spot_img
spot_img

ಸಮಾಜದ ನಿರೀಕ್ಷೆಗಳನ್ನು ಶಿಕ್ಷಕರು ಸುಳ್ಳು ಮಾಡಬಾರದು- ಶಂಭು ಬಳಿಗಾರ

Must Read

- Advertisement -

ಸಿಂದಗಿ: ಸರಕಾರದ ಯಾವುದೇ ವೃತ್ತಿಗಿಂತ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಸಮಾಜ ಎಲ್ಲರನ್ನು ಒಂದು ರೀತಿಯಲ್ಲಿ ನೋಡಿದರೆ ಶಿಕ್ಷಕ ವೃತ್ತಿಯಿಂದ ಅನೇಕ ಸಾಧನೆಯನ್ನು ನಿರೀಕ್ಷೆ ಮಾಡುತ್ತದೆ. ವಿಭಿನ್ನವಾಗಿ ನೋಡುತ್ತದೆ, ಅವರ ನಿರೀಕ್ಷೆಯನ್ನು ಶಿಕ್ಷಕರು ಸುಳ್ಳು ಮಾಡಬಾರದು ಎಂದು ಬಾಗಲಕೋಟೆಯ ಜಾನಪದ ವಿದ್ವಾಂಸ ಡಾ.  ಶಂಭು ಬಳಿಗಾರ ಹೇಳಿದರು.

ಪಟ್ಟಣದ ಗುಂದಗಿ ಪಂಕ್ಷನ್ ಹಾಲನಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ, ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಶಿಕ್ಷಕರ ಅನುಕರಣೆ ಮಾಡುವ ನಿಟ್ಟಿನಲ್ಲಿ ಮಕ್ಕಳ ಎದುರಿಗೆ ಶಿಕ್ಷಕರು ಯಾವುದೇ ಚಟಗಳಿಗೆ ಅಂಟಿಕೊಳ್ಳಬಾರದು. ಸುಂದರ ರಾಷ್ಟ್ರದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದ ಆಗಿದೆ. ನಿವೃತ್ತಿ ಹೊಂದಿದ್ದರೂ ಕೂಡ ಗೌರವ ಹಾಗೂ ಮೌಲ್ಯ ಸಿಗುವ ವೃತ್ತಿ ಎಂದರೆ ಅಂದು ಶಿಕ್ಷಕ ವೃತ್ತಿ ಕಾರಣ ಸಭ್ಯರಾಗಿ ಸಮಾಜ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡು ಜನಮೆಚ್ಚುವ ಶಿಕ್ಷಕನಾದರೆ ಸಾಲದು ಮನಮೆಚ್ಚುವ ಶಿಕ್ಷಕರಾಗಿ ಎಂದು ಸಲಹೆ ನೀಡಿದರು.

- Advertisement -

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಮೇಶ್ ಭೂಸನೂರ ಮಾತನಾಡಿ,  ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸರ್ವಪಲ್ಲಿ ರಾದಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿ ಇಡೀ ಶಿಕ್ಷಕರ ಸಮೂಹವನ್ನು ಗೌರವಿಸುವಂತಾಗಿದೆ. ಗುರು ಪರಂಪರೆಯಿಂದ ನಾನು ವಿದ್ಯೆ, ವಿನಯ ಹಾಗೂ ಸೇವಾ ಮನೋಭಾವ ಕಲಿಯುವಂತದ್ದು. ಶಿಕ್ಷಕ ಎಂದರೆ ಆತ ರಾಷ್ಟ್ರದ ರಕ್ಷಕನಾಗಿ ಕಾರ್ಯ ನಿರ್ವಹಿಸುವ ಯೋಧ. ಸರಕಾರಿ ಪ್ರೌಢ ಶಾಲೆ ಗಳನ್ನು ಮಂಜೂರ ನೀಡಿದ್ದೇನೆ. ಶಾಲಾ ಶಿಕ್ಷಣ ಹಾಗೂ ಅನೇಕ ಕಾರ್ಯಕ್ರಮಗಳಿಗೆ ಗುರು ಭವನದ ಅಗತ್ಯ ಇದೆ. ರೂ.50 ಲಕ್ಷ ವೆಚ್ಚದಲ್ಲಿ ಗುರು ಭವನ ನಿರ್ಮಾಣದ ಗುರಿ ಹಮ್ಮಿಕೊಳ್ಳಲಾಗಿದ್ದು, ಸದ್ಯದಲ್ಲಿ ಭೂಮಿ ಪೂಜೆ ಮಾಡುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೃತ ಶಿಕ್ಷಕರ ಕುಟುಂಬದ ಸದಸ್ಯರಿಗೆ  ಹಾಗೂ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ಮತ್ತು ನಿವೃತ್ತಿ ಹೊಂದಿದ ಶಿಕ್ಷಕರಿಗೆ ಗೌರವಿಸಲಾಯಿತು.

ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆಯ ಎಸ್.ಎಸ್. ಕತ್ನಳ್ಳಿ, ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ತಾಲೂಕು ಪ್ರೌಡ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ್, ನೌಕರರ ಸಂಘದ ಅಧ್ಯಕ್ಷ ಅಶೋಕ್ ತೆಲ್ಲೂರು, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ ಇದ್ದರು.

- Advertisement -

ಕಾರ್ಯಕ್ರಮಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.

ಶಿಕ್ಷಕಿ ಗಿರಿಜಾ ಅಳ್ಳಗಿ ಪ್ರಾರ್ಥನೆ ಗೀತೆ, ಪ್ರಲ್ಹಾದ ಜಿ.ಕೆ. ನಾಡಗೀತೆ ಹಾಡಿದರು. ಶಿಕ್ಷಕ ಜಗದೀಶ್ ಸಿಂಗೆ ರೈತ ಗೀತೆ ಹಾಡಿದರು. ಕ್ಷೇತ್ರ ಸಮನಯ್ವ ಅಧಿಕಾರಿ ಆಯ್.ಎಸ್. ಟಕ್ಕೆ ಸ್ವಾಗತಿಸಿದರು. ಶಿಕ್ಷಕ ರಾಯಪ್ಪ ಇವಣಗಿ, ಶಿಕ್ಷಕ ಪಿ.ಎಸ್. ಅಗ್ನಿ ವಂದಿಸಿದರು.

- Advertisement -
- Advertisement -

Latest News

ಮೂಡಲಗಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ ; ಗಮನ ಸೆಳೆದ ಮಕ್ಕಾ ಮದೀನಾ ರೂಪಕಗಳು

ಮೂಡಲಗಿ: ಮಹಾನ್ ಮಾನವತಾವಾದಿ, ಮಹಾನ್ ಚಾರಿತ್ರ್ಯ ವಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಬಿಟಿಟಿ ಕಮೀಟಿ ಆಯೋಜನೆಯಲ್ಲಿ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು...
- Advertisement -

More Articles Like This

- Advertisement -
close
error: Content is protected !!
Join WhatsApp Group