spot_img
spot_img

ವಿವಿಧ ಬೇಡಿಕೆ ಈಡೇರಿಕೆಗೆ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕೆ ಸಜ್ಜಾದ ಶಿಕ್ಷಕರು

Must Read

- Advertisement -

ಸವದತ್ತಿಃ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕಾ ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿಯವರ ಮೂಲಕ ಶಿಕ್ಷಕ ಸಂಘದಿಂದ ವಿವಿಧ ಬೇಡಿಕೆಗಳ ಕುರಿತು ಶಿಕ್ಷಣ ಸಚಿವರಿಗೆ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ ಈಗಾಗಲೇ ಶಿಕ್ಷಕರ ಪ್ರಮುಖ ಬೇಡಿಕೆಗಳಾದ.ಸಿ ಆ್ಯಂಡ್ ಆರ್ ನಿಯಮ ತಿದ್ದುಪಡಿ,ಎನ್‍ಪಿ.ಎಸ್ ರದ್ದತಿ ,ವರ್ಗಾವಣೆ ಸಮಸ್ಯೆ,ಮುಖ್ಯ ಗುರುಗಳ ಸಮಸ್ಯೆ, ಹಿಂದಿ ಶಿಕ್ಷಕರ ಸಮಸ್ಯೆ,ದೈಹಿಕ ಶಿಕ್ಷಕರ ಸಮಸ್ಯೆ,ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ತರಗತಿಯನ್ನು ಬಹಿಷ್ಕಾರ ಮಾಡಲಾಗಿತ್ತು ಮುಂದುವರೆದು ಇಂದು ಎಲ್ಲ ಶಿಕ್ಷಕ ಶಿಕ್ಷಕಿಯರು ಎಡಗೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ತರಗತಿ ನಡೆಸುತ್ತಿದ್ದು ಇಲಾಖೆಯ ಮುಖ್ಯಸ್ಥರ ಮೂಲಕ ಇಂದು ಮನವಿಯನ್ನು ರಾಜ್ಯದ ಶಿಕ್ಷಣ ಸಚಿವರಿಗೆ ತಲುಪಿಸಲು ನೀಡಿದ್ದು, ಇಂದಿನಿಂದ ಅಕ್ಟೋಬರ್ 29 ವರೆಗೆ ಕಪ್ಪು ಪಟ್ಟಿ ಧರಿಸಿ ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಲಾಗುವುದು ಎಂದು ತಿಳಿಸಿದರು.

ರಾಜ್ಯ ಸಂಘದ ನಿರ್ಣಯದಂತೆ ಜಿಲ್ಲೆಯ ಸಮಸ್ತ ಶಿಕ್ಷಕರು ಈಗಾಗಲೇ ತರಗತಿ ಬಹಿಷ್ಕಾರಕ್ಕೆ ಉತ್ತಮ ಬೆಂಬಲವನ್ನು ನೀಡಿದ್ದಾರೆ.ಈಗ ಅಕ್ಟೋಬರ್ 21 ರಿಂದ 29ರ ವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮುಂದಿನ ಹೋರಾಟಕ್ಕೆ ಶಿಕ್ಷಕರನ್ನು ಸಜ್ಜುಗೊಳಿಸುವುದು. ಆ ಮೂಲಕ ಅಗತ್ಯ ಬೆಂಬಲವನ್ನು ಎಲ್ಲ ಶಿಕ್ಷಕಿಯರು ನೀಡಬೇಕು ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಹೋರಾಟವನ್ನು ಆಯೋಜಿಸಿ ಯಶಸ್ವಿಗೊಳಿಸುವ ಮೂಲಕ ಶಿಕ್ಷಕರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಅನಿವಾರ್ಯವಾಗಿದೆ. ಇದಕ್ಕೂ ಸರ್ಕಾರ/ಇಲಾಖೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟದ ರೂಪುರೇಷೆ ತಿಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್.ಆರ್.ಪೆಟ್ಲೂರ್ ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಫ್ಸಿ ದ್ದನಗೌಡರ, ತಾಲೂಕ ಘಟಕದ ಉಪಾಧ್ಯಕ್ಷರಾದ ಎಂ.ಎಸ್.ಕೋಳಿ, ಅನಸೂಯ ಮದನಬಾವಿ, ಪ್ರಧಾನ ಕಾರ್ಯದರ್ಶಿ ಎಫ್ ಜಿ ನವಲಗುಂದ,ಶ್ರೀಮತಿ ಎಸ್.ಕೆ.ತಳವಾರ, ನಿರಂಜನ ಮೆಳವಂಕಿ, ಐ.ಪಿ.ಕಿತ್ತೂರ,ಎನ್.ಎಸ್. ಪಾಶ್ಚಾಪೂರ, ಎಂ.ಎಸ್.ಹೊಂಗಲ, ಡಾ.ಬಿ.ಕೆ.ಪಡೆಪ್ಪನವರ,ಕಿರಣ ಕುರಿ,ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಮ್ಮಾರ, ಎಂ.ಜಿ.ದೊಡಮನಿ, ಬಿ.ಎನ್.ದೊಡ್ಡಕಲ್ಲನ್ನವರ/ನಡುವಿನ ಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ ಜೋಶಿ,ಶಿಕ್ಷಕರಾದ ಎನ್.ಎನ್.ಕಬ್ಬೂರ, ಗುರುಮಾತೆ ಎ.ಎಂ.ಅಂಕಲಗಿ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group