಮಿಸಲಿದ್ದಾರೆ ಎಂದರು

ಭೀಮಪ್ಪ ಹಂದಿಗುಂದ  ಮಾತನಾಡಿ, ಒಂದೇ ವೇದಿಕೆಗೆ ಬಂದಿದ್ದೇವೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಿವಾರಣೆಗೆ ನಾವು ನಿಂತಿದ್ದೇವೆ. ಅದು ಎಷ್ಟೇ ದೊಡ್ಡ ಮರ ಇದ್ದರೂ ಗೆದ್ದಲಿನಂಥ ಸಣ್ಣ ಹುಳು ಕೂಡ ಅದನ್ನು ಕೆಡವುತ್ತದೆ ಹಾಗೆಯೇ ನಾವೆಲ್ಲ ಒಗ್ಗಟ್ಟಾದರೆ ಬಾಲಚಂದ್ರ ಜಾರಕಿಹೊಳಿ ಈ ಸಲ ಸೋಲುವುದು ಖಚಿತ ಎಂದರಲ್ಲದೆ,  ಈವರೆಗೆ ಈ ಶಾಸಕರು ಎಲ್ಲ ಸರ್ಕಾರಿ ಕಾಮಗಾರಿಗಳ ಮೇಲೆ ಬಿಎಲ್ ಜೆ ಎಂದು ತಮ್ಮ ಹೆಸರು ಹಾಕಿಕೊಂಡದ್ದೇ ಇವರ ಘನಕಾರ್ಯ ಎಂದರು.

ಎಸ್ ಆರ್ ಸೋನವಾಲಕರ, ಅರಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಮಗದುಮ್, ವಿರುಪಾಕ್ಷಪ್ಪ ಮುಗಳಖೋಡ, ಭಗವಂತ ಪಾಟೀಲ, ಗುಂಡಪ್ಪ ಕಮತೆ,  ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ ಅರಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ವರದಿ: ಉಮೇಶ ಬೆಳಕೂಡ

- Advertisement -

1 COMMENT

Comments are closed.

- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group