ಬಾಗಲಕೋಟೆ : ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ದ೦ದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು
ಮುಖ್ಯ ಅತಿಥಿಗಳಾಗಿ ಬಾಗಲಕೋಟ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ ಸಿಬಿ ನಂದನ್ ಆಗಮಿಸಿ ಮಾತನಾಡಿ, ಶಿಕ್ಷಕ ವೃತ್ತಿಯ ಮೌಲ್ಯವನ್ನು ಹೆಚ್ಚಸಿದ ಋಷಿ ಸದೃಶ ವ್ಯಕ್ತಿತ್ವದ ಚಿಂತನೆಯ, ಜ್ಞಾನದಾಹಿಗಳ ಆದಶ೯ ವ್ಯಕ್ತಿತ್ವ ಡಾ. ಸವ೯ಪಳ್ಳಿ ರಾಧಾಕೃಷ್ಣನ್ ಅವರನ್ನು ಸ್ಮರಿಸಿ ನಮಿಸಿ ಶಿಕ್ಷಕ ವೃತ್ತಿಯ ಮೌಲ್ಯಗಳ ಕುರಿತು ಮಾತನಾಡಿದರಲ್ಲದೆ ತಂದೆ ತಾಯಿಯ ಹಾಗೂ ಗುರುವಿನ ಋಣಾತ್ಮಕ ಸಂಬಂಧ ಸಮಾಜದಲ್ಲಿ ಶ್ರೇಷ್ಠವಾದದ್ದು ಜೀವನದಲ್ಲಿ ಬರುವ ಪ್ರತಿಯೊಬ್ಬರೂ “ವರ್ಣಮಾತ್ರಂ ಕಲಿಸಿದಾತ ಗುರು “ಎಂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಭೌತಿಕ ಸಂಸ್ಕಾರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಭಾವಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು
ಸಭೆಯ ಅಧ್ಯಕ್ಷತೆ ಯನ್ನು ಪ್ರಾಚಾರ್ಯ ಡಾಕ್ಟರ್ ಜೆಜಿ ಬೈರಮಟ್ಟಿ ವಹಿಸಿದ್ದರು ಹಿರಿಯ ಉಪನ್ಯಾಸಕ ಸುರೇಶ ಎಸ್ ಆದಾಪುರ ಮಾತನಾಡಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಮತ್ತು ಮೌಲ್ಯಗಳ ಕುರಿತು ಶಿಕ್ಷಣದಲ್ಲಿ ಇವತ್ತಿನ ಯುವಕರು ಅಳವಡಿಸಿಕೊಳ್ಳಬೇಕಾಗಿದೆ ಎಂದರಲ್ಲದೆ ಭವ್ಯ ಭಾರತದ ಭವಿಷ್ಯತ್ತಿನಲ್ಲಿ ವಿದ್ಯಾವಂತ ತತ್ವಜ್ಞಾನಿಗಳು ಸಮಾಜದ ಚಿಂತಕರು ಮೇಧಾವಿಗಳು ದೇಶವನ್ನು ಆಳಬೇಕು ಎಂದಾಗ ಮಾತ್ರ ದೇಶದ ಪ್ರಗತಿ ಪ್ರತಿಯೊಬ್ಬ ಸುಸಂಸ್ಕೃತ ನಾಗರಿಕರು ತಯಾರಾಗುತ್ತಾರೆ ಎಂದು ಅವರು ಹೇಳಿದರು
ಈ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಬಿಬಿ ಬೇವೂರ ಡಾ ಎಸ್ ಬಿ , ಹ೦ಚನಾಳ, ಜಿಎಸ್ ಗೌಡರ, ಡಿ ವೈ ಬುಡ್ಡಿಯವರ ಡಾ ಆದಪ್ಪ ಗೊಡಚಕನವರ ಎನ್ ಬಿ ಬೆನ್ನೂರು ಆರ್ ವಿ ಕರಡಿಗುಡ್ಡ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಕುಮಾರಿ ಕಾವಳ್ಳಿ ಸ್ವಾಗತಿಸಿದರು ಹನುಮಂತ್ ಪೂಜಾರಿ ವಂದಿಸಿದರು ಕುಮಾರಿ ಗೋಚಕ್ನನವರ, ಪರಿಚಯಿಸಿದರು