- Advertisement -
ಮೈಸೂರಿನಲ್ಲಿ ಎನ್‌ಐಇ ಕಾಲೇಜಿನ ನೌಕರರ ಸಂಘದ ಬೋಧಕೇತರರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ (೬೨೫/೫೯೭, ಶೇ.೯೫.೫೬) ಮನ್ವಿತಾ ಪಿ. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿದ್ವಾಂಸರಾದ ಪ್ರೊ.ಶೆಲ್ವಪಿಳ್ಳೆ ಅಯ್ಯಂಗಾರ್, ಉಪನ್ಯಾಸಕ ಶಿಶಿರಂಜನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಎನ್‌ಐಇ ಕಾಲೇಜಿನ ಕುಲಸಚಿವರಾದ ಮಣಿ, ಸಂಘದ ಅಧ್ಯಕ್ಷ ಸಿಂಗಯ್ಯ, ಸುರೇಶ್, ಪಾಪಣ್ಣ ಅವರು ಉಪಸ್ಥಿತರಿದ್ದರು.