Homeಸುದ್ದಿಗಳುತಲ್ಲೂರು ರಾಯನಗೌಡರದು ಬಹುಮುಖಿ ವ್ಯಕ್ತಿತ್ವ- ವೈ ಬಿ ಕಡಕೋಳ

ತಲ್ಲೂರು ರಾಯನಗೌಡರದು ಬಹುಮುಖಿ ವ್ಯಕ್ತಿತ್ವ- ವೈ ಬಿ ಕಡಕೋಳ

ಮುನವಳ್ಳಿ: “ಕಿತ್ತೂರು ಸಂಸ್ಥಾನದ ಇತಿಹಾಸ ನೆನಪಾದಾಗೆಲ್ಲ ನಮಗೆ ತಲ್ಲೂರು ರಾಯನಗೌಡ ಪಾಟೀಲರು ನೆನಪಾಗುತ್ತಾರೆ ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಭಾಗವಹಿಸಿದಾಗ ಅವರಿಗೆ ಕಿತ್ತೂರು ಇತಿಹಾಸದ ಆಸಕ್ತಿ ಉಂಟಾಗಿ ಲಂಡನ್ನಿಗೆ ಹೋಗಿ ಆ ಕುರಿತಾದ ಮಹತ್ವದ ದಾಖಲೆಗಳನ್ನು ಪಡೆದು ದೇಶಕ್ಕೆ ಮರಳಿದ ಕತೆ ತುಂಬಾ ರೋಚಕವಾದದ್ದೆಂದು” ಸಾಹಿತಿ ಮುನವಳ್ಳಿಯ ವಾಯ್ ಬಿ ಕಡಕೋಳ ಹೇಳಿದರು.

ಅವರು ಬೆಳಗಾವಿಯ ರಾಷ್ಟ್ರಕೂಟ ರಾಷ್ಟ್ರೀಯ ಪ್ರತಿಷ್ಠಾನ ಮತ್ತು ಅರಸು ಅಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ಗೂಗಲ್ ಮೀಟ್ ನಲ್ಲಿ ನಡೆದ ಬೆಳಗಾವಿ ಬೆಳಗಿದವರು- ತಲ್ಲೂರು ರಾಯನಗೌಡ ಪಾಟೀಲ ರು ಕುರಿತಾದ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

‘ರಾಯನಗೌಡರು ವಿದ್ಯಾರ್ಥಿ ದೆಸೆಯಿಂದಲೇ ಕ್ರಿಯಾಶೀಲರು ಹೋರಾಟಗಾರರು ಮತ್ತು ಇತಿಹಾಸ ಪ್ರಿಯರಾಗಿದ್ದರು ಗಾಂಧಿಯವರ ಮಾತಿಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಬ್ರಿಟಿಷ್ ಸೈನ್ಯದ ಕಣ್ತಪ್ಪಿಸಿ ಕುರುಬನ ವೇಷದಲ್ಲಿ ಮನೆಗೆ ಬರುತಿದ್ದರು ಎಂದು ಗ್ರಾಮದ ಹಿರಿಯರು ಹೇಳುವರು ಜಾನಪದ ಆಸಕ್ತ ಅವರ ಧರ್ಮಪತ್ನಿಯು ಅವರ ಹೋರಾಟಕ್ಕೆ ಬೆಂಬಲವಾಗಿದ್ದಳು ಬೈಲಹೊಂಗಲದ ಚನ್ನಮ್ಮನ ಸಮಾಧಿ ಶೋಧಿಸಿದ್ದು ರಾಯನಗೌಡರು”ಎಂದರು.

ಕಿತ್ತೂರು ಸಂಸ್ಥಾನದ ಸಂಶೋಧನೆ ಗೆ ರಾಯನಗೌಡರ ಕೊಡುಗೆ ದೊಡ್ಡದಿದೆ ಕಿತ್ತೂರು ಬಂಡಾಯ, ಮಲ್ಲಸರ್ಜ ಕಾವ್ಯ ಕರ್ನಾಟಕದ ಗಡಿರೇಖೆಗಳು ಇಂತಹ ಅಮೂಲ್ಯ ಪುಸ್ತಕಗಳನ್ನು ನೀಡಿದ ರಾಯನಗೌಡರು ಸಾಹಿತಿ ಸಂಶೋಧಕ ಹೋರಾಟಗಾರ ಕೃಷಿಕ ರಾಜಕಾರಣಿ ಹೀಗೆ ಬಹುಮುಖ ವ್ಯಕ್ತಿತ್ವದ ಚಲನಶೀಲ ವ್ಯಕ್ತಿಯಾಗಿದ್ದರು ಎಂದು ವೈ. ಬಿ. ಕಡಕೋಳ ತಮ್ಮ ಉಪನ್ಯಾಸ ದಲ್ಲಿ ವಿವರಿಸಿದರು.

ಕಿತ್ತೂರಿನ ವಿಶ್ರಾಂತ ಪ್ರಾಚಾರ್ಯ ಡಾ ಎಸ್ ಬಿ ದಳವಾಯಿಯವರು “ಕಿತ್ತೂರು ದೇಶಗತಿಯ ಇತಿಹಾಸ ಹೆಕ್ಕಿ ತಂದವರು ತಲ್ಲೂರು ರಾಯನಗೌಡ ಪಾಟೀಲರು ಬಹುರೂಪಿ ವ್ಯಕ್ತಿತ್ವದ ಅವರ ಕೊಡುಗೆಯನ್ನು ಮರೆಯಲಾಗದು” ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.

ಬಸವರಾಜ ಗಾರ್ಗಿಯವರ ಮಾರ್ಗದರ್ಶನದಲ್ಲಿ ನಡೆದ ಈ ಉಪನ್ಯಾಸವನ್ನು ಯುವಕವಿ ಸಿದ್ರಾಮ ತಳವಾರ ಸಂಚಾಲಕರಾಗಿ ನಡೆಸಿಕೊಟ್ಟರು ಉದಯೋನ್ಮುಖ ಲೇಖಕ ಚಿಕ್ಕೋಡಿಯ ಬಸವರಾಜ ಹೊನಗೌಡರ ವಂದಿಸಿದರು.

ಉಪನ್ಯಾಸದಲ್ಲಿ ತಲ್ಲೂರು ರಾಯನಗೌಡ ಪಾಟೀಲರ ಮಕ್ಕಳಾದ ಗಿರಿಜಾ ಕಲ್ಯಾಣಿ ದೇವಿಕಾರಾಣಿ ಮತ್ತು ಗೌಡರ ಅಳಿಯಂದಿರು ಬಾಪುಗೌಡ ಪಾಟೀಲ ಶಂಕರಗೌಡ ಪಾಟೀಲ ಮತ್ತು ಬಳಗ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಹಿರಿಯ ಸಾಹಿತಿಗಳಾದ ಐತಿಹಾಸಿಕ ಕಾದಂಬರಿಕಾರ ಯ ರು ಪಾಟೀಲ, ಡಾ ವಗ್ಗರ, ಡಾ ಶೋಭಾ ನಾಯಕ, ಡಾ ಸುನೀಲ್ ಪರೀಟ, ಮಹೇಶ ಚನ್ನಂಗಿ, ಶ್ರೀಶೈಲ ಮಣಗುತ್ತಿ, ಆನಂದ ಹಕ್ಕೆನ್ನವರ, ಶಬಾನಾ ಅಣ್ಣಿಗೇರಿ, ಜೋತಿ ಬದಾಮಿ, ಸೋಮಲಿಂಗ ಮಾವಿನಕಟ್ಟಿ, ಹಮೀದಾ ದೇಸಾಯಿ, ಮಾಯಾ ನಂದಿ, ಶಕುಂತಲಾ ಅಜ್ಜನ್ನವರ, ಗುರುಸಿದ್ದಯ್ಯ ಹಿರೇಮಠ,ಬಸವರಾಜ ಸುಣಗಾರ, ಮಹೇಶ ಕರಿಕಟ್ಟಿ, ಸುರೇಶ ಮರಲಿಂಗನವರ, ಡಾ. ದೊಡ್ಡಲಿಂಗನವರ, ದೀಪಿಕಾ ಚಾಟೆ, ಲಕ್ಷ್ಮಿ ಹೆದ್ದೂರಿ, ಆರ್. ಎಂ. ಶಿವನಗೌಡರ, ಬಸವರಾಜ ಘೋಡಗೇರಿ,ಚಂದ್ರಪ್ಪ ಬೂದಿಹಾಳ,ಮಹೇಶ ಬೆಳವಡಿ, ಭಾಗ್ಯಶ್ರೀ ಪಾಟೀಲ,ಜಗದೀಶಗೌಡ ಪಾಟೀಲ,ಗದಗ ಶಂಭುಲಿಂಗ ಕೊಟ್ಟೂರಸೆಟ್ಟರ, ಪ್ರೊ ರವಿ ಪಾಟೀಲ, ದುಂಡಪ್ಪ ಹೂಲಿ, ಮಂಜುನಾಥ ಕರ್ಕಿ, ಸಂಗನಗೌಡರ ಮುಂತಾದವರು ಪಾಲ್ಗೊಂಡಿದ್ದರು.

RELATED ARTICLES

Most Popular

error: Content is protected !!
Join WhatsApp Group