spot_img
spot_img

ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಸರ್ವೋತ್ತಮ ಜಾರಕಿಹೊಳಿ

Must Read

ವೆಂಕಟಾಪೂರ ಮತ್ತು ಢವಳೇಶ್ವರ ಗ್ರಾಮಗಳಲ್ಲಿ ನಡೆದ ಬಿಎಂಸಿ ಕೇಂದ್ರಗಳ ಉದ್ಘಾಟನಾ ಸಮಾರಂಭ

ಮೂಡಲಗಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿರುವ ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ ರೈತರಿಗೆ ಕರೆ ನೀಡಿದರು.

ತಾಲೂಕಿನ ವೆಂಕಟಾಪೂರ ಹಾಗೂ ಢವಳೇಶ್ವರ ಗ್ರಾಮಗಳಲ್ಲಿ ಸೋಮವಾರದಂದು ಇಲ್ಲಿಯ ಕಹಾಮ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದ ಬಿಎಂಸಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ರೈತರು ಜಾರಿ ಮಾಡಿಕೊಂಡರೆ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾನ್ನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಕಕಮರಿಯ ಗುರುಲಿಂಗ ಜಂಗಮ ಮಹಾಸ್ವಾಮಿಗಳು ಮತ್ತು ಇಂಚಗೇರಿ ಮಠದ ಮಹಾರಾಜರು ವಹಿಸಿದ್ದರು.

ಅಧ್ಯಕ್ಷತೆಯನ್ನು ವೆಂಕಟಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹನಮಂತ ಪೂಜೇರಿ ವಹಿಸಿದ್ದರು.

ಅತಿಥಿಗಳಾಗಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿಪಂ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ರಾಜೇಂದ್ರ ಸಣ್ಣಕ್ಕಿ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಮುಖಂಡರಾದ ಎಂ.ಎಂ. ಪಾಟೀಲ, ಅಜ್ಜಪ್ಪ ಗಿರಡ್ಡಿ, ಈರಣ್ಣ ಜಾಲಿಬೇರಿ, ಮಹಾದೇವ ನಾಡಗೌಡ, ರಂಗಪ್ಪ ಕಳ್ಳಿಗುದ್ದಿ, ಕಲ್ಲಪ್ಪಗೌಡ ಲಕ್ಕಾರ, ಸುಭಾಸ ವಂಟಗೋಡಿ, ಸತೀಶ ವಂಟಗೋಡಿ, ಪ್ರಕಾಶ ಪಾಟೀಲ, ದುಂಡಪ್ಪ ಕಲ್ಲಾರ, ಹನಮಂತ ನಾಯ್ಕ, ಸಂಜು ಪಾಟೀಲ, ಸಂಗಪ್ಪ ಕಂಠಿಕಾರ, ವೆಂಕಪ್ಪ ಕೋಳಿಗುಡ್ಡ, ಶ್ರೀಕಾಂತ ಚನ್ನಾಳ, ಪ್ರಕಾಶ ಅಂಗಡಿ, ನಾಗಪ್ಪ ಸಂಕನ್ನವರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಆರ್.ವ್ಹಿ. ಜಂಬಗಿ, ಡಾ.ಪಾಂಡುರಂಗ, ವಿಸ್ತರಣಾಧಿಕಾರಿಗಳಾದ ರವಿ ತಳವಾರ, ವಿಠ್ಠಲ ಲೋಕುರಿ, ಪ್ರಕಾಶ ಬೆಳಗಲಿ, ವೆಂಕಟಾಪೂರ ಹಾಗೂ ಢವಳೇಶ್ವರ ಗ್ರಾಮಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ರೈತರು ಪಾಲ್ಗೊಂಡಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!