spot_img
spot_img

ಶಿಕ್ಷಕರ ದಿನಾಚರಣೆ ಹಾಗೂ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

Must Read

spot_img
- Advertisement -

ಸವದತ್ತಿಃ ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸ್ಥಳೀಯ ನಿಕ್ಕಮ್ ಮಂಗಲ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ದೇಶ ಕಾಯುವ ಸೈನಿಕರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರಂತೆ ಸಮಾಜದಲ್ಲಿ ಉತ್ತಮ ಸಂಸ್ಕೃತಿ ನೀಡುವ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನಮಗೆ ಮಾರ್ಗದರ್ಶನ ನೀಡಿದ ಶಿಕ್ಷಕರ ಬಗ್ಗೆ ನಾವು ವಿಶೇಷವಾದಂತ ಗೌರವವನ್ನು ಹೊಂದಬೇಕಿದೆ ಎಂದರು.

- Advertisement -

ಟಿಎಪಿಸಿಎಮ್‌ಎಸ್ ಅಧ್ಯಕ್ಷ ರವೀಂದ್ರ ಯಲಿಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಕಲಿಕೆಯೊಂದಿಗೆ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ನೀಡಬೇಕಿದ್ದು, ಸಂಬಳಕ್ಕಾಗಿ ದುಡಿಯದೆ ಆತ್ಮ ಸಂತೋಷದಿಂದ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕೆಂದರು.

ಅತಿಥಿ ಉಪನ್ಯಾಸ ನೀಡಿದ ಸಾಧನಾ ಐಎಎಸ್ ಕೋಚಿಂಗ್ ಸೆಂಟರ ನಿರ್ದೇಶಕಿ ಜ್ಯೋತಿ ಸಿ.ಕೆ ಮಾತನಾಡಿ, ಮನುಷ್ಯನ ಜೀವನದಲ್ಲಿ ಹಸಿವು, ಅವಮಾನ, ಅಪಮಾನಗಳೇ ಗುರುವಿನ ಸ್ಥಾನವಾಗಿದ್ದು, ಅವುಗಳಿಂದಲೆ ನಮ್ಮ ಸಾಧನೆಯ ಸನ್ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯ ಎಂದರು. ಮಕ್ಕಳಲ್ಲಿರುವಂತ ಪ್ರತಿಭೆಯನ್ನು ಹೊರತರುವಂತ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಿದ್ದು, ಸರಕಾರಿ ಶಾಲೆಗಳ ಅಭಿವೃದ್ದಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು. ಸಾಧನಾ ಕೋಚಿಂಗ್ ಸೆಂಟರನಲ್ಲಿ ಐ.ಎ.ಎಸ್ ಕೋಚಿಂಗ್ ಪಡೆಯಲು ಆಗಮಿಸುವ ಶಿಕ್ಷಕರ ಮಕ್ಕಳಿಗೆ ಶೇ.೫೦ರಷ್ಟು ಕಡಿಮೆ ಹಣದಲ್ಲಿ ತರಬೇತಿ ನೀಡುವ ಭರವಸೆ ನೀಡಿದರು.

ಬೆಟಸೂರಮಠದ ಶ್ರೀ ಅಜ್ಜಯ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

- Advertisement -

ಸಮಾರಂಭದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ಕ್ರೀಯಾಶೀಲ ಶಿಕ್ಷಕರನ್ನು ಮತ್ತು ಹಿರೇಮಠ ಪ್ರತಿಷ್ಠಾನದಿಂದ ೨೦೨೩-೨೪ನೇ ಸಾಲಿನ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

೨೦೨೨-೨೩ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.೧೦೦ಕ್ಕೆ ನೂರರಷ್ಟು ಫಲಿತಾಂಶ ಪಡೆದ ಆದರ್ಶ ವಿದ್ಯಾಲಯ ಯಡ್ರಾಂವಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಮ್ಮನಗುಡ್ಡ, ಸರಕಾರಿ ಪ್ರೌಢ ಶಾಲೆ ಹಾರುಗೊಪ್ಪ, ಕಿತ್ತೂರ ರಾಣಿ ಚನ್ನ ವಸತಿ ಶಾಲೆ ಕಿಟದಾಳ, ಬಾಲಾಜಿ ಕನ್ನಡ ಮಾದ್ಯಮ ಶಾಲೆ ಯರಗಟ್ಟಿ, ಎಮ್.ಎಲ್.ಇ.ಎಸ್ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಮುನವಳ್ಳಿ, ಶ್ರೀ ಕುಮಾರೇಶ್ವರ ಕನ್ನಡ ಮಾದ್ಯಮ ಶಾಲೆ ಮುನವಳ್ಳಿ ಇವರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ತಾ.ಪಂ ಕಾರ್ಯನಿರ್ವನಾಧಿಕಾರಿ ಯಶವಂತಕುಮಾರ, ಸಿಡಿಪಿಓ ಸುನಿತಾ ಪಾಟೀಲ, ಮೈತ್ರಾದೇವಿ ವಸ್ತ್ರದ, ಭಾಗೀರಥಿ ಹಿರೇಮಠ, ಅಶ್ವತ ವೈದ್ಯ, ಟಿಎಚ್‌ಓ ಡಾ.ಶ್ರೀಪಾದ ಸಬನೀಸ, ಅಭಿಯಂತರ ಎಚ್.ಎ.ಕದ್ರಾಪುರ, ಆನಂದಕುಮಾರ ಮೂಗಬಸವ, ಕಿರಣ ಕುರಿ, ಬಿ.ಆರ್.ಸಿ ಬ್ಯಾಳಿ, ಕಾಮಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಸ್ವಾಗತಿಸಿದರು. ಭವಾನಿ ಕೊಂದುನಾಯಕ ನಿರೂಪಿಸಿದರು. ಎಮ್.ಡಿ.ಹುದ್ದಾರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group