ಮನುಷ್ಯರ ವ್ಯಕ್ತಿತ್ವ ನಿರ್ಮಾಣದ ನಿಜವಾದ ಶಿಲ್ಪಿಗಳು ಎಂದರೆ ಶಿಕ್ಷಕರು

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸವದತ್ತಿ: “ಯಾರು ತಮ್ಮ ಬಾಳನ್ನು ಮೇಣದಂತೆ ಕರಗಿಸಿಕೊಂಡು ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾರೋ ಅವರು ನಿಸ್ಸಂಶಯವಾಗಿ ಅತ್ಯುತ್ತಮ ಶಿಕ್ಷಕ ಶಿಕ್ಷಕಿ ಎನಿಸಿಕೊಳ್ಳುತ್ತಾರೆ. ಇದೊಂದು ಉನ್ನತ ಆದರ್ಶ. ಈ ಮಹತ್ವದ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ. ಪ್ರಾಚೀನ ಕಾಲದಿಂದಲೂ ಗುರುಗಳಿಗೆ ಮಹತ್ವವಾದ ಪೂಜ್ಯನೀಯ ಸ್ಥಾನವಿದೆ. ಮನುಷ್ಯರ ವ್ಯಕ್ತಿತ್ವ ನಿರ್ಮಾಣದ ನಿಜವಾದ ಶಿಲ್ಪಿಗಳು ಎಂದರೆ ಶಿಕ್ಷಕರು. ಇಂದು ನಾವು ಸೇವೆಯಿಂದ ನಿವೃತ್ತರನ್ನು ಸನ್ಮಾನಿಸಿ ಗೌರವಿಸಿದ್ದೇವೆ. ನಮ್ಮ ತಾಲೂಕಿನಲ್ಲಿ ನಿವೃತ್ರ ಶಿಕ್ಷಕರು ವಯೋವೃದ್ದರು ಹಿರಿಯರು ಇದ್ದಾರೆ ಅವರನ್ನು ಇಂದು ಸನ್ಮಾನಗೊಂಡ ನಿವೃತ್ತರು ಅನುಸರಿಸಬೇಕು. ಇಂದು ನಿವೃತ್ತರಾದವರ ಆದರ್ಶಗಳನ್ನು ಇಂದಿನವರು ಪಾಲಿಸಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ವ್ಯಕ್ತಿತ್ವ ವಿಶಿಷ್ಟ ಗುಣವಿರುತ್ತದೆ.

ಇಂದು ನಿವೃತ್ತರ ಪರವಾಗಿ ಮಾತನಾಡಿದ ಗುರುಮಾತೆ ತಾವು ಶಿಕ್ಷಕಿಯಾಗಲು ತಮ್ಮ ಗುರುಮಾತೆ ಕಾರಣ ಎಂಬುದನ್ನು ನೆನಪಿಸಿಕೊಂಡಂತೆ ನನ್ನ ಬದುಕಿನಲ್ಲಿಯೂ ನನಗೆ ಕಲಿಸಿದ ಗುರುಗಳನ್ನು ನಾನು ಇಂದಿಗೂ ನೆನೆಯುತ್ತೇನೆ. ಅಷ್ಟೇ ಅಲ್ಲ ನನ್ನ ಈ ಮೂರನೆಯ ಅವಧಿಯ ಆಯ್ಕೆಯಲ್ಲಿಯೂ ಕೂಡ ಗುರುಗಳ ಆಶೀರ್ವಾದವಿದೆ.ಅವರ ಆಶೀವಾದದಿಂದ ತಮ್ಮೆಲ್ಲರೊಂದಿಗೆ ಈ ಶಿಕ್ಷಕ ದಿನಾಚರಣೆಯನ್ನು ಕಳೆದ 13 ವರ್ಷಗಳಿಂದಲೂ ಆಚರಿಸಲು ಪಾಲ್ಗೊಳ್ಳಲು ಸಂತೋಷವೆನಿಸುತ್ತದೆ. ಅದಕ್ಕೆ ಕಾರಣ ಗುರುಪ್ರೇರಣೆ ಗುರುಗಳ ಆಶೀರ್ವಾದ ಈ ಆಶೀರ್ವಾದ ಸದಾ ನನ್ನ ಮೇಲಿರಲಿ. ಗುರುಭವನ ಕಾರ್ಯವೂ ಕೂಡ ಆರಂಭವಾಗಿದ್ದು ಶಿಕ್ಷಕರ ಯಾವುದೇ ಸಮಸ್ಯೆಗಳಿರಲಿ ಅದಕ್ಕೆ ಸ್ಪಂದಿಸುವ ಜವಾಬ್ದಾರಿ ನನ್ನದು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ತಾಲೂಕಿನ ಎಲ್ಲ ಶಿಕ್ಷಕರೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ವಿಧಾನಸಭಾ ಉಪಾಧ್ಯಕ್ಷ ಮತ್ತು ಜನಪ್ರಿಯ ಶಾಸಕ ಆನಂದ ಮಾಮನಿ ತಿಳಿಸಿದರು.

ಅವರು ಸವದತ್ತಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಜರುಗಿದ ಶಿಕ್ಷಕ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ನಿವೃತ್ತ ಶಿಕ್ಷಕ ಶಿಕ್ಷಕಿಯರ ಗೌರವ ಸನ್ಮಾನದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಸವದತ್ತಿ. ಉಪಾಧ್ಯಕ್ಷರಾದ ಚಂದ್ರಶೇಖರ ಅಳಗೋಡಿ. ಪುರಸಭೆಯ ಉಪಾಧ್ಯಕ್ಷರಾದ ದೀಪಕ ಜಾನ್ವೇಕರ. ತಹಶೀಲ್ದಾರ ಪ್ರಶಾಂತ ಪಾಟೀಲ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ. ತಾಲೂಕು ವೈದ್ಯಾಧಿಕಾರಿಗಳಾದ ಡಾ.ಮಹೇಶ ಚಿತ್ತರಗಿ.ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶ್ವಂತಕುಮಾರ. ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ, ಹಾಲಿ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಮೊದಲಾದವರು ಉಪಸ್ಥಿತರಿದ್ದರು.

- Advertisement -

ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಮಬನೂರ ಶಾಲೆಯ ಎಲ್.ಎಸ್.ತಪಸಿ, ಮದ್ಲೂರ ಶಾಲೆಯ ಎಸ್.ಜಿ.ಲಮಾಣಿ, ಗೊಂದಿ ಶಾಲೆಯ ಪಿ.ಪಿ.ಘಟವಾಳಿಮಠ, ಜಕಬಾಳ ಶಾಲೆಯ ವಾಯ್.ಎನ್.ಅಬ್ಬಾಯಿ, ಹಾರುಗೊಪ್ಪ ಶಾಲೆಯ ಎಸ್.ಜಿ.ಹುದ್ದಾರ, ಸಂಗ್ರೇಶಕೊಪ್ಪ ಪ್ರೌಢಶಾಲೆಯ ಶ್ರೀಮತಿ ಆರ್.ಎ.ಚಪ್ಪರಬಂಧ, ಮುನವಳ್ಳಿ ಎಸ್.ಪಿ.ಜೆ.ಜಿ. ಪ್ರೌಢಶಾಲೆಯ ಎಮ್.ಆರ್.ಘಂಟಿ, ಹಂಚಿನಾಳ ಎಸ್,ಎಫ್.ಪ್ರೌಢಶಾಲೆಯ ಎಸ್.ಎಲ್.ಗಾಣಗಿ, ಸವದತ್ತಿ ಎಸ್.ಕೆ.ಪ್ರೌಢಶಾಲೆಯ ಬಿ.ವೈ.ನಾಯಕ. ಬಿ.ಬಿ.ಮಮದಾಪೂರ ಪ್ರೌಢಶಾಲೆ ಸವದತ್ತಿಯ ಕೆ.ಎಲ್.ಗಸ್ತಿ.ಪಿ.ಎಂ.ಕಮತರ.ಶ್ರೀಮತಿ ಪಿ.ವಾಯ್.ಗೋಕಾಕ.ವ್ಹಿ.ಟಿ.ಎಂ.ಕೆ.ಪ್ರೌಢಶಾಲೆ ಹೂಲಿಯ ಎಸ್.ಜಿ.ಕಾಂಬಳೆ. ಯರಗಟ್ಟಿ ಬಸವೇಶ್ವರ ಪ್ರೌಢಶಾಲೆಯ ಎಸ್.ಎನ್.ಯಮನಕ್ಕನವರ. ಮುನವಳ್ಳಿ ಮಲಪ್ರಭಾ ಪ್ರೌಢಶಾಲೆಯ ಆರ್.ಎ.ಮುಲ್ಲಾ.ಸವದತ್ತಿಯ ಎನ್.ಎಸ್.ಎಫ್ ಪ್ರೌಢಶಾಲೆಯ ಎಸ್.ವ್ಹಿ.ಅಂದಾನಿ.ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆ ತಲ್ಲೂರಿನ ಎಸ್.ಆರ್.ಬೆನಕಟ್ಟಿ. ತಲ್ಲೂರಕ್ರಾಸ್ ಪ್ರಾಥಮಿಕ ಶಾಲೆಯ ಅಶೋಕ ಹಿರೇಮಠ.ಹಿರೂರ ಪ್ರಾಥಮಿಕ ಶಾಲೆಯ ಆರ್.ವೈ.ಅಡಿಭಟ್ಟಿ ಸೇರಿದಂತೆ 24 ಜನ ನಿವೃತ್ತ ಗುರುಗಳು ಗುರುಮಾತೆಯರನ್ನು ಸತ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಪ್ರಾಸ್ತಾವಿಕವಾಗಿ ಮಾತನಾಡುತ್ತ “ ಶಿಕ್ಷಣ ವ್ಯವಸ್ಥೆ ಅಂದು ಇಂದು ಕುರಿತು ತಿಳಿಸುತ್ತ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಶಿಕ್ಷಕರು ಎಲ್ಲರಿಗೂ ಒಂದಲ್ಲ ಒಂದು ರೀತಿ ಮಾರ್ಗದರ್ಶಕರು. ಎಲ್ಲ ಇಲಾಖೆಗಳಿಗೂ ಶಿಕ್ಷಣ ಇಲಾಕೆ ಮಾತೃ ಇಲಾಖೆಯಿದ್ದಂತೆ. ಮಕ್ಕಳಿಗೆ ಬೋಧನೆ ಮಾಡಿ ಅದರ ಮೌಲ್ಯಮಾಪನ ಮಾಡುವ ಜೊತೆಗೆ ತಮ್ಮ ಬೋಧನೆ ಎಷ್ಟು ಫಲಪ್ರದವಾಗಿದೆ ಎಂಬುದರ ಸ್ವಯಂ ಮೌಲ್ಯಮಾಪನ ಮಾಡಿಕೊಂಡು ಮರುದಿನದ ಬೋಧನೆಗೆ ಪೂರ್ವ ತಯಾರಿ ಮಾಡಿಕೊಳ್ಳುವ ಶಿಕ್ಷಕರ ಬದುಕು ನಿಜಕ್ಕೂ ಮಹತ್ವವಾದದ್ದು. ನಮ್ಮ ಮನೆಯ ಗುರುಗಳು ಹಿರೇಮಠದವರು ಪ್ರತಿ ಸೋಮವಾರ ಬಂದರೆ ಅವರು ನಮ್ಮ ಮನೆಗೆ ಆಗಮಿಸಬೇಕು ಅಲ್ಲಿ ಅವರನ್ನು ಪೂಜಿಸಿದ ನಂತರವೇ ನಮ್ಮ ದೈನಂದಿನ ಚಟುವಟಿಕೆಗಳು ಆರಂಭ. ಶ್ರಾವಣ ಮಾಸದಲ್ಲಂತೂ ಪ್ರತಿನಿತ್ಯ ಮನೆ ಗುರುಗಳು ಆಗಮಿಸುವುದರೊಂದಿಗೆ ನಮ್ಮ ದೈನಂದಿನ ಜೀವನ ಜರುಗುತ್ತಿತ್ತು.ಅದು ಶಾಲೆಯೇ ಆಗಿರಲಿ ಮನೆಯೇ ಆಗಿರಲಿ ಗುರು ಪರಂಪರೆಯನ್ನು ಗೌರವಿಸುವ ಸಂಪ್ರದಾಯ ನಮ್ಮ ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇಂದು ತಂತ್ರಜ್ಞಾನ ಆಧಾರಿತ ಬೋಧನೆ ಸಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಇದಕ್ಕೆ ಇಂದಿನ ಪೀಳಿಗೆಯ ಶಿಕ್ಷಕರು ಹೊಂದಿಕೊಳ್ಳುವ ಜೊತೆಗೆ ನೂತನ ತಂತ್ರಜ್ಞಾನ ಬಳಸಿ ಬೋಧಿಸಲು ಅಣಿಯಾಗುತ್ತಿರುವುದು ಕೂಡ ಸಂತಸದ ಸಂಗತಿ. ಸೋಮವಾರದಿಂದ ತರಗತಿಗಳು ಭೌತಿಕವಾಗಿ ಆರಂಭವಾಗುತ್ತಿದ್ದು ಎಲ್ಲ ಶಿಕ್ಷಕರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದು ಆರೋಗ್ಯ ಇಲಾಖೆ ಮತ್ತು ತಾಲೂಕು ಪಂಚಾಯತಿಯ ಸಹಕಾರದೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಶಾಲೆಗಳ ಸ್ವಚ್ಚತೆಯಿಂದ ಹಿಡಿದು ಕಾರ್ಯ ಜರುಗಿದೆ.”ಎಂದು ತಿಳಿಸಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸವದತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 5 ರ ಗುರುಮಾತೆಯರಿಂದ ನಾಡಗೀತೆ ಜರುಗಿತು. ಶಿಕ್ಷಣ ಸಂಯೋಜಕ ಮಂಜುನಾಥ ಹುದ್ದಾರ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ಬಳಿಗಾರ ಸ್ವಾಗತಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಾಯ್.ತುಬಾಕಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!