ಸಿಂದಗಿ: ಶಿಕ್ಷಕರು ಸತತ ಪರಿಶ್ರಮ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿ ಅವರಿಗೆ ಮುಂದಿನ ಶಿಕ್ಷಣಕ್ಕಾಗಿ ದಾರಿ ತೋರುವದರೊಂದಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳುವಂತೆ ಪ್ರೇರಣೆ ನೀಡಬೇಕು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ ಹೇಳಿದರು.
ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಸಿಂದಗಿ 2021 ನೇ ಸಾಲಿನ ಜುಲೈ ತಿಂಗಳಲ್ಲಿ ನಿವೃತ್ತಗೊಂಡಿರುವ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಸಭೆಯ ಅಧ್ಯಕ್ಷ ಸ್ಥಾನವಹಿಸಿ ಅವರು ಮಾತನಾಡಿ ಶಿಕ್ಷಕರ ಜೀವನ ಸ್ವಾರ್ಥ ರಹಿತ ಸೇವಾ ಮನೋಭಾವನೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಮಾನವೀಯ ಮೌಲ್ಯಗಳು ತುಂಬಿ ಸಮಾಜದಲ್ಲಿ ಆದರ್ಶ ವ್ಯಕ್ತಿಯನ್ನಾಗಿ ಮಾಡಿದಾಗ ನಮ್ಮ ಶಿಕ್ಷಕ ವೃತ್ತಿಗೆ ಹೆಚ್ಚು ಗೌರವ ದೊರಕುತ್ತದೆ ಎಂದರು.
ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಎಸ್ ಬಿ ಕಮತಗಿ ಹಾಗೂ ಆನಂದ ಮಾಡಗಿ ಮಾತನಾಡಿ ಸತತ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಮಾರ್ಗದರ್ಶನ ನೀಡಿ ವಯೋ ಮಾನದಿಂದ ನಿವೃತ್ತಿ ಹೊಂದಿದರೂ ಅಪಾರ ವಿದ್ಯಾರ್ಥಿಗಳ ಜೀವನ ರೂಪಿಸಿ ಅವರು ವಿವಿಧ ಹುದ್ದೆಯಲ್ಲಿ ಸೇವೆ ಮಾಡಿದರೂ ತಮ್ಮನ್ನು ಕಂಡ ತಕ್ಷಣ ಅಪಾರ ಗೌರವಿದಿಂದ ಕಾಣುತ್ತಾರೆ ಎಂದರು.
ನಿವೃತ್ತ ಶಿಕ್ಷಕರಾದ ಎಲ್ ಟಿ ಹರಿಜನ .ಎ ಎಂ ಚೌಧರಿ ಸಂಘದ ಪರವಾಗಿ ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿ ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ಪಡೆದು ವಿವಿಧ ಗ್ರಾಮಗಳಲ್ಲಿ ಶಿಕ್ಷಕರಾಗಿ ಉತ್ತಮ ಸೇವೆ ಮಾಡಿರುವದು ಸಂತೋಷವಾದ ವಿಷಯವಾಗಿದೆ , ಶಿಕ್ಷಕರು ದಾನಿಗಳ ಮೂಲಕ ಶಾಲಾ ಅಭಿವೃದ್ದಿ ಪಡಿಸಿವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ನೀಡಿಬೇಕು ಎಂದರು .
ಸಿಂದಗಿ ತಾಲೂಕಿನ ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರೂ ಮತ್ತು ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಅಪಾರ ಸಂಖ್ಯೆಯ ಸ್ನೇಹಿತರು ಹಾಗೂ ಶಿಷ್ಯಂದಿರನ್ನು ಸಂಪಾದಿಸಿ ಎಲ್ಲರೊಂದಿಗೆ ಬೆರೆತು ಸಮೃದ್ಧ ಸೇವೆಯನ್ನು ಮಾಡಿ ನಿವೃತ್ತಿ ಹೊಂದಿರುವ ಆದರ್ಶ ಶಿಕ್ಷಕರಾದ ಎಲ್ ಟಿ ಹರಿಜನ ಮುಖ್ಯಗುರು ಎಚ್ ಪಿ ಎಸ್ ಕೋರಹಳ್ಳಿ, ಶಿಕ್ಷಕಿ ಶ್ರೀಮತಿ ಎಸ್ ಬಿ ಗೆಜ್ಜಲಗಟ್ಟಿ, ಸ ಕ ಹೆ ಹಿ ಶಾಲೆ ಜನತಾ ಕಾಲೂನಿ ಮೋರಟಗಿ, ಟಿ ಪಿ ಹಂಜಗಿ ಸ ಶಿಸ ಹಿ ಪ್ರಾ ಶಾಲೆ ಕಡಣಿ ಎಸ್ ಬಿ ದುದ್ದಗಿ ಮು ಗುಸ ಹಿ ಪ್ರಾ ಶಾಲೆ ಕುಳೆಕುಮಟಗಿ,ಬಿ ಆರ್ ಮಾರದ ಸ ಶಿ ಸ ಕಿ ಪ್ರಾ ಶಾಲೆ ಕಡ್ಲೇವಾಡ, ಪಿ ಎ,ಎ .ಎಂ .ಚೌಧರಿ ಮು ಗು ಎಚ್ ಪಿ ಎಸ್ ನಾಗರಹಳ್ಳಿ, ಪಿ ಎಸ್ ಮ್ಯಾಕೇರಿ ಮು ಗು ಎಂ ಪಿ ಎಸ್ಚಿ ಕ್ಕಸಿಂದಗಿ, ಇವರುಗಳ ವಿಶ್ರಾಂತ ಜೀವನ ಸುಖಕರವಾಗಿರಲಿ. ಭಗವಂತನ ಅನುಗ್ರಹ ಅವರಿಗೆ ದೊರೆಯಲಿ ಎಂದು ಶುಭ ಕೋರುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಶಿಕ್ಷಕರ ಸಂಘದ ಕಾರ್ಯದರ್ಶಿ ರಾಯಪ್ಪ ಇವಣಗಿ ಸ್ವಾಗತಿಸಿದರು.
ಭಾರತ ಸ್ಕೌಟ್ ಮತ್ತು ಗೈಡ್ಸ್ ಕಾರ್ಯದರ್ಶಿ ಬಸವರಾಜ ಸೋಮಪೂರ ನಿರೂಪಿಸಿದರು , ಶಿಕ್ಷಕರ ಸಂಘದ ನಿರ್ದೇಶಕ ಬಸಯ್ಯ ಹಿರೇಮಠ ವಂದಿಸಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕವಯಿತ್ರಿ ಎಸ್ ಎಂ ಮಸಳಿ ಸುಂದರವಾಗಿ ಪ್ರಾರ್ಥನೆ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಕ.ರಾ.ಪ್ರಾ.ಶಾ.ಶಿ.ಸಂಘ. ಸಿಂದಗಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಹಾಗೂ ಬಿ ಆರ್ ಪಿ ಹಾಗೂ ಸಿ ಆರ್ ಪಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.