spot_img
spot_img

ಶಿಕ್ಷಣದ ಗುಣಮಟ್ಟವನ್ನು ಸಾಕಾರಗೊಳಿಸಲು ಶಿಕ್ಷಕರಿಗೆ ಜ್ಞಾನಸಂಗಮ ಸಹಕಾರಿ – ಆನಂದ ಮಾಮನಿ

Must Read

- Advertisement -

ಸವದತ್ತಿ: ಕೋರೋನಾ ಮಹಾಮಾರಿಯ ಈ ಸಂಕಷ್ಟ ಸಮಯದಲ್ಲಿ ಶಿಕ್ಷಣದ ಗುಣಮಟ್ಟ ಸಾಕಾರಗೊಳಿಸಲು, ಶಿಕ್ಷಕರಿಗೆ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಂಡು ಮಾಹಿತಿ ಒದಗಿಸಲು ತಯಾರಿಸಿರುವ ಜ್ಞಾನಸಂಗಮ ಯೂಟ್ಯೂಬ್ ಚಾನೆಲ್ ನಿಜಕ್ಕೂ ಸಹಕಾರಿ. ಈಗಾಗಲೇ ಸರಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಗಳನ್ನು ತೆರೆಯಲು ತಜ್ಞರ ಸಮಿತಿಯ ವರದಿ ಅನುಷ್ಠಾನದಲ್ಲಿದ್ದು ವರದಿ ಬರುವವರೆಗೂ ಇಂತಹ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಸವದತ್ತಿ ತಾಲೂಕಿನಲ್ಲಿ ಮಾಡಿಕೊಂಡ ವ್ಯವಸ್ಥೆಯನ್ನು ತಾಲೂಕಿನ ಎಲ್ಲ ಶಿಕ್ಷಕರು ಸದುಪಯೋಗಪಡಿಸಿಕೊಂಡು ತಾಲೂಕಿನ ಶಿಕ್ಷಣ ವ್ಯವಸ್ಥೆಗೆ ಬಲತುಂಬಿರಿ.ಶಿಕ್ಷಕ ಸ್ನೇಹಿ ಈ ಕಾರ್ಯಕ್ಕೆ ನನ್ನ ಬೆಂಬಲ ಸದಾ ಇದ್ದು ನಾನೂ ಕೂಡ ಈ ಗೂಗಲ್ ಮೀಟ್‍ದಲ್ಲಿ ಪಾಲ್ಗೊಳ್ಳುವೆನು ಎಂದು ಪ್ರೋತ್ಸಾಹಪರ ನುಡಿಗಳನ್ನು ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕ ಆನಂದ ಮಾಮನಿಯವರು ಹೇಳಿದರು.

ಅವರು ಸವದತ್ತಿ ತಾಲೂಕಿನ ಶಿಕ್ಷಕರಿಗಾಗಿ ಜ್ಞಾನಸಂಗಮ ಗೂಗಲ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಮಾತನಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಶಿಕ್ಷಣ ಇಲಾಖೆಯ ಆಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ. ಬೆಳಗಾವಿ ಡಿ.ಡಿಪಿ.ಐ ಆನಂದ ಪುಂಡಲೀಕ ಡಯಟ್ ಪ್ರಾಚಾರ್ಯರಾದ ಎಂ.ಎಂ.ಸಿಂಧೂರ. ವಿವಿಧ ತಾಲೂಕುಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ಬಳಿಗಾರ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ, ತಾಲೂಕಿನ ಎಲ್ಲ ಬಿ.ಆರ್,ಪಿ ಹಾಗೂ ಬಿ.ಐ.ಇ.ಆರ್.ಟಿ ಮತ್ತು ಸಿ.ಆರ್.ಪಿಗಳು ಸೇರಿದಂತೆ ಸರಕಾರಿ ಅನುದಾನಿತ ಅನುದಾನರಹಿತ ಶಿಕ್ಷಕ ಶಿಕ್ಷಕಿಯರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸದಸ್ಯರು ಮಾಧ್ಯಮ ಪ್ರತಿನಿಧಿಗಳು ಗೂಗಲ್ ಮೀಟ್ ಮತ್ತು ಯುಟ್ಯೂಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -

ಡಿ.ಡಿ.ಪಿ.ಐ ಆನಂದ ಪುಂಡಲೀಕ ಮಾತನಾಡಿ, “ಸವದತ್ತಿ ತಾಲೂಕಿನಲ್ಲಿ ತಂತ್ರಜ್ಞಾನ ಆಧಾರಿತ ತರಬೇತಿ ಯಶಸ್ವಿಯಾಗಿ ಕೊನೆಗೊಂಡಿದ್ದು.ಈ ನಿಟ್ಟಿನಲ್ಲಿ ಜ್ಞಾನಸಂಗಮ ನಿಜಕ್ಕೂ ಉಪಯುಕ್ತ ಚಟುವಟಿಕೆ ಇದು ನಿರಂತರವಾಗಿ ಮುಂದುವರೆಯಲಿ”ಎಂದು ಶುಭ ಹಾರೈಸಿದರು. ಡಯಟ್ ಪ್ರಾಚಾರ್ಯರಾದ ಎಂಎಂ.ಸಿಂಧೂರ ಮಾತನಾಡಿ “ಕೋರೋನಾ ಮಹಾಮಾರಿ ಕಳೆದ ವರ್ಷ ಶಿಕ್ಷಣ ವ್ಯವಸ್ಥೆಯಲ್ಲಿ ಗಂಭೀರ ಪರಿಣಾಮ ಉಂಟು ಮಾಡಿದ್ದು ಪ್ರಸಕ್ತ ಸಾಲಿನಲ್ಲಿ ತಾಂತ್ರಿಕ ತರಬೇತಿ ಶಿಕ್ಷಕರಿಗೆ ನೀಡಲಾಗಿದ್ದು ಇದನ್ನು ಬಳಸಿ ಮಕ್ಕಳ ಕಲಿಕೆಯಲ್ಲಿ ತೊಡಗುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವಂತೆ” ಕರೆ ನೀಡಿದರು.

ಆಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಮಾತನಾಡಿ “ಕೋರೋನಾದಿಂದಾಗಿ ಅತ್ಯಂತ ವಿಷಮ ಸ್ಥಿತಿಯಲ್ಲಿ ನಾವಿದ್ದೇವೆ. ಆದರೂ ಅಂತರ್ಜಾಲದ ಸದುಪಯೋಗ ಶಿಕ್ಷಣ ಇಲಾಖೆಯಲ್ಲಿ ಜರುಗಿದ್ದು ಸವದತ್ತಿ ತಾಲೂಕಿನಲ್ಲಿ ವಿನೂತನ ಕಾರ್ಯ ಚಟುವಟಿಕೆ ಜ್ಞಾನಸಂಗಮ ಹಮ್ಮಿಕೊಂಡಿದ್ದು ಶ್ಲಾಘನೀಯ.ಯಾರು ನಿರಂತರ ಅಧ್ಯಯನ ಶೀಲರಾಗಿರುವರೋ ಅವರು ತಮ್ಮಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

ಈಗ ನಾವೆಲ್ಲ ತಂತ್ರಜ್ಞಾನ ಯುಗದಲ್ಲಿ ಇದ್ದೇವೆ. ಅದರ ಪರಿಣಾಮ ಈಗ ಗೂಗಲ್ ಮೀಟನಲ್ಲಿ ನಾವೆಲ್ಲ ಸೇರಿದ್ದೇವೆ ಇದರ ಸದುಪಯೋಗ ತರಗತಿ ಮಕ್ಕಳಿಗೂ ದೊರೆಯುವಲ್ಲಿ ಜ್ಞಾನಸಂಗಮ ಸಹಕಾರಿ.ಇದು ಶಿಕ್ಷಕ ಶಿಕ್ಷಕರ ನಡುವೆ ಕೂಡ ಬೋಧನೆಗೆ ಸಂಬಂಧಪಟ್ಟಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜರುಗಲಿ”ಎಂದು ಆಶಿಸಿದರು.

- Advertisement -

ಈ ಸಂದರ್ಭದಲ್ಲಿ ಆಪರ ಆಯುಕ್ತರೊಡನೆ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ಹಿ.ಬೆಳವಡಿ.ದೇವೇಂದ್ರ ಎತ್ತಿನಗುಡ್ಡ, ಎಸ್.ವ್ಹಿ.ಜಗುನವರ, ಮಹಾದೇವಿ ಕುಂಬಾರ, ಕುಶಾಲ ಮುದ್ದಾಪುರ ಇಲಾಖೆಯ ಮತ್ತು ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟಂತೆ ಸಂವಾದದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಜ್ಞಾನಸಂಗಮ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುವ ಜೊತೆಗೆ ಸ್ವಾಗತ ಕಾರ್ಯಕ್ರಮ ನೆರವೇರಿಸಿದರು. ತಾಂತ್ರಿಕ ಸಹಕಾರದ ಸಂಯೋಜನೆ ಮತ್ತು ಪರಿಕಲ್ಪನೆಯನ್ನು ಡಾ.ಬಿ.ಐ.ಚಿನಗುಡಿ ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ ಶಿಕ್ಷಕ ಸುಧೀರ ಪಾಟೀಲ ನಿರ್ವಹಿಸಿದರು.ಕಾರ್ಯಕ್ರಮದ ಕೊನೆಗೆ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ಬಳಿಗಾರ ವಂದಿಸಿದರು.

ವರದಿ – ವೈ.ಬಿ.ಕಡಕೋಳ ಬಿ.ಐ.ಇ.ಆರ್.ಟಿ. ಸವದತ್ತಿ

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group