spot_img
spot_img

ತಾಲೂಕು ಆಡಳಿತದ ಗೌರವಕ್ಕೆ ಪಾತ್ರರಾದ ಮುನವಳ್ಳಿ ವಲಯದ ಪ್ರತಿಭೆಗಳು

Must Read

೭೫ ನೇ ಸ್ವಾತಂತ್ರ್ಯ ದಿನಾಚರಣೆ ಸವದತ್ತಿಯಲ್ಲಿ ಇಂದು ಅದ್ದೂರಿಯಾಗಿ ಜರುಗಿತು. ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಗುರುತಿಸುವ ಮೂಲಕ ವೇದಿಕೆಯಲ್ಲಿ ಅವರಿಗೆ ಪ್ರಶಸ್ತಿ ಪತ್ರ. ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಜನಪ್ರೀಯ ಶಾಸಕರು ಹಾಗೂ ವಿಧಾನ ಸಭಾ ಉಪ ಸಭಾಧ್ಯಕ್ಷರಾದ ಆನಂದ ಮಾಮನಿ. ತಹಶೀಲ್ದಾರ ಜಿ.ಬಿ.ಜಕ್ಕನಗೌಡರ.,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ. ಎನ್.ಬ್ಯಾಳಿ ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ. ಸಿ.ಡಿಪಿಓ ಕಾಚನಾ ಅಮಠೆ. ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ನಿಕಟಪೂರ್ವ ಅಧ್ಯಕ್ಷರಾದ ಸುರೇಶ ಬೆಳವಡಿ. ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ ಪುರಸಭೆ ಅಧ್ಯಕ್ಷರಾದ ರಾಜಶೇಖರ ಕಾರದಗಿ.ಉಪಾಧ್ಯಕ್ಷರಾದ ದೀಪಕ ಜಾನ್ವೇಕರ. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಶಿಂತ್ರಿ. ಸಂಗಮೇಶ ಹಾದಿಮನಿ.ಸೇರಿದಂತೆ ತಾಲೂಕಿನ ಟಿ.ಎ.ಪಿ.ಎಂ.ಸಿ ಹಾಗೂ ಸವದತ್ತಿ ಯಲ್ಲಮ್ಮ ಪುರಸಭೆ ಸದಸ್ಯರು ಗಣ್ಯರು ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯ ಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಗೈದ ಪ್ರತಿಭೆಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುನವಳ್ಳಿ ವಲಯದ ಅರ್ಟಗಲ್ ಗ್ರಾಮ ಪಂಚಾಯತ್ ಪಿ.ಡಿ.ಓ ಸುಧೀರ ಪತ್ತಾರ. ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೀನಾಕ್ಷಿ ಉಳ್ಳಿಗೇರಿ, ತಾಲೂಕು ಪಂಚಾಯತಿ ವ್ಯವಸ್ಥಾಪಕ ಗಂಗಾಧರ ಬಡೆಮ್ಮಿ.ಜಕಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಶಿಲ್ಪಾ ಈರಪ್ಪ ವಡವಡಗಿ.ಹಳ್ಳೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಭಾರಿ ಮುಖ್ಯಾಧ್ಯಾಪಕಿ ಪುಷ್ಪಾ ಮಹಾದೇವಪ್ಪ ಗೌಡರ, ಎಂ.ಎ. ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ೭ ಚಿನ್ನದ ಪದಕದೊಂದಿಗೆ ಉತ್ತೀರ್ಣಳಾದ ತೆಗ್ಗಿಹಾಳ ಗ್ರಾಮದ ಯಶೋಧ ಧೂಳನ್ನವರ. ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಮಿಂಚುತ್ತಿರುವ ಹಾಗೂ ಹವ್ಯಾಸಿ ಗಾಯಕಿ ಮುಕ್ತಾ ಪಶುಪತಿಮಠ. ಡಾ. ಹನಮಂತ ಗೋಟಿ ಇವರನ್ನು ಸ್ವಾತಂತ್ರ್ಯ ದಿನದಂದು ಸನ್ಮಾನಗೊಂಡ ಮುನವಳ್ಳಿ ವಲಯದ ಪ್ರತಿಭೆಗಳು

ಇವರಲ್ಲಿ ಹಲವರ ಕಿರು ಪರಿಚಯ ಇಲ್ಲಿದೆ. ಶಿಲ್ಪಾ ವಡವಡಗಿ ಜಕಬಾಳ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಒಟ್ಟು ಸೇವೆ ೧೨ ವರ್ಷ. ಇವರ ಪತಿ ಅರ್ಟಗಲ್ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ವಿಷಯದ ಶಿಕ್ಷಕರು. ಸದರಿ ಶಿಕ್ಷಕಿ ಜಕಬಾಳ ಶಾಲೆಯಲ್ಲಿ ಕಳೆದ ೫ ವರ್ಷ ೯ ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದು ಮಕ್ಕಳ ಬೌದ್ಧಿಕ ಪ್ರತಿಭೆಯನ್ನು ಹೆಚ್ಚಿಸಲು ವಿವಿಧ ರೀತಿಯ ಚಟುವಟಕೆಗಳನ್ನು ಕೈಗೊಂಡು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿರುವರು.

ಪುಷ್ಪಾ ಮಹಾದೇವಪ್ಪ ಗೌಡರ ಗುರುಮಾತೆ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರಲ್ಲಿ ಕಳೆದ ೧೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಸದ್ಯ ಪ್ರಭಾರ ಮುಖ್ಯೋಪಾಧ್ಯಾಯನಿಯಾಗಿರುವರು. ಇವರ ಒಟ್ಟು ಸೇವೆ ೨೪ ವರ್ಷಗಳು. ಇವರ ಪತಿ ಎ.ಜಿ.ಜನಕಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂ.ಎಲ್.ಬಿ.ಸಿ ಕಾಲನಿ ಸಿಂದೋಗಿಯಲ್ಲಿ ಸೇವೆ ಸಲ್ಲಿಸುತ್ತಿರುವರು. ಇವರೂ ಕೂಡ ಸವದತ್ತಿ ತಾಲೂಕಿನ ಬಿ.ಆರ್.,ಸಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುವರು. ಗೌಡರ ಗುರುಮಾತೆ ಸಹ ಶಿಕ್ಷಕಿಯಾಗಿ ಹಲವಾರು ರೀತಿಯ ಶೈಕ್ಷಣಿಕ ಪ್ರಗತಿಯನ್ನು ಮಕ್ಕಳಲ್ಲಿ ಪ್ರೋತ್ಸಾಹಿಸುವ ಜೊತೆಗೆ ಕಲಿಕೆಯನ್ನು ನಿರ್ವಹಿಸಿರುವರು.

ತೆಗ್ಗಿಹಾಳ ಗ್ರಾಮದ ಯುವತಿ ಯಶೋಧಾ ಧೂಳನ್ನವರ ಮೂಲತಃ ತೆಗ್ಗಿಹಾಳದವಳು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ ೧ ರಿಂದ ೫ ನೆಯ ತರಗತಿಯವರೆಗೆ ಶಿಕ್ಷಣ ಕಲಿತು. ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ೭ ನೇ ತರಗತಿ ವರೆಗಿನ ಶಿಕ್ಷಣ ಪೂರೈಸಿ ಎಸ್.ಪಿ.ಜೆ.ಜಿ. ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದಿ ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ.ರಾಜ್ಯಶಾಸ್ತ್ರ ವಿಷಯದಲ್ಲಿ ೭ ಬಂಗಾರದ ಪದಕದೊಂದಿಗೆ ಉತ್ತೀರ್ಣಳಾಗಿದ್ದು. ಕಬಡ್ಡಿ ಖೋ ಖೋ ಕ್ರೀಡೆಗಳಲ್ಲಿ ಭಾಗವಹಿಸಿ ಯುನಿವರ್ಸಿಟಿ ಬ್ಲ್ಯೂ ಆಗಿ. ಜಮಖಾನಾ ವಿಭಾಗದ ಸೆಕ್ರೆಟರಿಯಾಗಿ ೨೦೧೯ ರ ಜನೇವರಿ ೧೮ ರಿಂದ ೨೪ ರ ವರೆಗೆ ಉತ್ತರಪ್ರದೇಶದ ವಾರಣಾಸಿಯಲ್ಲಿ ಜರುಗಿದ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಆಯೋಜನೆಯ ಭಾರತೀಯ ಪ್ರವಾಸ ರಾಷ್ಟ್ರೀಯ ಇಂಟಿಗ್ರೇಷನ್ ಕ್ಯಾಂಪ್ ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎನ್.ಎಸ್.ಎಸ್. ವಿಭಾಗದಿಂದ ಆಯ್ಕೆಯಾದ ೫ ವಿದ್ಯಾರ್ಥಿನಿಯರಲ್ಲಿ ಒಬ್ಬಳಾಗುವ ಮೂಲಕ ಗ್ರಾಮೀಣ ಬಡ ರೈತನ ಮಗಳೊಬ್ಬಳು ವಿನೂತನ ಸಾಧನೆ ಮಾಡಿರುವಳು.

ಗೃಹಿಣಿಯಾಗಿ ಪತಿಯನ್ನು ಕಳೆದುಕೊಂಡು ತನ್ನ ೬ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಹವ್ಯಾಸಿ ಗಾಯಕಿಯಾಗಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುಕ್ತಾ ಪಶುಪತಿಮಠ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತೀರ್ಣರಾಗಿರುವ ಇವರು ಕತೆ ಕವನ ಬಿಡಿ ಲೇಖನಗಳ ಮೂಲಕ ಸಾಹಿತ್ಯದಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಹೊಂದಿರುವರು ಸದ್ಯ ತಮ್ಮ ಮುದ್ರಣದ ಹಂತದಲ್ಲಿರುವ ಬೆಂಕಿಯಲ್ಲಿ ಅರಳಿದ ಹೂವು ಜಯಲಕ್ಷ್ಮೀ. ನವಕಲ್ಯಾಣಮಠದ ಮೂಲ ಪ್ರೇರಕರು ಲಿಂಗೈಕ್ಯ ಶ್ರೀ ಚನ್ನಬಸಯ್ಯನವರು. ಮರುಮುದ್ರಣಕ್ಕೆ ಅಣಿಯಾಗುತ್ತಿರುವ ರಾಜಶೇಖರ ಪಶುಪತಿ ಕೃತಿಗಳ ರಚನೆಯ ಕರ್ತೃವಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ಕವನಗಳ ರಚನೆ ಮತ್ತು ಕತೆ ಬರಹದ ಮೂಲಕ ಗಮನ ಸೆಳೆಯುತ್ತಿರುವ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆ. ಇವರ ಪ್ರಮುಖವಾದ ಕವನಗಳೆಂದರೆ ಮಿನುಗು ತಾರೆ.ಸೈರಿಸು ಮನವೇ.ಮುನಿಪುರ ಅಕ್ಷರ ದೀಕ್ಷೆಯ ರೂವಾರಿ, ಜೀವನ ಜೋಕಾಲಿ.

ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಪರಿತ್ಯಕ್ತೆ ಕತೆ. ವಿಜಯ ಕರ್ನಾಟಕ ಬೋಧಿವೃಕ್ಷ ಪುರವಣಿಯಲ್ಲಿ ಆಷಾಢ ಮಾಸ ಕುರಿತ ಬರಹ ಚಿಂತನಪರ ಸ್ವೀಕರಿಸುವ ಮನೋಭಾವ ಬರಹಗಳನ್ನು ಇಲ್ಲಿ ಹೆಸರಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆಯಾಗಿ. ಮುನವಳ್ಳಿಯ ಇನ್ನರ್ ವ್ಹೀಲ್ ಸದಸ್ಯೆಯಾಗಿ. ಶಾರದಾ ಭಜನಾ ಮಂಡಳದ ಸಕ್ರೀಯ ಸದಸ್ಯಳಾಗಿ, ಮುನವಳ್ಳಿಯ ಮಹಿಳಾ ಕೋ ಆಪರೇಟಿವ್ಹ. ಬ್ಯಾಂಕಿನ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವರು. ಕಾಲೇಜು ಜೀವನದಲ್ಲಿ ಕತೆ ಕವನ ಭಾಷಣ ಹೀಗೆ ಬಹುಮುಖ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿರುವ ಇವರು ದಿವಂಗತ ವ್ಹಿ.ಪಿ.ಜೇವೂರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಜರುಗಿದ ಸ್ಪರ್ಧೇಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುವರು. ಹೀಗೆ ಬಹುಮುಖ ವ್ಯಕ್ತಿತ್ವದ ಪ್ರತಿಭೆಯಾಗಿರುವ ಇವರನ್ನು ಕೂಡ ಸ್ವಾತಂತ್ರ್ಯ ದಿನದಂದು ಸನ್ಮಾನಿಸಿ ಗೌರವಿಸಲಾಯಿತು.

ಈ ಎಲ್ಲ ಪ್ರತಿಭೆಗಳ ಸಾಧನೆಗೆ ಸವದತ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ. ಗೌರವ ಕಾರ್ಯದರ್ಶಿಗಳಾದ ಬಿ.ಎನ್.ಹೊಸೂರ. ವೈ.ಬಿ.ಕಡಕೋಳ ಮುನವಳ್ಳಿ ಹೋಬಳಿ ಘಟಕದ ಅಧ್ಯಕ್ಷರಾದ ಮೋಹನ ಸರ್ವಿ.ಗೌರವ ಕಾರ್ಯದರ್ಶಿಗಳಾದ ಗುರುನಾಥ ಪತ್ತಾರ. ವೀರಣ್ಣ ಕೊಳಕಿ. ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಅನುರಾಧ ಬೆಟಗೇರಿ ಗೌರಿ ಜಾವೂರ. ಮುನವಳ್ಳಿಯ ಮಹಿಳಾ ಕೋ ಆಪರೇಟಿವ್ಹ. ಬ್ಯಾಂಕಿ£ ಅಧ್ಯಕ್ಷರಾದ ಶಾರದಾ ದ್ಯಾಮನಗೌಡರ. ಯರಗಟ್ಟಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಆಶಾ ಪರೀಟ. ಸವದತ್ತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ. ಅನಸೂಯ ಮದನಬಾವಿ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಸುಧೀರ ವಾಘೇರಿ. ಮುನವಳ್ಳಿಯ ವಲಯದ ಸಮೂಹ ಸಂಪನ್ಮೂಲ ಕೇಂದ್ರ ದ ಸಂಪನ್ಮೂಲ ವ್ಯಕ್ತಿಯಾದ ಮೀರಾಬಾಯಿ ಮುರನಾಳ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾದ ಜಿ.ಎಸ್.ಚಿಪ್ಪಲಕಟ್ಟಿ. ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಎನ್.ಎ.ಹೊನ್ನಳ್ಳಿ ಅರ್ಟಗಲ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಮಮತಾ ಬಣಕಾರ. ಸಿಂದೋಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಅಂಗಡಿ ಪರಸಗಡ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಮನೋಹರ ಚೀಲದ ಸೇರಿದಂತೆ ಗಣ್ಯರು ಹಿರಿಯರು ಇವರ ಸಾಧನೆಗೆ ಅಭಿನಂದನೆ ಸಲ್ಲಿಸಿರುವರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!