- Advertisement -
ಬೀದರ- ಜಮೀನು ಸರ್ವೇಗಾಗಿ ರೂ. ೭೫ ಸಾವಿರ ಲಂಚ ಪಡೆಯುವಾಗ ಔರಾದ ಭೂಮಾಪನ ಇಲಾಖೆ ಅಧಿಕಾರಿ ಸಂತೋಷ ಪ್ರಹ್ಲಾದ ಬೋಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಔರಾದ್ ಪಟ್ಟಣದ ಭೂದಾಖಲೆಗಳ ಕಚೇರಿಯಲ್ಲಿ ದೂರುದಾರ ಮಹ್ಮದ್ ಶೌಕತ ಅಲಿ ವಡಗಾಂ(ಡಿ)ಗ್ರಾಮದವರಿಂದ 1.5ಲಕ್ಷದ ಹಣದ ಪೈಕಿ 75 ಸಾವಿರ ಹಣ ಪಡೆಯುವಾಗ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ಮತ್ತವರ ತಂಡದಿಂದ ದಾಳಿ ಅಧಿಕಾರಿ ಟ್ರ್ಯಾಪ್ ಆಗಿದ್ದಾನೆ
ಸರ್ವೆ ನಂ.309/2/4ರ 20 ಎಕರೆ ಸರ್ವೆ ಮಾಡಲು ಈ ಅಧಿಕಾರಿ ಹಣದ ಬೇಡಿಕೆ ಇಟ್ಟಿದ್ದು ಕಲಬುರಗಿ ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.
ಮುಂದಿನ ವಿಚಾರಣೆ ನಡೆದಿದೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ