spot_img
spot_img

ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರವಾಗಿರಬೇಕು – ಅರ್ಜುನ ಕಂಬೋಗಿ

Must Read

spot_img
- Advertisement -

ಮುನವಳ್ಳಿ: “ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರವಾಗಿರಬೇಕು. ಶಿಕ್ಷಕರಿಗೆ ಸೇವೆಯಲ್ಲಿನ ವೈಯುಕ್ತಿಕ ಸಮಸ್ಯೆಗೆ ಇಲಾಖೆಯಿಂದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಗುರುಸ್ಪಂದನ ಇದೊಂದು ಅದ್ಭುತ ಕಾರ್ಯಕ್ರಮ.ಶಿಕ್ಷಕರ ಕಾರ್ಯ ಉತ್ತೇಜನಕಾರಿಯಾಗಿರಬೇಕು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ತಾಲೂಕಿಗೆ ಉತ್ತಮ ಹೆಸರು ತರಬೇಕು. ತಮ್ಮ ಸಮಸ್ಯೆಗಳಿಗೆ ಇಲಾಖೆ ಸದಾ ಸ್ಪಂದನೆ ನೀಡುವುದು. ನನ್ನ ಎಲ್ಲ ಸಿಬ್ಬಂದಿಗಳು ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು.ಸಂಘಟನೆ ಕೂಡ ನಮಗೆ ಬೆಂಬಲವಾಗಿ ನಿಂತು ಇಂಥ ಕಾರ್ಯದಲ್ಲಿ ಕೈಜೋಡಿಸುತ್ತಿದೆ.ತಾಲೂಕಿನಲ್ಲಿ ಎಲ್ಲ ಇಲಾಖೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು.ಶಾಸಕರು ಮತ್ತು ವಿಧಾನಸಭಾ ಉಪಾಧ್ಯಕ್ಷರಾದ ಆನಂದ ಮಾಮನಿಯವರು ಕೂಡ ಪ್ರೋತ್ಸಾಹ ನೀಡುವ ಮೂಲಕ ನಮ್ಮ ಇಲಾಖೆಗೆ ಸ್ಪಂದಿಸುತ್ತಿದ್ದು ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ.”ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಮಾತನಾಡಿದರು.

- Advertisement -

ಅವರು ಮುನವಳ್ಳಿ ವಲಯದ ಹೂಲಿಕಟ್ಟಿ ಹೂಲಿ ಅರ್ಟಗಲ್, ಸಿಂದೋಗಿ, ಮುನವಳ್ಳಿ ಕ್ಲಸ್ಟರ ಮಟ್ಟದ (ಎಸ್.ಎಸ್.ಎ ಹೊರತು ಪಡಿಸಿ) ಶಿಕ್ಷಕರಿಗೆ ಗುರು ಸ್ಪಂದನ ಕಾರ್ಯಕ್ರಮವನ್ನು ಮುನವಳ್ಳಿಯ ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಜ್ಯೋತಿ ಬೆಳಗಿಸುವ  ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ
ಎಚ್.ಆರ್.ಪೆಟ್ಲೂರ “ಶಿಕ್ಷಕರ ಸಂಘಟನೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಒಂದಕ್ಕೊಂದು ಪೂರಕವಾಗಿ ಶಿಕ್ಷಕರ ಕಾರ್ಯ ಮಾಡುತ್ತಿವೆ.ಶಿಕ್ಷಕ ಸ್ನೇಹಿಯಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜೊತೆಗೆ ಗುಣಾತ್ಮಕ ಶಿಕ್ಷಣಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು ಅವರಿಗೆ ಸಂಘಟನೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುವೆನು.

- Advertisement -

ಇನ್ನು ಮುನವಳ್ಳಿ ವಲಯದ ಎಲ್ಲ ಗುರುಗಳು ಗುರುಮಾತೆಯವರು ತಮ್ಮ ಸೇವಾ ಪುಸ್ತಕಗಳನ್ನು ಸರಿಯಾಗಿ ಇಂದು ಪರಿಶೀಲಿಸಿಕೊಂಡು ಏನಾದರೂ ತಿದ್ದುಪಡಿ ಇದ್ದಲ್ಲಿ ಸೂಕ್ತವಾಗಿ ತಿಳಿಸಿಸರಿಪಡಿಸಿಕೊಳ್ಳಲು ತಮಗೆ ಇದೊಂದು ಅವಕಾಶ.ಇದನ್ನು ಸದ್ಬಳಕೆ ಮಾಡಿಕೊಳ್ಳಿರಿ”ಎಂದು  ಕರೆ ನೀಡಿದರು.

 

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷರಾದ ಎಂ.ಎಸ್.ಕೋಳಿ ಮಾತನಾಡಿ “ ಸೇವಾ ಪುಸ್ತಕದ ಮಹತ್ವ. ಇಂದು ಶಿಕ್ಷಕರು ಪರಿಶೀಲಿಸಬೇಕಾದ ಮಹತ್ವದ ಅಂಶಗಳು ಯಾವವು ಎಂಬುದನ್ನು ಸವಿಸ್ತಾರವಾಗಿ ಈ ಸಂದರ್ಭದಲ್ಲಿ ತಿಳಿಸಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ  ಎಂ.ಎಸ್.ಹೊಂಗಲ.ಶ್ರೀಮತಿ ಎ.ಎಸ್.ಮದನಬಾವಿ, ಐ.ಪಿ.ಕಿತ್ತೂರ.ಡಿ.ಎ. ಮೇಟಿ,ಮಂಜುನಾಥ ನರೇಂದ್ರ,ನಾಗರತ್ನಾಕುಸುಗಲ್,ಆರ್.ಎಸ್.ಮೂಲಿಮನಿ,ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ,ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕರಾದ ಎಸ್.ಬಿ.ಗೋರಿನಾಯ್ಕ,ನೌಕರರ ಸಂಘದ ಉಪಾಧ್ಯಕ್ಷರಾದ ಗುಡಗಾರ, ಸಿ.ಆರ್.ಪಿಗಳಾದತಿಮ್ಮಯ್ಯ,ಎಸ.ಸಿ.ಕುರಿ,ಎಸ್.ವೈ.ನಿಪ್ಪಾಣಿ,ಬಿ.ಐ.ಇ.ಆರ್.ಟಿ ವೈ.ಬಿ.ಕಡಕೋಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧೀಕ್ಷಕರಾದ ಎಲ್.ಎಸ್.ಹಿರೇಮಠ, ಎಸ್.ಎಲ್.ಕಾಶಪ್ಪಗೋಳ, ದ್ವಿತಿಯ ದರ್ಜೆ ಸಹಾಯಕರಾದ ವಿದ್ಯಾಶ್ರೀ ಗಾಣಗಿ,ಬಾಬಾಜಾನ ಮಾಳಗಿ,ಕೊಟ್ರೇಶ ಗೊಲ್ಲಾರಹಟ್ಟಿ ಉಪಸ್ಥಿತರಿದ್ದರು.

 

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳನ್ನು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು

ಘಟಕದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಎಲ್ಲ ಶಿಕ್ಷಕ ಶಿಕ್ಷಕಿಯರು ತಮ್ಮ ತಮ್ಮ ಸೇವಾ ಪುಸ್ತಕಗಳನ್ನು ಪಡೆದುಕೊಂಡು ಅವುಗಳ ಪರಿಶೀಲನೆ ಮಾಡಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತಿ ಹೋಟಿ ಸುಜಾತಾ ಹೊನ್ನಳ್ಳಿ ಇವರಿಂದ ಪ್ರಾರ್ಥನಾ ಗೀತೆ ಹಾಡಿದರು.ಶಿಕ್ಷಕ ಗುರುನಾಥ ಪತ್ತಾರ ಸ್ವಾಗತಿಸಿದರು.ಬಿ.ಎಚ್.ಖೊಂದುನಾಯ್ಕ ನಿರೂಪಿಸಿದರು. ಬಿ.ಬಿ.ಹುಲಿಗೊಪ್ಪ ವಂದಿಸಿದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group