spot_img
spot_img

ಶಿಕ್ಷಕರು ನೈತಿಕ ಶಿಕ್ಷಣಕ್ಕೆ ಒತ್ತು ನೀಡಬೇಕು – ಶ್ರೀ ಸಿದ್ಧಪ್ರಭು

Must Read

spot_img
- Advertisement -

ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಹೊಸ ಯರಗುದ್ರಿಯ ಶ್ರೀ ಇರಾಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧ ಪ್ರಭು ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹೇಳಿದರು.

ತಾಲೂಕಿನ ಅವರಾದಿಯ ಉದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡಿ ಯಶಸ್ಸು ಸಾಧಿಸಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಯಿಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಸಹಕಾರದೊಂದಿಗೆ ಸಂಸ್ಥೆಯು ಪ್ರಗತಿ ಪಥದತ್ತ ಸಾಗುತ್ತಿದೆ ಎಂದ ಅವರು ಗುಣ್ಣಮಟ್ಟದ ಶಿಕ್ಷಣ ನೀಡಲಿಕ್ಕೆ ಎಲ್ಲ ತರದ ಸೌಲಭ್ಯಗಳನ್ನು ನೀಡಲಾಗುವುದು ಎಂದರು. 

- Advertisement -

ಯಾದವಾಡ ಜಿ.ಪಂ  ಸದಸ್ಯ ಗೋವಿಂದ ಕೊಪ್ಪದ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ್ಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘಿಸಿದರು. 

ಕಲ್ಲಪ್ಪಗೌಡ ಲಕ್ಕಾರ ಮಾತನಾಡಿ, 2005ರಲ್ಲಿ 25 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಉದಯ ಶಾಲೆಯು ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟು ಸದ್ಯ ಶಾಲೆಯು ನಿರೀಕ್ಷೆ ಮೀರಿ ಯಶಸ್ಸು ಸಾಧಿಸಿದೆ ಎಂದರು. 

ಅವರಾದಿ ಗ್ರಾಮ ಪಂಚಾಯತ ಅಧ್ಯಕ್ಷೆ ಸವಿತಾ ಚಂದ್ರಶೇಖರ್ ನಾಯಿಕ ಮಾತನಾಡಿ, ಉದಯ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸರಕಾರಿಯ ವಿವಿಧ ಹುದ್ದೆಯಲ್ಲಿ  ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಮತ್ತು ಈ ಶಾಲೆಯಿಂದ ಪ್ರತಿ ವರ್ಷ ವಿವಿಧ ವಸತಿ ಶಾಲೆಗಳಿಗೆ 20-25 ವಿದ್ಯಾರ್ಥಿಗಳು ಆಯ್ಕೆಯಾಗುತ್ತಿರುವುದು ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸಾಕ್ಷಿ ಎಂದರು.  

- Advertisement -

ಮಾಜಿ ಸೈನಿಕ ಶ್ರೀಶೈಲ ಭಜಂತ್ರಿ ಮಾತನಾಡಿ, ಶಾಲಾ ಶುಲ್ಕವನ್ನು ಸಂದಾಯ ಮಾಡಲು ತೊಂದರೆ ಇದ್ದವರು ನನ್ನ ಸಂಪರ್ಕಿಸಿದರೆ ಅಂತವರ ಸಂಪೂರ್ಣ ಶುಲ್ಕವನ್ನು ನಾನು ಸಂದಾಯ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು. 

ಸಮಾರಂಭದ ವೇದಿಕೆಯಲ್ಲಿ ನಿಂಗಪ್ಪಗೌಡ ನಾಡಗೌಡ, ಎಮ್.ಎಮ್. ಪಾಟೀಲ, ಶಂಕರಗೌಡ ಪಾಟೀಲ,  ಮಹಾದೇವ ನಾಡಗೌಡ, ಗಿರೀಶ ನಾಡಗೌಡ, ಮೋಹನಗೌಡ ನಾಡಗೌಡ್ರ, ಮಲ್ಲಗೌಡ ಪಾಟೀಲ, ಶಾಸಪ್ಪಗೌಡ ಪಾಟೀಲ, ರಾಮಪ್ಪ ಕಾಳಶೆಟ್ಟಿ,  ಗಿರೀಶ ಹಳ್ಳೂರ, ಹನಮಂತ ಪೂಜೇರಿ, ಅಲ್ಲಪ್ಪ ಪಾಟೀಲ, ಮುದಕ್ಕಪ್ಪ ಪಾಟೀಲ, ಸಂಗಯ್ಯ ಮಠಪತಿ, ಮಹಾದೇವ ನಂದೇಪ್ಪನವರ, ವಿ.ಆರ್.ಬರಗಿ, ರಾವುಸಾಬ ನಾಯಿಕ, ವೆಂಕಪ್ಪ ಸೂರನಾಯಿಕ, ತಮ್ಮಣ್ಣೆಪ್ಪ ಪಾಟೀಲ, ಸಂತೋಷ ಮಳ್ಳಿನವರ, ಈರಪ್ಪ ಹುಲಗಬಾಳಿ, ಶಿವಲೀಲಾ ದಳವಾಯಿ, ಮತ್ತಿತರರು ಉಪಸ್ಥಿತರಿದರು. 

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಕೊಠಡಿ, ಗಣಕಯಂತ್ರ ಕೊಠಡಿ ಹಾಗೂ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮವು ನೇರವೇರಿತು. 

ದೇಣಿಗೆ ನೀಡಿದ ಗಣ್ಯರನ್ನು, ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. 

ಶಾಲೆಯ ಮುಖ್ಯ ಶಿಕ್ಷಕ ಎಚ್.ಎಮ್.ಗಸ್ತಿ ಸ್ವಾಗತಿಸಿದರು, ಅಡವೇಶ ಹಂಡಿಬಾಗ ವರದಿವಾಚಿಸಿದರು,  ಮುತ್ತಪ್ಪ ದಂಡಪ್ಪನವರ ಮತ್ತು ಮೌಲಾಸಾಬ ಗುಂಡವಗೋಳ ನಿರೂಪಿಸಿದರು, ಶ್ರೀನಿವಾಸ ಹಿರೇಮಠ ವಂದಿಸಿದರು.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group