spot_img
spot_img

ಮಳೆಗೆ ಹೆಚ್ಚಿನ ಅನಾಹುತವಾದಂತೆ ಕ್ರಮ ಕೈಗೊಳ್ಳಿ; ಜಿಲ್ಲಾಡಳಿತಕ್ಕೆ ಸಚಿವರ ಸೂಚನೆ

Must Read

ಬೀದರ – ಮಳೆಗೆ ಯಾವುದೇ ಅವಘಡವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಮಳೆ ಸಮಯದಲ್ಲಿ ಜನರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾನಿಗೊಂಡ ಮನೆಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಳೆ ಬರುವಾಗ ಬೆಳೆಹಾನಿಯ ಸಮೀಕ್ಷೆ ಮಾಡು ಸಾದ್ಯವಾಗುವುದಿಲ್ಲ. ಎರಡು ದಿನಗಳಲ್ಲಿ ಬೆಳೆಹಾನಿ ಬಗ್ಗೆ ಅಂಕಿ – ಅಂಶ ನೀಡುತ್ತೇನೆ ಎಂದರು.

ಧಾರವಾಡ, ಬೀದರ್, ರಾಯಚೂರು ಸೇರಿದಂತೆ ಹಲವು ಕಡೆ ಓಡಾಡಬೇಕಾಗುತ್ತದೆ. ಎಲ್ಲಾ ಜಿಲ್ಲೆಗಳಿಗೂ ಸ್ಪಂದನೆ ಮಾಡಬೇಕಾಗುತ್ತದೆ ಹೀಗಾಗಿ ಹಲವು ಜಿಲ್ಲೆಗೆ ಭೇಟಿ ನೀಡಲು ಸಾದ್ಯವಾಗಲಿಲ್ಲ ಎಂದು ಪಾಟೀಲ ಹೇಳಿದರು.

ನಾವೇ ಪರಿಹಾರದ ಚೆಕ್ ವಿತರಣೆ ಮಾಡಬೇಕು ಎಂಬ‌ ಪರಿಪಾಠವಿಲ್ಲ.ಜಿಲ್ಲಾಧಿಕಾರಿಗಳಿಗೆ ಪರಿಹಾರ ನೀಡುವ ಅಧಿಕಾರ ನೀಡಿದ್ದೇವೆ ಎಂದರು.

ನಿಗಮ ಮಂಡಳಿ ಸ್ಥಾನದಿಂದ ಬಿಎಸ್ ವೈ ಆಪ್ತರಿಗೆ ಕೊಕ್ ವಿಚಾರ ಪ್ರಸ್ತಾಪಿಸಿದ ಅವರು ಬಿಎಸ್ ವೈ ನಮ್ಮ ವರಿಷ್ಠ ನಾಯಕರು, ನಮ್ಮನ್ನು ಬೆಳಸಿದವರು.‌‌ನಿಗಮ ಮಂಡಳಿ ಸ್ಥಾನ ನೀಡುವ‌ ಕೆಲಸ ಮಾಡುತ್ತಾರೆ‌ ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!