spot_img
spot_img

ವಿಶಿಷ್ಟ ಮಾದರಿಯ ಶಿಕ್ಷಕಿ ಸುಶೀಲಾ ಲಕ್ಷ್ಮೀ ಕಾಂತ ಗುರವ

Must Read

ಶಿಕ್ಷಕಿಯಾಗಿ, ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಗಳನ್ನು ಮಾಡಿದ ಒಬ್ಬ ವಿಶಿಷ್ಟ ವ್ಯಕ್ತಿ ಸುಶೀಲಾ ಲಕ್ಷ್ಮಿಕಾಂತ ಗುರವ ಅವರು.

ಪರಿಚಯ:

ಇವರ ಸೇವೆ ಪ್ರಾರಂಭವಾದದ್ದು 11/11/1999 ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಬಡಸ್ (KH) ಬೆಳಗಾವಿ ತಾಲೂಕಿನಲ್ಲಿ.

ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು ನಿರ್ಗತಿಕ ಹೆಣ್ಣು ಮಗಳಿಗೆ ಶಿಕ್ಷಣವನ್ನು ಕೂಡ ನೀಡಿದ್ದಾರೆ. ಮೊದಲು ಕಾರ್ಯನಿರ್ವಹಿಸುತ್ತಿದ್ದ ಬಡಸ ಗ್ರಾಮದ ಒಬ್ಬ ನಿರ್ಗತಿಕ, ತಾಯಿಯ ಮುಖವೇ ನೋಡದ ವಿದ್ಯಾರ್ಥಿನಿ ಸಂಗೀತಾ ಸುಣಗಾರ ಇವಳಿಗೆ ಆಸರೆ ಕೊಟ್ಟು ತಮ್ಮ ಮಕ್ಕಳೊಂದಿಗೆ ಸಲುಹಿ 6 ನೇ ತರಗತಿಯಿಂದ ಉನ್ನತ ಹಂತದ ದವರೆಗೆ ಶಿಕ್ಷಣ ಕೊಡಿಸಿದರು. ಸಂಗೀತಾ ಈಗ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ.

ಶಾಲಾ ಆಸ್ತಿ ರಕ್ಷಣೆ:

2010 ರಿಂದ 2013 ರ ಅವಧಿಯಲ್ಲಿ ಶಾಲಾ ಪ್ರಭಾರಿ ಪ್ರಧಾನ ಗುರು ಮಾತೆಯಾಗಿ ಕಾರ್ಯನಿರ್ವಹಿಸುವಾಗ ಶಾಲಾ ಆವರಣದಲ್ಲಿ ಮೊದಲೇ ಸಾರ್ವಜನಿಕರಿಂದ ಅನಧಿಕೃತವಾಗಿ ನಿರ್ಮಿತವಾಗಿದ್ದ ಮಂದಿರಗಳನ್ನು ಎಸ್ಡಿಎಂಸಿ ಇವರ ಸಹಕಾರದಿಂದ ನ್ಯಾಯಾಲಯದಲ್ಲಿ ದಾವಾ ಹೂಡಿ ತಡೆಯಾಜ್ಞೆ ತಂದು ಕೋರ್ಟ್ ಆದೇಶದಂತೆ ತೆರವುಗೊಳಿಸಿ, ವರ್ಗ ಕೊಠಡಿಗಳ ಸಮಸ್ಯೆ ಇದ್ದದರಿಂದ ಇಲಾಖೆಯಿಂದ ಎರಡು ಹೊಸ ಕೊಠಡಿಗಳನ್ನು ಮಂಜೂರಾತಿ ಮಾಡಿಸಿ ನಿರ್ಮಿಸಲು ಅನುವು ಮಾಡಿಕೊಟ್ಟರು.

ಶಾಲೆ ಉನ್ನತಿಕರಣ:

ಆರನೇ ತರಗತಿಯವರೆಗೆ ಮಾತ್ರ ನಡೆಯುತ್ತಿದ್ದ ವರ್ಗಗಳನ್ನು ಉನ್ನತೀಕರಿಸಿ ಏಳನೇ ತರಗತಿಯನ್ನು 2011-12 ನೇ ಸಾಲಿನಲ್ಲಿ ಪ್ರಾರಂಭಿಸಿದರು.2015 ನೇ ಸಾಲಿನ ಏಳನೇ ವರ್ಗದ ಶಿಕ್ಷಕಿಯಾಗಿ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಸಂಬಂಧಪಟ್ಟಂತ ಅನನ್ಯ ಪುಸ್ತಕ ಹೊರತಂದಿದ್ದು ಈ ಪುಸ್ತಕದ ಬಿಡುಗಡೆಯನ್ನು ಆಗಿನ ಡಯಟ್ ಪ್ರಾಂಶುಪಾಲರಾಗಿದ್ದ ಡಿ. ಎಂ. ದಾನೋಜಿರವರು ಬಿಡುಗಡೆಗೊಳಿಸಿದ್ದರು.

ಈ ಅನನ್ಯ ಪುಸ್ತಕಕ್ಕೆ ಇವರೇ ಮುನ್ನುಡಿ ಬರೆದಿದ್ದರು. ಕಾರ್ಯಕ್ರಮದ ಕುರಿತು ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದರು.

Covid -19 ವಿದ್ಯಾಗಮ ಶಿಕ್ಷಣ:

2020-21 ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ವರ್ಗಕ್ಕೆ ಸಂಬಂಧಿಸಿದ ಮಕ್ಕಳು ಕೋವಿಡ್ ನಿಮಿತ್ತ ಮನೆಯಲ್ಲಿ ಅಭ್ಯಾಸದಲ್ಲಿ ತೊಡಗುವಂತೆ ಒಂದು ತಿಂಗಳ ವೇತನವನ್ನು ವ್ಯಯಿಸಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿ ಕಲಿಕೆಯಲ್ಲಿ ತೊಡಗುವಂತೆ ನೋಡಿಕೊಂಡರು.

ಈ ಒಂದು ವಿಶೇಷ ಕಾರ್ಯವನ್ನು ಮೆಚ್ಚಿ BEO,DDPI, Diet Principal ಎಲ್ಲರೂ ಅಭಿನಂದನಾ ಪತ್ರದ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಮಾನ್ಯ ಆಯುಕ್ತರಿಂದ ವಿದ್ಯಾಗಮ 2020 ಭೂಮಿಕೆ ಪುಸ್ತಕ ಬಿಡುಗಡೆ.

ಸನ್ಮಾನ:

ಕೋವಿಡ್ 19 ಸಮಯದಲ್ಲಿ ಮಕ್ಕಳೊಂದಿಗೆ ಸಂಪರ್ಕದಲ್ಲಿ ಇದ್ದು ಶಿಕ್ಷಕಿ ನಿರ್ವಹಿಸಿದ ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡ ವಿದ್ಯಾಗಮ 2020 ಭೂಮಿಗೆ ಪುಸ್ತಕವನ್ನುಹೊರತಂದು ಅಪರ ಆಯುಕ್ತರು ಧಾರವಾಡ ಮೇಜರ್ ಸಿದ್ದಲಿಂಗಯ್ಯ ಹಿರೇಮಠ್ ಇವರು ದಿನಾಂಕ 20/11/2020 ರಂದು ಡಯಟ್ ಬೆಳಗಾವಿಯಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಇವರ ಪುಸ್ತಕವನ್ನು ಬಿಡುಗಡೆಗೊಳಿಸಿ ಈ ಶೈಕ್ಷಣಿಕ ಕಾರ್ಯದ ಕುರಿತು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಶಿಸಿ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ತ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಅಷ್ಟೇ ಅಲ್ಲದೆ 7 ನೇ ವರ್ಗದ ಮಕ್ಕಳ ಬೀಳ್ಕೊಡುವ ಸಮಾರಂಭದಲ್ಲಿ ಎಲ್ಲ ಮಕ್ಕಳಿಗೂ ಪದಕೋಶ, ಕಂಪಾಸ್ ಬಾಕ್ಸ್ ಕಾಣಿಕೆ ಈ ರೀತಿಯಾಗಿ ಕೊಡುತ್ತಾ ಬಂದಿದ್ದಾರೆ.

ಇಲಾಖೆಯಿಂದ ನಡೆಯುವಂತ ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪತ್ರಗಳನ್ನು ಮತ್ತು ವಿಜೇತ ಮಕ್ಕಳಿಗೆ ಬಹುಮಾನವಾಗಿ ನಿಬಂಧ ಪುಸ್ತಕ, ಗ್ರಾಮರ್ ಪುಸ್ತಕಗಳನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. ಹುಟ್ಟುಹಬ್ಬ. ವಿವಾಹ ವಾರ್ಷಿಕೋತ್ಸವ ನಿಮಿತ್ತ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಅವರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿ ಅವರೊಂದಿಗೆ ಆಚರಣೆ ಮಾಡಿಕೊಳ್ಳುವುದು ಕೋವಿಡ್ ಸಮಯದಲ್ಲಿ ಶಾಲಾ ಪರಿಸರದಲ್ಲಿರುವ ರಹವಾಸಿಗಳಿಗೆ ಕೈಲಾದಷ್ಟು ಧನಸಹಾಯ.

ದಿನಾಂಕ 20/04/2021 ರಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ ) ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿಯ ಅಧ್ಯಕ್ಷೆಯನ್ನಾಗಿ ನೇಮಕ.

13 /06 /2021 ರಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಬೆಳಗಾವಿ ವತಿಯಿಂದ ಅಂತರ್ಜಾಲ ಆಧಾರಿತ ಅಂತರ್ ರಾಜ್ಯ ಮಟ್ಟದ ಟಂಕಾ ರಚನೆ ಸ್ಪರ್ಧೆಯನ್ನು ಏರ್ಪಡಿಸಿ ಯಶಸ್ವಿಗೊಳಿಸಿ ಗೊಳಿಸಲಾಯಿತು.

ಟಂಕಾಸಿರಿ ಕೃತಿ ಬಿಡುಗಡೆ:

20/04/2022 ರಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆಯಲ್ಲಿ 15 ತಾಲೂಕ ಘಟಕದ ಅಧ್ಯಕ್ಷರಿಗೆ ಪದಗ್ರಹಣ ನನ್ನ *ಟಂಕಾಸಿರಿ ಸಂಕಲನ ಕೃತಿಯನ್ನು* ನಿವೃತ್ತ ನಿರ್ದೇಶಕರು ಪ್ರೌಢ ಶಿಕ್ಷಣ ಮಂಡಳಿಯ ಡಿ ಎಂ ಧಾನೋಜಿ ಸರ್ ಇವರು ಮತ್ತು ಡಾಕ್ಟರ್ ಸರಜೂ ಕಾಟ್ಕರ ಹಿರಿಯ ಸಾಹಿತಿಗಳು ಬಿಡುಗಡೆಗೊಳಿಸಿ ಲೋಕಾರ್ಪಣೆ ಮಾಡಿದರು.

ಪ್ರಶಸ್ತಿಗಳು / ಸನ್ಮಾನಗಳು:

ಸುಶೀಲಾ ಅವರ ಶೈಕ್ಷಣಿಕ ಸಾಧನೆಯನ್ನು ಮೆಚ್ಚಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ. ಸ. ಜ ನಾಗಲೋಟಿಮಠ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿ ಪುಲೆ ಜಿಲ್ಲಾ ಪ್ರಶಸ್ತಿ, ವಿದ್ಯಾವಾರಿಧಿ ಪ್ರಶಸ್ತಿ, ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಬೆಳಗಾವಿ ಕಾಯಕಶ್ರೀ ಪ್ರಶಸ್ತಿ, ಹೆಣ್ಣು ಜಗದ ಕಣ್ಣು ವೇದಿಕೆಯಿಂದ ಶ್ರೇಷ್ಠ ಶಿಕ್ಷಣ ರತ್ನ ಪ್ರಶಸ್ತಿ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಿಂದ ಜಿಲ್ಲಾ ಗಡಿನಾಡ ಸಾಧಕ ರತ್ನ ಪ್ರಶಸ್ತಿ, ಡಾಕ್ಟರ್ ಪುಟ್ಟರಾಜ ಸೇವಾ ಸಮಿತಿ ನವದೆಹಲಿ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಸೋಶಿಯಲ್ ಕ್ಲಬ್ ಹುಬ್ಬಳ್ಳಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ,ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ )ಮೈಸೂರು, ಡಾ .ಎಸ್ ರಾಧಾಕೃಷ್ಣನ್ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾ ರತ್ನ ಪ್ರಶಸ್ತಿ ಅಲ್ಲದೇ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸಂಘ-ಸಂಸ್ಥೆಯವರು ಸನ್ಮಾನಿಸಿದ್ದಾರೆ. 24/04/2022 ರಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು.

ಅಂತರ್ಜಾಲದಲ್ಲಿ ನೂರನೇ ಶತಕ ಸಂಭ್ರಮ ಕಾರ್ಯಕ್ರಮದ ಕವನ ರಚನೆ ಮತ್ತು ವಾಚನ ಸ್ಪರ್ಧೆಯ ಪ್ರಾಯೋಜಕತ್ವ ವಹಿಸಿಕೊಂಡು ವಿಜೇತರಿಗೆ ನಗದು ಬಹುಮಾನ ಕೊಟ್ಟಿದ್ದಾರೆ.

ಸದ್ಯ ಸುಶೀಲಾ. ಲ. ಗುರವ ಅವರು ಬೆಳಗಾವಿ ವಡಗಾವಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 15 ರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!