ಬೈಲಹೊಂಗಲ – ಶ್ರೀ ಹರೇ ಕೃಷ್ಣ ಫೌಂಡೇಶನ್ ಬೈಲಹೊಂಗಲ ಇವರ ಆಶ್ರಯದಲ್ಲಿ ಹದಿನಾಲ್ಕನೆಯ ವಾರದ ಸತ್ಸಂಗ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ *ಪ್ರತಿಭಾ ಪುರಸ್ಕಾರ* ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರೊ. ಸವದತ್ತಿಮಠ ನಿವೃತ್ತ ಪ್ರಾಂಶುಪಾಲರು, ಮಹಾದೇವ ಧರಂ ಸಿಂಗ್ ರಜಪೂತ್ ಅಧ್ಯಕ್ಷರು, ನವಭಾರತ ಸೌಹಾರ್ದ ಸಹಕಾರಿ ಸಂಘ ಯರಗಟ್ಟಿ, ಯೋಗಪಟು ಸಂಗಮೇಶ ಸವದತ್ತಿಮಠ, ಶ್ರೀಶೈಲ ಗೊರವರ ನಿರ್ದೇಶಕರು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ರುದ್ರಪ್ಪ ತುರಮರಿ ಪ್ರಗತಿಪರ ರೈತರು ಶ್ರೀಶೈಲ ಯಡಳ್ಳಿ ಹಾಗೂ ಹರೇ ಕೃಷ್ಣ ಫೌಂಡೇಶನ ಎಲ್ಲ ಭಕ್ತ ವೃಂದರೆಲ್ಲರ ನೇತೃತ್ವದಲ್ಲಿ ದ್ವಿತೀಯ ಪಿಯುಸಿ.ಹೆಚ್ಚಿನ ಶ್ರೇಣಿ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಈ ಎಲ್ಲ ಪಾಲಕರನ್ನು ಬಸವರಾಜ್ ಬಡಿಗೇರ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಪ್ರೊ. ಚನ್ನಪ್ಪ ಗೊರವರ ಕಾರ್ಯಕ್ರಮವನ್ನು ನಿರೂಪಿಸಿದರು.