spot_img
spot_img

ಶಿಕ್ಷಣದಲ್ಲಿ ಸತ್ಯ ತಿಳಿಸಲು ಶಿಕ್ಷಕರಲ್ಲಿ ಸತ್ಯ ಜ್ಞಾನವಿರಬೇಕು

Must Read

- Advertisement -

ಸತ್ಯವೇ ದೇವರೆನ್ನುತ್ತಾರೆ ಮಹಾತ್ಮರು.ಸತ್ಯದ ಹಾದಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕ ಸಮಸ್ಯೆಗಳು ಅವಶ್ಯಕವಾಗಿ ಎದುರಾಗುತ್ತವೆ. ಆದರೆ ಪರಮಾತ್ಮನು ಅವರ ಜೀವನ ದೋಣಿಯನ್ನು ಎಂದೂ ಮುಳುಗಲು ಬಿಡುವುದಿಲ್ಲ ಕಾರಣ ಸತ್ಯವೇ ದೇವರು.

ಸತ್ಯ ಹರಿಶ್ಚಂದ್ರನ ಕಥೆ ಸತ್ಯವಾಗಿದ್ದರೂ ಇಂದಿನ ಎಷ್ಟೋ ಜನರಿಗೆ ಇದು ಅಸತ್ಯದ ಕಟ್ಟು ಕಥೆ ಎನಿಸುತ್ತದೆ. ಕಾರಣ ಸತ್ಯವನ್ನು ನುಡಿಯಲಾಗಲಿ, ಸತ್ಯದಲ್ಲಿ ನಡೆಯುವುದಾಗಲಿ ಇಂದು ಬಹಳ ಕಷ್ಟ. ಜೀವ ಭಯ ಎಷ್ಟು ಹೆಚ್ಚಾಗಿದೆ ಎಂದರೆ ‘ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷ ಕಾಲ’ ಎಂದ ದಾಸರ ಕಾಲಕ್ಕಿಂತ ಮುಂದೆ ಬಂದಿರುವ ಮಾನವರಿಗೆ ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಿದ್ದರೂ ಅದನ್ನೂ ಹಣದಿಂದ ಮುಚ್ಚಿ ಹಾಕಿ ಅಸತ್ಯಕ್ಕೆ ಜಯ ತರುವ ಅನ್ಯಾಯಾಧೀಶರ ಕಾಲವಿದೆ.

ಹಾಗಾದರೆ ಸತ್ಯಕ್ಕೆ ಸಾವಿಲ್ಲ,ಸತ್ಯವೇ ದೇವರು ಎನ್ನುವುದು ಸತ್ಯವಲ್ಲವೆ? ಎಲ್ಲಿಯವರೆಗೆ ಮಾನವನಿಗೆ ಸತ್ಯದ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ಜೀವಾತ್ಮನು ಭೌತಿಕ ಸತ್ಯದಲ್ಲಿರುತ್ತಾನೆ. ಇದ್ದೂ ಇಲ್ಲದಂತಿರುವುದು. ಸ್ಥಿತ ಪ್ರಜ್ಞಾವಂತರಾಗಿರುವುದರ ಹಿಂದೆ ಸತ್ಯವಿರುತ್ತದೆ. ಹಿಂದಿನ ಸತ್ಯವನ್ನು ನಂಬಿ ನಡೆದರೆ ಉತ್ತಮ. ಆದರೆ,ಕೆಲವು ವೇಳೆ ಸತ್ಯದ ಆಳ ಅಗಲವನ್ನು ಸ್ಥಿತಿಗೆ ತಕ್ಕಂತೆ ಅರ್ಥ ಮಾಡಿಕೊಳ್ಳಲು ನಮಗೆ ಸಾಮಾನ್ಯಜ್ಞಾನ ಅಗತ್ಯವಾಗಿರುತ್ತದೆ.

- Advertisement -

ಯಾವಾಗ ಮಾನವ ಜ್ಞಾನ ವಿಜ್ಞಾನದ ನಡುವೆ ಸಿಕ್ಕಿಕೊಂಡು ಎರಡು ದೋಣಿಯಲ್ಲಿ ಕಾಲಿಟ್ಟುಕೊಂಡು ದಡ ಸೇರಲು  ಹೋಗುವನೋ ಬಹಳ ಕಷ್ಟವಾದರೂ ಸಮಾನತೆಯ ಮಂತ್ರ  ತಿಳಿಯಬಹುದು.ಎಲ್ಲಿ ಸಮಾನತೆ ಇರುವುದೋ ಅಲ್ಲಿ ಶಾಂತಿ ಇರುತ್ತದೆ. ಎಲ್ಲಿ ಶಾಂತಿ ಇರುವುದೋ ಅಲ್ಲಿ  ದೇವತೆಗಳಿರುತ್ತಾರೆ. ಎಲ್ಲಿ ದೇವರಿರುವರೋ ಅಲ್ಲಿ ಸತ್ಯಕ್ಕೆ ಧರ್ಮಕ್ಕೆ ಬೆಲೆಯಿರುತ್ತದೆ.

ಇಲ್ಲಿ ಬೆಲೆ ಎಂದರೆ ಹಣವಾಗಬಾರದಷ್ಟೆ. ವ್ಯವಹಾರಕ್ಕೆ ಏನನ್ನಾದರೂ ಬಳಸಿದಾಗಲೇ ಲಾಭಕ್ಕಾಗಿ ಸತ್ಯ ಬಿಟ್ಟು  ನಡೆಯಬೇಕು. ರಾಜರಕಾಲ ಹೋಗಿ ಪ್ರಜಾ ಕಾಲದಲ್ಲಿರುವಾಗ ಪ್ರಜೆಗಳ ಸತ್ಯಜ್ಞಾನದಿಂದ ದೇಶ ನಿಲ್ಲಬೇಕಿತ್ತು. ನಮ್ಮ ಶಿಕ್ಷಣದಲ್ಲಿ ಮಕ್ಕಳಿಗೆ ಸತ್ಯ ತಿಳಿಸಿ ನಡೆಸಲು ಶಿಕ್ಷಕರಲ್ಲಿ ಸತ್ಯಜ್ಞಾನವಿರಬೇಕು.  ಪೋಷಕರ ಪ್ರತಿಯೊಂದು ಗುಣ. ಮಕ್ಕಳಿಗೆ ದಿವ್ಯಔಷಧವಾಗಬೇಕಾದರೆ ಪೋಷಕರಲ್ಲಿ ಸತ್ಯ ಇರಬೇಕಿತ್ತು.

ಕಾಲದ ಪ್ರಭಾವಕ್ಕೆ ಒಳಗಾಗಿರುವ ಸತ್ಯ ಇಂದು ಹಿಂದುಳಿದು ಮಿಥ್ಯದ ವಿಜ್ಞಾನ ಜನರೆಡೆಗೆ ಹರಿದು ಬಂದು ಮನೆಯಿಂದ ಮನಸ್ಸನ್ನು ಹೊರಗೆಳೆದು ಅಸತ್ಯ,ಅನ್ಯಾಯ,ಅಧರ್ಮದ ರಾಜಕೀಯ ಹೆಚ್ಚಿಸಿದರೆ ಇದಕ್ಕೆ ಕಾರಣ ನಾನೇ ಸರಿ ಎನ್ನುವ ಅಹಂಕಾರ. ಇದು ನನ್ನೊಳಗಿರೋವಾಗ ಇದನ್ನು ಸರ್ಕಾರ ಸರಿಪಡಿಸಬಹುದೆ ?

- Advertisement -

ಸರ್ಕಾರದ ಲೋಪ ದೋಷಗಳಿಗೆ ಪ್ರಜೆಗಳ ಸಹಕಾರವೇ ಕಾರಣ. ಮಕ್ಕಳ ಲೋಪ ದೋಷಕ್ಕೆ ಪೋಷಕರೆ ಕಾರಣ ಎಂದಾಗ ನಮ್ಮ ಮೂಲದ ಲೋಪದೋಷ ಸರಿಪಡಿಸಲು ಸರ್ಕಾರದ ಹಣ, ಸಾಲ, ಸೌಲಭ್ಯಗಳನ್ನು ಹೇಗೆ ?ಎಷ್ಟು? ಯಾರು? ಯಾವಾಗ? ಯಾಕೆ? ಬಳಸಬೇಕು?ಬಳಸಬಾರದು ಎನ್ನುವ ಜ್ಞಾನ ನಮಗಿದ್ದರೆ ಈಗಿನ ಸಮಸ್ಯೆಗೆ ಪರಿಹಾರ ನಮ್ಮೊಳಗಿರುವ ಸತ್ಯಜ್ಞಾನದಿಂದ ತಿಳಿಯಬಹುದು.ಕಾರಣ ಸತ್ಯವೇ ದೇವರು.

ಸತ್ಯವಿಲ್ಲದ ಕರ್ಮ ,ಧರ್ಮದಿಂದ ಮನುಕುಲದ ಉದ್ದಾರ  ಅಸಾಧ್ಯ ಎನ್ನುವುದು ನಮ್ಮ ಹಿಂದಿನ ಮಹಾತ್ಮರಲ್ಲಿ  ಕಾಣಬಹುದು. ನಾಟಕದಲ್ಲಿ ಸತ್ಯ ಪ್ರದರ್ಶನ ಮಾಡಿದರೆ  ದೇವರಾಗೋದಾದರೆ ಇಂದು ಎಲ್ಲಾ ದೇವರೂ ಮಾಧ್ಯಮದಲ್ಲಿ  ಮುಳುಗಿದ್ದಾರೆ. ಹಾಗಾಗಿ ಮಧ್ಯವರ್ತಿ ಮಾನವ ತನ್ನ ಪಾತ್ರದೊಳಗಿರುವ ಸತ್ಯ ತಿಳಿಯದೆ ಹಣ ಸಿಗೋದಾದರೆ ಹೆಣಕ್ಕೂ ಬೆಲೆಕೊಟ್ಟು ವ್ಯವಹಾರಕ್ಕೆ ಇಳಿದಿರುವುದೆ ವಿಜ್ಞಾನ ಜಗತ್ತಿನ ವಿನಾಶಕ್ಕೆ ಕಾರಣ. ಇಲ್ಲಿ ವಿಜ್ಞಾನ ವಿಲ್ಲದ ಜಗತ್ತಿಲ್ಲ.

ಅದಕ್ಕೂ ಮೀರಿದ ಜ್ಞಾನ ಇಲ್ಲದಿರುವುದರಿಂದ ಜನ್ಮವಿಲ್ಲ. ಜ್ಞಾನವೇ ಶ್ರೇಷ್ಠ. ಜ್ಞಾನದ ನಂತರವೇ ವಿಜ್ಞಾನ. ವಿಜ್ಞಾನ ಎಂದರೆ  ಭೌತಿಕ ಮಾತ್ರವಲ್ಲ. ಆಧ್ಯಾತ್ಮಿಕ ವಿಜ್ಞಾನಿಗಳಾಗಿದ್ದ ಹಿಂದಿನ ಮಹರ್ಷಿಗಳು ಜ್ಞಾನಿಗಳಾಗಿದ್ದು ಅವರ ಆಂತರಿಕ ಸತ್ಯದಿಂದ. ಈಗಿನ ಮಕ್ಕಳ ಒಳಗಿದ್ದ ಸತ್ಯ ಬಿಟ್ಟು ಹೊರಗಿನ‌ ಮಿಥ್ಯವನ್ನು ಒತ್ತಡದಿಂದ ತುಂಬಿ ಕಲಿಸುವ ಶಿಕ್ಷಣದಿಂದಲೇ ಸತ್ಯನಾಶ ಆಗಿರುವಾಗ ಒಳಗೆಳೆದುಕೊಂಡಿರುವ ಅಸತ್ಯವನ್ನು ಹೊರ ಹಾಕುವುದರಿಂದ ಏನಾದರೂ ಲಾಭವಿದ್ದರೆ ಸರಿ.

ಇಲ್ಲವಾದರೆ ಕಷ್ಟ ನಷ್ಟ ಕಟ್ಟಿಕೊಂಡ ಬುತ್ತಿಯಾಗಿರುತ್ತದೆ. ಅಸತ್ಯ ಜಗತ್ತನ್ನು ಆಳಬಹುದು. ತನ್ನ ತಾನು ಆಳಿಕೊಳ್ಳಲು ಸತ್ಯದಿಂದ ಮಾತ್ರ ಸಾಧ್ಯ.ಆಳುವವರೂ ಆಳಾಗೇ ಇರುತ್ತಾರೆನ್ನುವುದೂ ಸತ್ಯವೆ. ರಾಜಯೋಗ ಎಂದರೆ ತನ್ನ ತಾನರಿತು ನಡೆಯೋದಷ್ಟೆ. ಪರರ ಹಿಂದೆ ನಡೆದಷ್ಟೂ ನಮ್ಮತನದಿಂದ ಜೀವ ದೂರ ಆಗುತ್ತದೆ.

ತಿರುಗಿ ನಡೆಯೋದಕ್ಕೆ ಕಷ್ಟವಾಗುತ್ತದೆ.ಹೀಗಾಗಿ ಮಕ್ಕಳಿಗೆ ಮನೆಯಲ್ಲಿಯೇ ಸತ್ಯದ ಕಡೆ ಧರ್ಮದ ಕಡೆ ನಡೆಸುವುದಕ್ಕೆ ಸ್ತ್ರೀ  ಶಕ್ತಿಗೆ ಧರ್ಮಜ್ಞಾನವಿರಬೇಕಿತ್ತು. ಪುರುಷಪ್ರಧಾನ ಸಮಾಜದಲ್ಲಿ  ಸ್ತ್ರೀ ಶಕ್ತಿಯನ್ನು ಆಳಲು ಹೋಗಿ ತಾವೇ ಆಳಾಗಿರುವ ಸತ್ಯ ಇಂದು ತಿಳಿದರೆ ಸಮಸ್ಯೆಗೆ ಕಾರಣದ ಜೊತೆಗೆ ಪರಿಹಾರವೂ ನಮ್ಮಲ್ಲೇ ಅಡಗಿರುತ್ತದೆ.

ಹಿಂದೂ ಧರ್ಮ ಎಂದರೆ ನಮ್ಮ ಹಿಂದಿನ ಗುರು ಹಿರಿಯ ಧರ್ಮ ಕರ್ಮ ತಿಳಿದು ಸದ್ಬಳಕೆ ಮಾಡಿಕೊಂಡು ಸತ್ಯದ ಮಾರ್ಗದಲ್ಲಿ ನಡೆದು ಮಕ್ಕಳನ್ನು ನಡೆಯಲು ಸಹಕರಿಸುವುದಾಗಿತ್ತು. ನಾವೇನು ಕಲಿಸಿದ್ದೇವೆ? ಆತ್ಮಾವಲೋಕನದಿಂದ ಸತ್ಯ ದರ್ಶನವಾಗುತ್ತದೆ. ಮನಸ್ಸು ಮತ್ತು ಆತ್ಮನ ಸೇರುವಿಕೆ ಯೋಗವಾಗುತ್ತದೆ. ಯೋಗ ಮಾಡೋರೆಲ್ಲರೂ ಯೋಗಿ ಆಗೋದಾಗಿದ್ದರೆ ಭಾರತ ಇಂದು ಯೋಗಿಗಳ ದೇಶ ಆಗಿರಬೇಕಿತ್ತು.

ರೋಗಿಗಳ ದೇಶವಾಗೋದಕ್ಕೆ ಕಾರಣವೆ ಮೂಲಧಾರ ಚಕ್ರ ಬಿಟ್ಟು ಸಹಸ್ರಾರದ ವಿಚಾರವನ್ನು ನೇರವಾಗಿ ತಲೆಗೆ ತುಂಬುವ‌ ಕೆಲಸ ಕೆಲವರು ಮಾಡಿದ್ದರೆ ಮತ್ತೆ ಹಲವರಿಗೆ ಚಕ್ರದ ಬಗ್ಗೆ  ಮಾಹಿತಿಯಿಲ್ಲದೆ, ತನ್ನ ಕಾಲಿಗೆ ಚಕ್ರಕಟ್ಟಿಕೊಂಡು ಹೊರಗಿನ ಸತ್ಯ ತಿಳಿಯುತ್ತಾ ಮುಂದೆ ನಡೆದವರಿಗೆ ಒಳಗಿದ್ದ ಸತ್ಯದ ಅರಿವಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪ್ರಜೆಗಳ ಸಾಮಾನ್ಯಜ್ಞಾನ ಎಚ್ಚರವಾದರೆ ವಿಜ್ಞಾನದೊಳಗಿರುವ ರಾಜಕೀಯ ಅರ್ಥ ಆಗಬಹುದು.

ಮಾನವ ಕಾರಣಮಾತ್ರನಾದರೂ ಅವನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ, ಅದರಿಂದ ಅವನಿಗೇ ನಷ್ಟ ಕಷ್ಟವಾದರೆ ಯಾವುದೂ ಸಾಧನೆ ಎನಿಸುವುದಿಲ್ಲ ಎನ್ನುವುದೆ ಪರಮಸತ್ಯ. ಹಿಂದಿನ ದಾಸಾನುದಾಸರು, ಶರಣರು, ತತ್ವ ಜ್ಞಾನಿಗಳು, ಸಂನ್ಯಾಸಿಗಳು, ಸಾಧು ಸಂತರು ಪರಮಾತ್ಮನ ಕಡೆಗೆ ನಡೆದಿದ್ದರು.ನಾವೀಗ ಪರಕೀಯರ ಕಡೆಗೆ ನಡೆಯುತ್ತಾ ಸತ್ಯ ಹುಡುಕಿದರೆ ಸಿಗೋದಿಲ್ಲ.

ಸತ್ಯ ಒಳಗಿತ್ತು. ತಿರುಗಿ ನಡೆದರೆ ಸಿಗಬಹುದು.ಅಂದರೆ ನಮ್ಮ ಮೂಲ ಸ್ವಚ್ಚ ಮಾಡಿಕೊಂಡರೆ ಸ್ವಚ್ಚ ಭಾರತ ಸಾಧ್ಯವಿದೆ. ಇಲ್ಲವಾದರೆ ನಾವೇ ತೋಡಿಕೊಂಡ ಹೊಂಡವೆ ಗತಿ ಹೊಂಡದಿಂದ ಮೇಲೇಳಲು ಬಹಳ ಕಷ್ಟ. ರಾಜಕೀಯ ವಿಚಾ ಬಿಟ್ಟು ರಾಜಯೋಗದ ವಿಚಾರದ ಬಗ್ಗೆ ಗಮನಕೊಟ್ಟರೆ ನಮ್ಮ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಇದ್ದಲ್ಲಿಯೇ ಸಿಗಬಹುದು.

ತುಂಬಾ ದೂರ ನಡೆದವರು ಕಷ್ಟಪಟ್ಟರೆ ತಿರುಗಿ ಬರಬಹುದು. ಹಿಂದಿರುವವರಿಗೆ ತಿಳಿಸಿ ನಡೆಸಬಹುದು.ಆದರೆ ಇದರಲ್ಲಿ ಶುದ್ದ ಸತ್ಯವಿದ್ದರೆ ದೈವತ್ವ. ಮೊದಲು ಮಾನವನಾದರೆ ಮಹಾತ್ಮನಾಗಬಹುದು. ಮಹಾತ್ಮರಿಗೆ ರಾಜಕೀಯದ ಅಗತ್ಯವಿಲ್ಲ. ಅದ್ವೈತ ತತ್ವಕ್ಕೆ ರಾಜಕೀಯ ಬೇಡ. ತತ್ವವನ್ನೇ ತಂತ್ರದಿಂದ ಬಳಸಿದರೆ ಸ್ವತಂತ್ರ ಜ್ಞಾನದ ಕೊರತೆ ಹೆಚ್ಚುತ್ತದೆ.  ಮಂತ್ರ,ತಂತ್ರ, ಯಂತ್ರವಿಲ್ಲದೆ ಭೂಮಿಯಿಲ್ಲ.

ಆದರೆ ಇದರಲ್ಲಿ ಸತ್ಯ, ಧರ್ಮ, ನ್ಯಾಯ ನೀತಿ ಸ್ವತಂತ್ರ ಜ್ಞಾನವಿರಬೇಕು. ಜೀವನ್ಮುಕ್ತಿ ಎಂದರೆ ಪರಮಸತ್ಯದೆಡೆಗೆ ಜೀವ ನಡೆಯೋದಷ್ಟೆ. ಒಂದು ಸಣ್ಣ ಜೀವ ರಕ್ಷಣೆಗೆ ಸರ್ಕಾರ ಬೇಕೆ? ಸಾಲ ಬೇಕೆ? ಸಾಲವೇ ಶೂಲ ಯಾವುದಿದರ ಮೂಲ ? ಸರ್ಕಾರವೇ ಇದರ ಮೂಲ,ಅಜ್ಞಾನವೇ ಇದರ ಮೂಲ. ಪರಿಹಾರ ಶಿಕ್ಷಣದ ಬದಲಾವಣೆಯಲ್ಲಿದೆ. ಸರ್ಕಾರದಿಂದ ಬದಲಾವಣೆ ಸಾಧ್ಯವೆ? ಇಲ್ಲವಾದರೆ ಪ್ರಜೆಗಳಿಂದ ಸಾಧ್ಯ. ನಮ್ಮ ತಪ್ಪಿಗೆ ನಾವೇ ಹೊಣೆಗಾರರು. ಇದೇ ಆತ್ಮಾವಲೋಕನ. ನನಮಗಾಗಿಯಲ್ಲದಿದ್ದರೂಮುಂದಿನ ಪೀಳಿಗೆಗೆ ನಾವು ಸರಿಯಾಗೋ ಪ್ರಯತ್ನಪಟ್ಟರೆ ಪ್ರಯತ್ನಕ್ಕೆ ತಕ್ಕಂತೆ ಫಲ.

ಶ್ರೀಮತಿ ಅರುಣ ಉದಯಭಾಸ್ಕರ್, ಬೆಂಗಳೂರು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group