ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಸೇವೆ ಸಲ್ಲಿಸುವಂತಾಗಿದೆ – ಆನಂದ ಭೂಸನೂರ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸಿಂದಗಿ: ಹಿಂದಿನ ಕಾಲದಲ್ಲಿ ಶಿಕ್ಷಕರು ಎಂದರೆ ಅತೀವ ಗೌರವದಿಂದ ಕಾಣುತ್ತಿದ್ದರು ಆದರೆ ಇಂದು ಶಿಕ್ಷಕರೆಂದರೆ ರಾಜ್ಯದಲ್ಲಿ ಯಾವುದೆ ಕಾರ್ಯದಲ್ಲಿ ಶಿಕ್ಷಕರನ್ನು ತೊಡಗಿಸಿಕೊಂಡು ಎಲ್ಲರ ನಿಂದನೆಗಳಿಗೆ ಪಾತ್ರರಾಗುವಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಸೇವೆ ಸಲ್ಲಿಸುವಂತಾಗಿದೆ ಎಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆನಂದ ಭೂಸನೂರ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಸಿಂದಗಿ 2021 ನೇ ಸಾಲಿನ ಜುಲೈ ತಿಂಗಳಲ್ಲಿ ನಿವೃತ್ತಗೊಂಡಿರುವ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಸತತ ಪರಿಶ್ರಮದ ಮೂಲಕ ವಿದ್ಯಾರ್ಥಿಗಳಿಗೆ  ಉತ್ತಮ ಮಾರ್ಗದರ್ಶಕರಾಗಿ ಅವರಿಗೆ ಮುಂದಿನ  ಶಿಕ್ಷಣಕ್ಕಾಗಿ ದಾರಿ ತೋರುವದರೊಂದಿಗೆ ಸಮಾಜದಲ್ಲಿ  ಆದರ್ಶ ವ್ಯಕ್ತಿಯಾಗಿ ಬಾಳುವಂತೆ ಪ್ರೇರಣೆ ನೀಡಬೇಕು ಶಿಕ್ಷಕರ ಜೀವನ ಸ್ವಾರ್ಥ ರಹಿತ ಸೇವಾ ಮನೋಭಾವನೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಮಾನವೀಯ  ಮೌಲ್ಯಗಳು ತುಂಬಿ ಸಮಾಜದಲ್ಲಿ ಆದರ್ಶ ವ್ಯಕ್ತಿಯನ್ನಾಗಿ  ಮಾಡಿದಾಗ ಶಿಕ್ಷಕ ವೃತ್ತಿಗೆ ಹೆಚ್ಚು ಗೌರವ ದೊರಕುತ್ತದೆ ಎಂದು ಸಲಹೆ ನೀಡಿದರು.

ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಎಸ್.ಬಿ.ಕಮತಗಿ ಹಾಗೂ ಆನಂದ ಮಾಡಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಮಾರ್ಗದರ್ಶನ  ನೀಡಿ ವಯೋಮಾನದಿಂದ ನಿವೃತ್ತಿ ಹೊಂದಿದರೂ ಅಪಾರ ವಿದ್ಯಾರ್ಥಿಗಳ ಜೀವನ ರೂಪಿಸಿ ಅವರು ವಿವಿಧ ಹುದ್ದೆಯಲ್ಲಿ ಸೇವೆ ಮಾಡಿದರು ಸಹ ಇಲಾಖೆ ಸಿಬ್ಬಂದಿ ಕಂಡ ತಕ್ಷಣ ಅಪಾರ ಗೌರವ ಕಾಣುವುದು ಅವರ ದೊಡ್ಡತನವಾಗಿದೆ ಎಂದು ಗುಣಗಾನ ಮಾಡಿದರು.

- Advertisement -

ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ಎಲ್.ಟಿ.ಹರಿಜನ, ಎ ಎಂ ಚೌಧರಿ ಮಾತನಾಡಿ, ಜೀವನದಲ್ಲಿ ಗುರುವಿನ ಸ್ಥಾನ ಪಡೆದು ವಿವಿಧ ಗ್ರಾಮಗಳಲ್ಲಿ ಶಿಕ್ಷಕರಾಗಿ ಉತ್ತಮ  ಸೇವೆ ಮಾಡಿರುವದು ಸಂತೋಷವಾದ ವಿಷಯವಾಗಿದೆ , ಶಿಕ್ಷಕರು ದಾನಿಗಳ ಮೂಲಕ ಶಾಲೆ ಅಭಿವೃದ್ದಿ ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿರುವ  ಕೋರಹಳ್ಳಿ ಎಚ್ ಪಿ ಎಸ್ ಶಾಲೆಯ ಆದರ್ಶ ಶಿಕ್ಷಕರಾದ ಎಲ್.ಟಿ.ಹರಿಜನ,  ಮೋರಟಗಿ ಗ್ರಾಮದ ಜನತಾ ಕಾಲೊನಿ ಸರಕಾರಿ ಶಾಲೆಯ ಶಿಕ್ಷಕಿ ಎಸ್.ಬಿ.ಗೆಜ್ಜಲಗಟ್ಟಿ. ಟಿ ಪಿ ಹಂಜಗಿ, ಕಡಣಿ  ಸರಕಾರಿ ಶಾಲೆಯ ಎಸ್ ಬಿ ದುದ್ದಗಿ, ಕುಳೆಕುಮಟಗಿ ಸರಕಾರಿ ಶಾಲೆಯ ಬಿ.ಆರ್.ಮಾರದ, ಕಡ್ಲೇವಾಡ ಶಾಲೆಯ  ಎ .ಎಂ .ಚೌಧರಿ,   ನಾಗರಹಳ್ಳಿ ಎಚ್.ಪಿ.ಎಸ್. ಶಾಲೆಯ ಪಿ ಎಸ್ ಮ್ಯಾಕೇರಿ, ಮು ಗು ಎಂ ಪಿ ಎಸ್ ಚಿಕ್ಕಸಿಂದಗಿ ಇವರನ್ನು ಸನ್ಮಾನಿಸಿ ಗೌರವಿಸಿದರು.

ಸಾವಿತ್ರಿಬಾಯಿ ಫುಲೆ  ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎಸ್.ಎಂ.ಮಸಳಿ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ರಾಯಪ್ಪ ಇವಣಗಿ ಸ್ವಾಗತಿಸಿದರು, ಭಾರತ ಸ್ಕೌಟ್ ಮತ್ತು ಗೈಡ್ಸ್ ಕಾರ್ಯದರ್ಶಿ ಬಸವರಾಜ ಸೋಮಪೂರ ನಿರೂಪಿಸಿದರು, ಶಿಕ್ಷಕರ ಸಂಘದ ನಿರ್ದೇಶಕ ಬಸಯ್ಯ ಹಿರೇಮಠ ವಂದಿಸಿದರು.

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!