ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಶಿಕ್ಷಕ ಒಬ್ಬರು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಫೋನ್ ಮುಖಾಂತರ ನಮ್ಮ ಊರಿಗೆ ಇನ್ನೂ ಗೊಬ್ಬರ ಬಂದಿಲ್ಲ ಎಂದು ಕೇಳಿದ ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು ಪ್ರಕರಣ ಒಂದು ರಾಜಕೀಯ ತಿರುವು ಪಡೆದು ಕೊಂಡಿದೆ
ಸಂಕ್ಷಿಪ್ತ ಸ್ಟೋರಿ ಇಲ್ಲದೆ ನೊಡಿ:
ಮುಂಗಾರು ಬಿತ್ತನೆಗಾಗಿ ಗ್ರಾಮಕ್ಕೆ ರಸಗೊಬ್ಬರ ಪೂರೈಕೆ ಮಾಡಿ ಎಂದು ಜಿಲ್ಲೆಯವರೇ ಆದ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಜತೆ ಮೊಬೈಲ್ ನಲ್ಲಿ ಮಾತನಾಡಿದ್ದ ಸರ್ಕಾರಿ ಶಾಲೆ ಶಿಕ್ಷಕ ಅಮಾನತು ಆಗಿದ್ದಾರೆ.
ಔರಾದ್ ತಾಲೂಕಿನ ಜೀರ್ಗಾ(ಕೆ) ಸರ್ಕಾರಿ ಶಾಲಾ ಶಿಕ್ಷಕ ಕುಶಾಲ ಪಾಟೀಲ್ ಅಮಾನತ್ತುಗೊಂಡ ಶಿಕ್ಷಕ.
ಜೂ. 10 ರಂದು ಪಾಟೀಲ್ ಅವರು ಸ್ವಗ್ರಾಮ ಹೆಡಗಾಪುರದಲ್ಲಿ ರಸಗೊಬ್ಬರ ಕೊರತೆ ಸಂಬಂಧ ಕೇಂದ್ರ ಸಚಿವ ಖೂಬಾ ಅವರಿಗೆ ಮೊಬೈಲ್ ಕರೆ ಮಾಡಿದ್ದರು. ಈ ವೇಳೆ ಸಚಿವರು ಮತ್ತು ಶಿಕ್ಷಕನ ನಡುವೆ ಏಕ ವಚನದಲ್ಲಿ ಮಾತಿನ ವಾಗ್ವಾದ ಹಾಗೂ ಚುನಾವಣೆಯಲ್ಲಿ ನೋಡಿಕೊಳ್ಳೋಣ ಎನ್ನುವ ಮಟ್ಟಿಗೆ ಮಾತುಗಳನ್ನು ಇಬ್ಬರೂ ಆಡಿದ್ದರು. ಸಚಿವ ಖೂಬಾ ಹಾಗೂ ಶಿಕ್ಷಕ ಮಾತನಾಡಿದ ಆಡಿಯೋ ಎಲ್ಲೆಡೆ ವೈರಲ್ ಸಹ ಆಗಿತ್ತು.ಘಟನೆಗೆ ಸಂಬಂಧ ಔರಾದ್ ಬಿಇಒ ಎಚ್.ಎಸ್. ನಗನೂರು ಅವರು ನೀಡಿರುವ ವರದಿ ಅನ್ವಯ ಶಿಕ್ಷಕ ಕುಶಾಲ ಅವರನ್ನು ಅಮಾನತು ಮಾಡಲಾಗಿದೆ ಎಂದು ಡಿಡಿಪಿಐ ಗಣಪತಿ ಬಾರಾಟಕೆ
ಕೇಂದ್ರ ಸಚಿವರೊಂದಿಗೆ ಶಿಕ್ಷಕ ಪಾಟೀಲ್, ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಹಾಗೂ ಸಚಿವರೊಂದಿಗೆ ಮಾತನಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಕ್ಕೆ ಶಿಕ್ಷಕನನ್ನು ಶಿಕ್ಷಣ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ.
ರೈತನೂ ಆಗಿರಬಹುದಾದ ಸರ್ಕಾರಿ ನೌಕರನೊಬ್ಬ ರಸಗೊಬ್ಬರ, ಬಿತ್ತನೆ ಬೀಜ, ಬೆಳೆ ವಿಮೆ, ಬೆಳೆ ಸಾಲ ಮುಂತಾದ ವಿಷಯ ಕುರಿತಂತೆ ಮಾತನಾಡಲೇಬಾರದು ಎಂಬುದು ಸರ್ಕಾರದ ಧೋರಣೆಯಾದರೆ ಅದು ಸರ್ವಾಧಿಕಾರ ಎನಿಸಿಕೊಳ್ಳುತ್ತದೆ. ಶಿಕ್ಷಕ ಸಚಿವರಿಬ್ಬರೂ ಮಾತನಾಡಿದ ಆಡಿಯೋ ಕೇಳಿದರೆ ಸಚಿವರು ಶಿಕ್ಷಕ ರೈತನಿಗೆ ರಸಗೊಬ್ಬರ ಪೂರೈಕೆ ಮಾಡಿಸಿಕೊಡುವ ಭರವಸೆ ನೀಡಬೇಕಿತ್ತು ಅದರ ಬದಲಾಗಿ ಕೇಂದ್ರ ಮಂತ್ರಿಯಾದ ತಮ್ಮನ್ನು ಕೇಳಬಾರದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದು ಎಲ್ಲೆಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸಗೊಬ್ಬರ ಕೇಳಿದ್ದಕ್ಕೆ ಶಿಕ್ಷಕ ಅಮಾನತುಗೊಂಡ ವಿಷಯ ಬರುವ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಸ್ವರೂಪ ಪಡೆಯುತ್ತದೆ ಎನ್ನುವುದು ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ