ದತ್ತಿದಾನಿ ಅಕ್ಷರ ಮಾತೆ ಲೂಸಿ ಸಾಲ್ಡಾನಾ ಅವರ ಕುರಿತು ಮುನವಳ್ಳಿಯ ಸಾಹಿತಿ ವೈ ಬಿ ಕಡಕೋಳ ಅವರು ಬರೆದಿರುವ ‘ಲೂಸಿ ಸಾಲ್ಡಾನಾ ಅವರ ಸಂಸ್ಕೃತ ಸೂಕ್ತಿಗಳು’ ಪುಸ್ತಕಕ್ಕೆ ಉಪ್ಪಿನ ಬೆಟಗೇರಿಯ ಪೂಜ್ಯ ಶ್ರೀ.ಮ.ನಿ.ಪ್ರಸ್ವ, ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳವರು ಮೂರುಸಾವಿರ ವಿರಕ್ತಮಠ ಇವರು ಶುಭಾಶೀರ್ವಾದ ನೀಡಿ ಹಾರೈಸಿದ್ದಾರೆ.
ಪ್ರಕಟಣೆಯೊಂದನ್ನು ಹೊರಡಿಸಿರುವ ಸ್ವಾಮೀಜಿ, ದತ್ತಿದಾನಿ ಅಕ್ಷರಮಾತೆ ಶ್ರೀಮತಿ ಲೂಸಿ. ಕೆ. ಸಾಲ್ದಾನಾ ಅವರು ಸರಕಾರಿ ಶಾಲೆಯ ಬಡ ಮಕ್ಕಳ ಆಶಾಕಿರಣ, ಬಾಲ್ಯದಿಂದಲೇ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದ ಅವರು. ತಮ್ಮ ಜೀವನವನ್ನೇ ಬಡ ಮಕ್ಕಳ ಕಲಿಕೆಗಾಗಿ ಸಮರ್ಪಸಿದ್ದಾರೆ. ಇಂತಹ ಕರುಣಾಮಯಿ ಮಾತೆ ಲೂಸಿ ಸಾಲ್ದಾನಾ ಅವರು ಸಂಗ್ರಹಿಸಿದ ಸಂಸ್ಕೃತ ಸೂಕ್ತಿಗಳು ಪುಸ್ತಕ ಈಗ ಲೋಕಾರ್ಪಣೆ ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯ ಸಂಸ್ಕೃತ ಭಾಷೆ ದೇವಭಾಷೆ ಎಂದು ಕರೆಸಿಕೊಂಡಿದೆ. ಈ ಭಾಷೆಯಲ್ಲಿರುವ ಮಹತ್ವದ ಸೂಕ್ತಿಗಳನ್ನು ಗುರುಮಾತೆ ಲೂಸಿ ಸಾಲ್ದಾನಾ ಅವರು ಸಂಗ್ರಹಿಸಿದ್ದನ್ನು ಕೃತಿ ರೂಪದಲ್ಲಿ ಸಂಪಾದಕ ವೈ. ಬಿ. ಕಡಕೋಳ ಹೊರತಂದಿರುವರು. ಇದರಲ್ಲಿ ಸಂಸ್ಕೃತ ಭಾಷೆಯ ಹುಟ್ಟು ಬೆಳವಣಿಗೆ ಸಂಸ್ಕೃತ ಭಾಷೆಯ ಮಹತ್ವ, ಸಂಸ್ಕೃತ ಭಾಷೆಯ ವಿಶ್ವವಿದ್ಯಾಲಯಗಳು ವಿಜ್ಞಾನಕ್ಕೆ ಸಂಸ್ಕೃತದ ಕೊಡುಗೆ ಇತ್ಯಾದಿ ಲೇಖನಗಳನ್ನು ಅಲ್ಲಲ್ಲಿ ಅಳವಡಿಸುವ ಮೂಲಕ ಸಂಸ್ಕೃತದ ಮಹತ್ವವನ್ನು ಕೂಡ ಹೇಳುವ ಮೂಲಕ ಜೀವನಕ್ಕೆ ಉಪಯುಕ್ತ ಸೂಕ್ತಿಗಳ ಜೊತೆಗೆ ಸಂಸ್ಕೃತ ಭಾಷೆಯ ಮಹತ್ವವನ್ನು ನೀಡುವ ಮೂಲಕ ಪುಸ್ತಕಕ್ಕೆ ಹೊಸ ಮೆರಗನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರು ನೀಡಿರುವರು ಎಂದಿದ್ದಾರೆ.
ಮುಂದುವರೆದು, ಎಲ್ಲ ಶಿಕ್ಷಕರ ಬಳಗದ ಇಂತಹ ಸಮಾಜಮುಖಿ ಕ್ರಿಯಾ ಚಟುವಟಿಕೆ ಹೀಗೆ ನಿರಂತರವಾಗಿ ಸಾಗಲಿ. ಎಲ್.ಐ.ಲಕ್ಕಮ್ಮನವರ ಅವರ ಪ್ರಯತ್ನ ವೈ.ಬಿ. ಕಡಕೋಳ ಅವರ ಕೃತಿ ಉತ್ತಮವಾಗಿ ಮೂಡಿ ಬಂದಿದ್ದು. ಇಬ್ಬರೂ ಶಿಕ್ಷಕರು ತಮ್ಮ ಶಿಕ್ಷಕ ಬಳಗದೊಂದಿಗೆ ಸಾಲ್ದಾನಾ ಗುರುಮಾತೆಯ ಜೀವನವನ್ನು ಸಮಾಜಕ್ಕೆ ತಿಳಿಸುವ ಮೂಲಕ ತಮ್ಮ ಗುರುಮಾತೆಗೆ ಶಿಷ್ಯರ ಕೊಡುಗೆ ಏನೆಂಬುದನ್ನು ತೋರಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಎಲ್ಲ ಬಳಗಕ್ಕೆ ನಮ್ಮ ಶ್ರೀ ಮಠದ ಆಶೀರ್ವಾದ ಸದಾ ಇದೆ. ಎಲ್ಲರಿಗೂ ಒಳ್ಳೆಯದಾಗಲಿ. ಸರ್ವೇ ಜನಾ ಸುಖಿನೋ ಭವಂತು ಎಂದು ಶುಭ ಹಾರೈಸಿದ್ದಾರೆ.