ಮುನವಳ್ಳಿ: ಸಮೀಪದ ಸಿಂದೋಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವೇದಮೂರ್ತಿ ಮಡಿವಾಳಯ್ಯ ಸ್ವಾಮಿಗಳು ಹಿರೇಮಠ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಡಿ ಡಿ ಟೋಪೋಜಿ. ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಮಲ್ಲಪ್ಪ ಕೊಳ್ಳಿ ಉಪಾಧ್ಯಕ್ಷ ರಾದ ಸುರೇಶ ದಂಡಿನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ, ಸಮೂಹ ಸಂಪನ್ಮೂಲ ವ್ಯಕ್ತಿ ಎನ್ ಎ ಹೊನ್ನಳ್ಳಿ, ಪರಸಗಡ ಪ್ರಾಥಮಿಕ ಪತ್ತಿನ ಸಂಘದ ನಿರ್ದೇಶಕ ಎಸ್ ವೈ ನಿಪ್ಪಾಣಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಈರಣ್ಣ ಕಿತ್ತೂರ, ಅನಸೂಯ ಮದನಬಾವಿ ಪ್ರಧಾನ ಗುರುಗಳಾದ ಎಸ್ ಟಿ ಬಂಡಿವಡ್ಡರ ಸೇರಿದಂತೆ ಎಸ್ ಡಿ ಎಂ ಸಿ ಸದಸ್ಯರು.ಗ್ರಾಮದ ಹಿರಿಯರು ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು, ಮುಖ್ಯೋಪಾಧ್ಯಾಯರುಗಳ ಉಪಸ್ಥಿತಿಯಲ್ಲಿ ವೇದಮೂರ್ತಿ ಮಡಿವಾಳಯ್ಯ ಸ್ವಾಮಿಗಳು ಹಿರೇಮಠ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ನಂತರ ಪಾಲಕರನ್ನು ಉದ್ದೇಶಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳನ್ನು ಸಂಸ್ಕಾರ ದಿಂದ ಬೆಳೆಸುವ ಮೂಲಕ ಪಾಲಕರು ಅವರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುವ ಜತೆಗೆ ಉತ್ತಮ ಸಂಸ್ಕಾರ ಮೂಡಿಸಲು ಪಾಲಕರು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ ಡಿ ಟೋಪೋಜಿ ಮಾತನಾಡಿ “ಸರಕಾರದಿಂದ ಈ ಶಾಲೆಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಈ ಶಾಲೆಗೆ ದೊರಕಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎನ್ ಎ ಹೊನ್ನಳ್ಳಿ ವಾರ್ಷಿಕೋತ್ಸವ ಮಹತ್ವದ ಕುರಿತು ತಿಳಿಸಿದರು.
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ ಮಾತನಾಡಿ “ಮಕ್ಕಳ ಸೃಜನಶೀಲ ಚಟುವಟಿಕೆಗಳನ್ನು ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಾಲಕರಿಗೆ ತೋರಿಸುವ ಮೂಲಕ ವಾರ್ಷಿಕೋತ್ಸವ ಯಶಸ್ವಿಯಾಗಿ ಜರುಗಲಿ” ಎಂದು ಹಾರೈಸಿದರು.
ಮುಖ್ಯೋಪಾಧ್ಯಾಯ ಎಸ್ ಟಿ ಬಂಡಿವಡ್ಡರ ವಾರ್ಷಿಕ ವರದಿ ವಾಚನ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ರಮೇಶ ಬಿ ಬೆಡಸೂರ , ಎಸ್ ಡಿ ಎಂ ಸಿ ಸದಸ್ಯರಾದ ಮಾರುತಿ ಫ ಚಂದರಗಿ, ಮಹಾಂತೇಶ ಹುದ್ದಾರ, ಶಿವಪ್ಪ ಬ ಸಾಲಾಪುರ, ದ್ಯಾಮಣ್ಣ ಯ ಕಣವಿ, ಹೂವಪ್ಪ ಈ ತಳವಾರ, ರಹಮಾನ ಹ ಕಡಕೋಳ, ಅಶೋಕ ಮ ಹಾದಿಮನಿ, ಸಾವಿತ್ರಿ ಮ ಕಟ್ಟಿ, ಲಕ್ಷ್ಮಿ ರು ಗುರನಗೌಡ್ರ, ರುದ್ರವ್ವ ಭೀ ಟೋಪೋಜಿ, ಅಕ್ಷತಾ ಯ ಟೋಪೋಜಿ, ಸವಿತಾ ಮ ನಾಗೋಜಿ, ಲಕ್ಷ್ಮಿ ಮಾ ಗೂರನಾರ, ಪ್ರೇಮಾ ಉ ಭಜಂತ್ರಿ, ನೀಲವ್ವ ಮ ತಳವಾರ ಹಾಗೂ ರೇಣುಕಾ ಚ ಮಾದರ, ಸರಕಾರಿ ಪ್ರೌಢಶಾಲೆ ಶಿಂದೋಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ದೂದಪ್ಪ ಹೂ ಟೋಪೋಜಿ ,
ಶ್ರೀಮಂತ ಲ ಕುರಿ ಹಾಗೂ ಶಿವಾನಂದ ಕಂಬಾರ ರವರು ಹಳೆಯ ವಿದ್ಯಾರ್ಥಿಗಳು ಶಿಂದೋಗಿಯ ವಿದ್ಯುತ್ ನಿರ್ವಾಹಕ ವಿಠ್ಠಲ ಬಗಲಿ, ಗ್ರಾಮದ ನಾಗರಿಕರಾದ ಈರಪ್ಪ ಮೂ ಕರಿಕಟ್ಟಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಕೆ.ಎಲ್. ರಾಥೋಡ್, ಜಿಪಿಟಿ ಸಂಘದ ಉಪಾಧ್ಯಕ್ಷರಾದ ಶಿವಕಂಠ ಪಿ. ಜಿ. ಸುಣಗಾರ, ಉಮೇಶ ಕರಿಕಟ್ಟಿ , ಆರ್ ಎಸ್ ಜೋಗೇರ್, ವೀಣಾ ಅಂಬಿಗೇರ, ವಿಜಯಲಕ್ಷ್ಮೀ ಕದಂಷ ಅನುಸೂಯಾ ಮದನಭಾವಿ, ಅತಿಥಿ ಶಿಕ್ಷಕರಾದ ಆರ್ ಬಿ ಲವಟೆ, ಎಂ ಬಿ ಪಾಟೀಲ, ಸವಿತಾ ಚಿ ಭಜಂತ್ರಿ, ಫಕ್ಕೀರಪ್ಪ ಚಂ ಕುರಿ, ಶಿಂದೋಗಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ವಿದ್ಯಾರ್ಥಿ- ವಿದ್ಯಾರ್ಥಿಗಳು, ಎಲ್ಲ ಅಡುಗೆ ಸಿಬ್ಬಂದಿಗಳು, ಗ್ರಾಮದ ಗುರು – ಹಿರಿಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ಮಹನೀಯರು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಎನ್ ಎ ಹೊನ್ನಳ್ಳಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಡಿ ಡಿ ಟೋಪೋಜಿ, ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಮಲ್ಲಪ್ಪ ಕೊಳ್ಳಿ ಉಪಾಧ್ಯಕ್ಷ ರಾದ ಸುರೇಶ ದಂಡಿನ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಜರುಗಿತು. ಶಿಕ್ಷಕ ಎಂ ಬಿ ಪಾಟೀಲ ನಿರೂಪಿಸಿದರು. ಗುರು ಮಾತೆ ವಿಜಯಲಕ್ಷ್ಮಿ ಕದಂ ಸ್ವಾಗತಿಸಿದರು.ವೀಣಾ ಅಂಬಿಗೇರ ವಂದಿಸಿದರು